ಜಾಗತೀಕರಣದ ಅನುಕೂಲಗಳು ಮತ್ತು ಅನಾನುಕೂಲಗಳು | Advantages and Disadvantages of Globalization in Kannada
ಸಾಮಾನ್ಯ ಭಾಷೆಯಲ್ಲಿ ನೋಡುವುದಾದರೆ, ಜಾಗತೀಕರಣ ಎಂದರೆ ಜ್ಞಾನ, ಮಾಹಿತಿ, ಉತ್ಪನ್ನಗಳು, ಸೇವೆಗಳು ಹಾಗೂ ಕಲ್ಪನೆಗಳನ್ನು ಹರಡುವುದೇ ಆಗಿದೆ. ಆದರೆ ವ್ಯಾಪಾರದ ವಿಷಯ ತೆಗೆದುಕೊಂಡಾಗ ಜಾಗತೀಕರಣ ಎಂದರೆ ಮುಕ್ತ ವ್ಯಾಪಾರ, ವಿಶ್ವದಾದ್ಯಂತ ಬಂಡವಾಳ ಹೂಡಿಕೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಇನ್ನಿತರೇ ವಿಷಯಗಳ ಹಂಚಿಕೆ ಎಂದಾಗುತ್ತದೆ. ಇವತ್ತು ಜಾಗತೀಕರಣದ ಅನುಕೂಲಗಳು ಮತ್ತು ಅನಾನುಕೂಲಗಳು (Advantages and Disadvantages of Globalization) ವಿಷಯದ ಬಗ್ಗೆ ಇಲ್ಲಿ ಮಾಹಿತಿ ತಿಳಿದುಕೊಳ್ಳೋಣ.
ಜಾಗತೀಕರಣದ ಅನುಕೂಲಗಳು ಮತ್ತು ಅನಾನುಕೂಲಗಳು

ಪರಿಚಯ
ಜಾಗತೀಕರಣ ಎಂದರೆ ಒಂದು ದೇಶದ ಆರ್ಥಿಕತೆಯನ್ನು ಪ್ರಪಂಚದ ಇತರ ದೇಶಗಳ ಆರ್ಥಿಕತೆಗಳೊಂದಿಗೆ ಸಂಪರ್ಕಿಸುವುದು, ಇದರಿಂದ ವ್ಯಾಪಾರ ಚಟುವಟಿಕೆಗಳು ಜಾಗತಿಕವಾಗಿ ವಿಸ್ತರಿಸಬಹುದು ಮತ್ತು ದೇಶಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬಹುದು. ಹೀಗಾಗಿ, ಜಾಗತೀಕರಣವನ್ನು ಅಂತರಾಷ್ಟ್ರೀಯೀಕರಣವಾಗಿಯೂ ನೋಡಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಜಾಗತೀಕರಣ ಎಂದರೆ ದೇಶದ ಆರ್ಥಿಕತೆಯನ್ನು ವಿಶ್ವದ ಆರ್ಥಿಕತೆಯೊಂದಿಗೆ ಸಂಯೋಜಿಸುವುದು.
ಜಾಗತೀಕರಣ ಕೇವಲ ಲಾಭ ನಷ್ಟಗಳ ವಿಚಾರಕ್ಕೆ ಮಾತ್ರ ಸೀಮಿತವಾಗಿರದೇ ಸಾಂಸ್ಕೃತಿಕವಾಗಿಯೂ ಸಹ ಹಂಚಿಕೆಯನ್ನು ಒಳಗೊಂಡಿರುತ್ತದೆ, ಹಾಗಾಗಿ ರಾಜ್ಯ ರಾಜ್ಯಗಳ ನಡುವೆ – ದೇಶ ದೇಶಗಳ ನಡುವೆ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಸಹ ಪರಸ್ಪರ ಕೊಡುಕೊಳ್ಳುವಿಕೆ ಹಾಗೂ ಹಂಚಿಕೊಳ್ಳುವಿಕೆಯಿಂದ ಸಂಪರ್ಕ, ಏಕೀಕರಣ ಮತ್ತು ಪರಸ್ಪರ ಅವಲಂಬನೆಯನ್ನು ಹೊಂದಿ ರಾಜ್ಯ ಹಾಗೂ ದೇಶಗಳು ಒಗ್ಗಟ್ಟಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿಯೂ ಸಹ ಪ್ರಬಲಗೊಳ್ಳುತ್ತ ಸಾಗುತ್ತವೆ.
