ಈ ವಿಡಿಯೋ ಎಡಿಟ್ ಮಾಡಿದವನಿಗೆ ಸಾವಿರ ತೋಪುಗಳ ಸಲಾಮಿ ನೀಡಬೇಕು. ಚಾಲೆಂಜ್! ಈ ವಿಡಿಯೋ ನೋಡಿ ನಗಬಾರದು, ಸಾಧ್ಯನಾ?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಕೆಲವೊಮ್ಮೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಇಂಥ ವಿಡಿಯೋಗಳಲ್ಲಿ ಕೆಲವು ನೈಜವಾಗಿದ್ದರೆ ಇನ್ನೂ ಕೆಲವು ವಿಡಿಯೋಗಳನ್ನು ಇಂಟರ್ನೆಟ್ ಯೂಸರ್ಸ್ ಗಳು ತುಂಬಾ ಚೆನ್ನಾಗಿ ಎಡಿಟ್ ಮಾಡಿ ಕಾಮಿಡಿ ಕಂಟೆಂಟ್ ತಯಾರು ಮಾಡಿರುತ್ತಾರೆ. ಇಂಥ ವಿಡಿಯೋಗಳಿಗೆ ಸ್ವಲ್ಪ ವಾಯ್ಸ್ ಓವರ್ ನೀಡಿರುವುದರಿಂದ ಮತ್ತಷ್ಟು ನಗಿಸುತ್ತವೆ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಒಂದು ತುಂಬಾ ಸಖತ್ ಕಾಮಿಡಿಯಿಂದ ಕೂಡಿದೆ. ಪ್ರಸ್ತುತ ವಿಡಿಯೋದಲ್ಲಿ ಕ್ರಿಕೆಟ್ ನ ಒಂದು ದೃಶ್ಯವಿದೆ. ಈ ದೃಶ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಕ್ರಿಕೆಟ್ ಪಂದ್ಯ ನಡೆದದ್ದು ಕಂಡುಬರುತ್ತದೆ. ಬಾಲರ್ ಬಾಲ್ ಮಾಡಿದ ನಂತರ ಎದುರಿಗೆ ನಮ್ಮ ಪ್ರೀತಿಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಜೋರಾಗಿ ಬ್ಯಾಟ್ ತಿರುಗಿಸುತ್ತಾರೆ. ಅವರ ಬಿರುಸಿನ ಹೊಡೆತದಿಂದಾಗಿ ಬಾಲ್ ಬ್ಯಾಕ್ ಟು ಬಾಲರ್ ಕಡೆಗೆ ಬರುತ್ತದೆ. ಆಗ ಬಾಲರ್ ಲೀಲಾಜಾಲವಾಗಿ ಅದನ್ನು ಒಂದೇ ಕೈಯಲ್ಲಿ ಕ್ಯಾಚ್ ಮಾಡುತ್ತಾನೆ. ಇಲ್ಲಿಂದ ನೋಡಿ ಎಡಿಟರ್ ನ ಕೈಚಳಕ ಶುರುವಾಗುತ್ತೆ.

ಬಾಲರ್ ಸಿಟ್ಟಿನ ಭರದಲ್ಲಿ ಹಿಡಿದ ಕ್ಯಾಚ್ ಅಷ್ಟೇ ರೋಷದಲ್ಲಿ ಅದನ್ನು ಜೋರಾಗಿ ಹವೆಯಲ್ಲಿ ಎಸೆಯುತ್ತಾನೆ. ಮತ್ತೆ ಎಸೆದ ಆ ಚೆಂಡು ನೇರವಾಗಿ ಬೌಂಡರಿ ಹೊರಗೆ ಹೋಗಿ ಬೀಳುತ್ತಿರುವುದು ಕಂಡು ಬರುತ್ತದೆ. ಅಂದರೆ ಒಟ್ಟಿನಲ್ಲಿ ಬಾಲ್ ಡೆಡ್ ಆಗುವ ಮುನ್ನವೇ ಬೌಂಡರಿ ಗೆರೆ ದಾಟಿ ಹೊರಗೆ ಬೀಳುತ್ತದೆ. ಇಲ್ಲಿ ಇಬ್ಬರು ಮಾಜಿ ನಾಯಕರುಗಳು (ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ) ಬಿದ್ದು ಬಿದ್ದು ನಗುವ ದೃಶ್ಯ ಕಂಡು ಬರುತ್ತದೆ.

ವೀಡಿಯೋ ನೋಡಿ

 

View this post on Instagram

 

A post shared by dream_11__ (@game_changer__0987)

ಈ ರೀತಿ ಅದ್ಭುತವಾಗಿ ಎಡಿಟ್ ಮಾಡಿದ ಈ ಅಡ್ವಾನ್ಸ್ ವಿಡಿಯೋವನ್ನು game _changer_0987 ಹೆಸರಿನ ಅಕೌಂಟ್ನಿಂದ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ನಕ್ಕಿದ್ದು ಸಾಕಷ್ಟು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.