ಕುಲುಮೆಯಲ್ಲಿ ಕೆಲಸ ಮಾಡುವ ತಂದೆಯ ಮೂವರು ಮಕ್ಕಳು ಈಗ ಉನ್ನತ ಹುದ್ದೆಯಲ್ಲಿದ್ದಾರೆ, ಮಕ್ಕಳ ಅಭ್ಯಾಸಕ್ಕಾಗಿ ತನ್ನ ಸೈಕಲ್ಲ್ ನ್ನೇ ಮಾರಾಟ ಮಾಡಿದ ತಂದೆ …..!
ನಮ್ಮ ಉತ್ತಮ ಭವಿಷ್ಯಕ್ಕಾಗಿ ನಮ್ಮ ತಂದೆ ಯಾವಾಗಲೂ ಶ್ರಮಿಸುತ್ತಿರುತ್ತಾರೆ. ಅವರು ತಮ್ಮ ಬಗ್ಗೆ ಯೋಚಿಸುವ ಬದಲು ತಮ್ಮ ಮಕ್ಕಳ ಕಲ್ಯಾಣದ ಬಗ್ಗೆ ಯೋಚಿಸುತ್ತಾರೆ. ತಮ್ಮ ಮಕ್ಕಳು ಭವಿಷ್ಯದಲ್ಲಿ ಚೆನ್ನಾಗಿ ಬಾಳಬೇಕು ಎಂಬ ಒಂದೇ ಒಂದು ಉದ್ದೇಶದಿಂದ ತಂದೆಯರು ಕಷ್ಟಪಟ್ಟು ದುಡಿಯುತ್ತಾರೆ. ತಂದೆಯು ಮಕ್ಕಳಿಗಾಗಿ ಪಟ್ಟ ಕಷ್ಟದ ಅರಿವು ಮಕ್ಕಳಿಗಿರಬೇಕು. ಈಗಿನ ಎಷ್ಟೋ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯರನ್ನು ಮರೆತು ಬಿಡುತ್ತಾರೆ ಅಲ್ಲದೆ ಅವರ ಕಷ್ಟದ ಜೀವನಕ್ಕೆ ಹೊಣೆ ಯಾಗುತ್ತಾರೆ. ಆದರೆ ಒಬ್ಬ ತಂದೆ ತಾನು ಮನಸ್ಸು ಮಾಡಿದರೆ ತನ್ನ ಮಕ್ಕಳ ಭವಿಷ್ಯಕ್ಕಾಗಿ ಏನಾದರೂ ಮಾಡಿ ತೋರುತ್ತಾನೆ ಅಲ್ಲದೆ ಅವರ ಭವಿಷ್ಯದ ಜೀವನ ಉತ್ತಮ ಗೊಳಿಸಬಹುದು ಅನ್ನೋದಕ್ಕೆ ಈ ತಂದೆಯ ಉದಾಹರಣೆನೆ ಸಾಕ್ಷಿ .
ರಾಜ್‌ಕೋಟ್‌ನ ರಫಾಲ್ ನಿವಾಸಿಯಾದ ಹಂಸರಾಜಭಾಯ್ ಸೋಜಿತ್ರಾ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದರು. ಹಂಸರಾಜಭಾಯ ಮತ್ತು ಪತ್ನಿ ನಂದುಬೆನ್ ಅವರಿಗೆ 3 ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ. ಹಂಸರಾಜಭಾಯ್ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಹಂಸರಾಜಭಾಯ್ ಸ್ವತಃ ಅನಕ್ಷರಸ್ಥರಾಗಿದ್ದರು, ಆದರೆ ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಪಡೆಯಲು ಯಾವುದೇ ಕೊರತೆಯನ್ನು ತೋರಲಿಲ್ಲ.
ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಹಣದ ಉಳಿತಾಯ ಮಾಡುತ್ತಿದ್ದರು. ಒಂದು ಸಮಯದಲ್ಲಿ ಅವರ ಮಕ್ಕಳ ಶಾಲೆಯ ಫೀ ತುಂಬಲು ಹಣವಿರಲಿಲ್ಲ ಆಗ ಅವರು ತಮ್ಮ ಬಳಿಯಲಿದ್ದ ಸೈಕಲ್ ನ್ನು ಮಾರಿ ಅದರಿಂದ ಬಂದ ದುಡ್ಡಿನಿಂದ ಮಕ್ಕಳ ಶಾಲೆಯ ಫೀ ಕಟ್ಟಿದರು. ಅವರು ತಮ್ಮ ಮೂವರು ಮಕ್ಕಳಿಗೆ ತಮಗೆ ಇಷ್ಟವಾದ ಕರಿಯರ್ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು.
ಹಂಸರಾಜಭಾಯ್ ಯವರ ದೊಡ್ಡ ಮಗಳು ನೀರಾಲಿ ಇವಳು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಎಮ್ ಡಿ ಶಿಕ್ಷಣ ಪಡೆದುಕೊಂಡು ನಂತರ ಪಿ ಎಚ್ ಡಿ ಪದವಿ ಸಹ ಪಡೆದುಕೊಂಡಳು. ಸದ್ಯಕ್ಕೆ ಅವಳು ತ್ರೀಪುರ ನಲ್ಲಿ ಸರ್ಕಾರಿ ಭಾರತೀಯ ಅಧಿಕಾರಿ ಹುದ್ದೆಯಲ್ಲಿದ್ದು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಹಂಸರಾಜಭಾಯಯವರ ಚಿಕ್ಕ ಮಗಳು ಸರ್ಕಾರಿ ಮಹಾವಿದ್ಯಾಲಯದಲ್ಲಿಂದ ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್ ಶಿಕ್ಷಣ ಪೂರ್ಣ ಮಾಡಿದಳು ಸದ್ಯಕ್ಕೆ ಅವಳು ಸಹ ಬೆಂಗಳೂರು ನಲ್ಲಿಯ ಒಂದು ದೊಡ್ಡ ಕಂಪೆನಿಯಲ್ಲಿ ಉನ್ನತವಾದ ಹುದ್ದೆಯಲ್ಲಿದ್ದಾಳೆ. ಇಬ್ಬರು ಹುಡುಗಿಯರ ನಂತರ ಚಿಕ್ಕ ಹುಡುಗ ಕೇವೂರ್ ಈತನು ಸಹ ಉಚ್ಚ ಶಿಕ್ಷಣವನ್ನು ಪಡೆದುಕೊಂಡಿದ್ದಾನೆ. ಈತ ವ್ಯವಸ್ಥಾಪನ ಈ ವಿಷಯದಲ್ಲಿ ತನ್ನ ಅಭ್ಯಾಸವನ್ನು ಪೂರ್ಣ ಮಾಡಿದ್ದಾನೆ. ಅಲ್ಲದೆ ಸದ್ಯಕ್ಕೆ ಈತ ಹೆಸರಾಂತ ಕಂಪೆನಿಯಲ್ಲಿ ನೌಕರಿ ಮಾಡುತ್ತಿದ್ದಾನೆ.
” ನಮ್ಮ ತಂದೆಯು ಪಟ್ಟಂತಹ ಕಷ್ಟದ ಫಲವಾಗಿ ಇಂದು ನಾವರಲ್ಲರೂ ಉನ್ನತ ಹುದ್ದೆಯಲ್ಲಿದ್ದೇವೆ. ನಮ್ಮ ತಂದೆ ಜೀವನಪೂರ್ತಿ ನಮ್ಮ ಭವಿಷ್ಯದ ಸಲುವಾಗಿ ತುಂಬಾನೇ ಕಷ್ಟ ಪಟ್ಟಿದ್ದಾರೆ. ಆದರೆ ನಮಗೆ ಯಾವುದೇ ವಸ್ತುವಿನ ಕೊರತೆಯನ್ನು ಎಂದಿಗೂ ಅವರು ತೋರಲಿಲ್ಲ” ಎಂದು ಅವರ ಮೂವರು ಮಕ್ಕಳು ಹೇಳುತ್ತಾರೆ.