ಜಾಗತೀಕರಣದ ಅನುಕೂಲಗಳು
ಜಗತ್ತಿನ ಯಾವುದೇ ದೇಶಗಳು ಕಡಿಮೆ ವೆಚ್ಚದ ಸಂಪನ್ಮೂಲಗಳು ಮತ್ತು ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮಾಡಲು ಪ್ರೆರೇಪಿಸುತ್ತದೆ ಹಾಗೂ ಅನುಮತಿ ನೀಡುತ್ತದೆ ಕೂಡ. ಹಾಗಾಗಿ ಕಡಿಮೆ ವೆಚ್ಚದಲ್ಲಿ ತಯಾರಾದ ವಸ್ತುಗಳನ್ನು ಜಗತ್ತಿನಾದ್ಯಂತ ಮಾರಾಟ ಮಾಡುವುದರಿಂದ ಲಾಭ ತಾನಾಗೇ ಆಗುತ್ತದೆ, ಅಲ್ಲದೇ ಈ ಕೆಳಗಿನ ಅಂಶಗಳನ್ನು ಸಹ ನೀವು ಗಮನಿಸಬಹುದು.
ಕಡಿಮೆ ಬೆಲೆಯಲ್ಲಿ ಉತ್ತಮ ಉತ್ಪನ್ನ :
ಜಾಗತೀಕರಣ ಸ್ಪರ್ಧೆಯು ಉತ್ಪನ್ನ ಅಥವಾ ಸೇವೆಗಳ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸೃಜನಶೀಲತೆ ಮತ್ತು ಹೊಸತನ್ನು ತಯಾರಿಸಲು ಉತ್ತೇಜನ ನೀಡುತ್ತದೆ.
ಹೋಸ ಉತ್ಪನ್ನಗಳ ಪ್ರವೇಶ :
ಹೊಸ ಮಾರುಕಟ್ಟೆಗಳಲ್ಲಿ ಉತ್ಪನ್ನಗಳು ಅಥವಾ ಸೇವೆಗಳು ಜಾಗತೀಕರಣದ ಸಹಾಯದಿಂದ ಪ್ರವೇಶ ಪಡೆಯಬಹುದು.
ಜೀವನಮಟ್ಟ ಸುಧಾರಣೆ :
ವಿದೇಶಿ ಹೂಡಿಕೆ ಹರಿದು ಬರುವುದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಥಿಕವಾಗಿ ಯಶಸ್ಸು ಸಾಧಿಸಲು ಮತ್ತು ತಮ್ಮ ದೇಶದ ಜನತೆಯ ಜೀವನಮಟ್ಟ ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಅಪ್ಡೇಟೆಡ್ ತಂತ್ರಜ್ಞಾನದ ಲಾಭ :
ಅಭಿವೃದ್ಧಿಶೀಲ ರಾಷ್ಟ್ರಗಳು ತಾಂತ್ರಿಕ ಅಭಿವೃದ್ಧಿ ಮತ್ತು ಜಾಗತಿಕರಣದ ದುಷ್ಪರಿಣಾಮಗಳಿಂದಾಗುವ ತೊಂದರೆಗಳಿಗೆ ಒಳಗಾಗದೇ ಅಪ್ಡೇಟೆಡ್ ತಂತ್ರಜ್ಞಾನದ ಲಾಭ ಪಡೆಯಬಹುದು.
ಜಾಗತೀಕರಣದ ಅನಾನುಕೂಲಗಳು
ಅನೇಕ ಅರ್ಥ ಶಾಸ್ತ್ರಜ್ಞರು ಜಾಗತೀಕರಣವನ್ನು ಮೂಲಭೂತ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಸಾಧನವಾಗಿ ಬಿಂಬಿಸಿದ್ದಾರೆ, ಆದರೆ ಕೆಲವು ವಿಮರ್ಶಕರು ಇದರಿಂದ ಜಾಗತಿಕ ಅಸಮಾನತೆ ಹೆಚ್ಚುತ್ತಿದೆ ಎನ್ನುತ್ತಾರೆ.
ನಿರುದ್ಯೋಗ :
ಹೊರಗುತ್ತಿಗೆಯಿಂದಾಗಿ ಒಂದು ದೇಶದ ಜನತೆಗೆ ಉದ್ಯೋಗ ಒದಗಿಸಿದರೆ ಮತ್ತೊಂದು ದೇಶದ ಜನತೆಯ ಉದ್ಯೋಗವನ್ನು ಕಸಿದುಕೊಳ್ಳುವುದರಿಂದ ಆ ದೇಶದ ಜನತೆ ನಿರುದ್ಯೋಗಿಗಳಾಗುತ್ತಾರೆ.
ವೈರಸ್ ಹರಡುವ ಭೀತಿ :
ಹಲವಾರು ರೀತಿಯ ರೋಗಗಳು ಜಾಗತೀಕರಣದ ಪರಿಣಾಮವಾಗಿ ಹರಡಿ ಸ್ಥಳೀಯವಲ್ಲದ ಪರಿಸರದಲ್ಲಿಯೂ ಸಹ ವಿನಾಶವನ್ನುಂಟು ಮಾಡುವ ಸಾಧ್ಯತೆಗಳಿವೆ.
ಸಂಸ್ಕೃತಿಗೆ ಅಪಾಯ :
ವೈವಿದ್ಯಮಯ ಸಂಸ್ಕೃತಿಗಳ ಜನತೆ ಸಂಪರ್ಕಕ್ಕೆ ಬಂದಾಗ ಸಾಂಸ್ಕೃತಿಕ ಗುರುತುಗಳು ಕಣ್ಮರೆಯಾಗುತ್ತದೆ ಎಂಬ ಭಯವಿದೆ.
ಪರಿಸರಕ್ಕೆ ಅಪಾಯ :
ಅಂತಾರಾಷ್ಟ್ರೀಯ ನಿಯಂತ್ರಣ ಕನಿಷ್ಠವಾಗಿರುವುದರಿಂದ ಮಾನವ ಮತ್ತು ಪರಿಸರ ಸುರಕ್ಷತೆಯ ವಿಷಯದಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.
Conclusion
ಜಾಗತೀಕರಣವು ಅನೇಕ ಕ್ಷೇತ್ರಗಳಲ್ಲಿ, ಹಾಗೆಯೇ ಜಾಗತೀಕರಣವು ಕೆಲವು ಋಣಾತ್ಮಕ ಅಂಶಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವು: ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಹೆಚ್ಚಿನ ಪ್ರತಿಭೆಗಳ ಹೊರಹರಿವು ಇರುವುದರಿಂದ, ಅಭಿವೃದ್ಧಿ ಹೊಂದಿದ ದೇಶಗಳಿಂದ ಪ್ರತಿಭಾ ಪಲಾಯನ ಸಮಸ್ಯೆಯು ವೇಗವಾಗಬಹುದು. ಅಂತೆಯೇ, ಅಭಿವೃದ್ಧಿ ಹೊಂದಿದ ದೇಶಗಳಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾಹಿತಿಯ ಏಕಮುಖ ಹರಿವು ಸ್ಥಳೀಯ ಮತ್ತು ಸಾಂಪ್ರದಾಯಿಕ ಜ್ಞಾನ ಮತ್ತು ಮೌಲ್ಯಗಳಿಗೆ ಧಕ್ಕೆ ತರಬಹುದು. ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು ಒದಗಿಸುವ ಶಿಕ್ಷಣದಲ್ಲಿ ಬೋಧನಾ ಮಾಧ್ಯಮವಾಗಿ ಇಂಗ್ಲಿಷ್ಗೆ ಹೆಚ್ಚಿನ ಒತ್ತು ನೀಡುವುದರಿಂದ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಜನಪ್ರಿಯಗೊಳಿಸುವ ಇತ್ತೀಚಿನ ಪ್ರಯತ್ನಗಳಿಗೆ ಹಾನಿಯಾಗಬಹುದು. ಆದರೆ ಈ ನೆಗೆಟಿವ್ ಪಾಯಿಂಟ್ ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದರೆ, ಈ ದೃಷ್ಟಿಯಿಂದಲೂ ಜಾಗತೀಕರಣವನ್ನು ದೇಶಕ್ಕೆ ವರವಾಗಿ ಮಾಡಬಹುದು.
ನಮ್ಮ ಇಂದಿನ ಲೇಖನ ಜಾಗತೀಕರಣದ ಅನುಕೂಲಗಳು ಮತ್ತು ಅನಾನುಕೂಲಗಳು ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

