New 200+ Love Quotes in Kannada | 200+ ಪ್ರೀತಿಯ ಸಂದೇಶಗಳು

Love Quotes in kannada

Love Quotes in Kannada: ಪ್ರೀತಿ ಅಥವಾ ಪ್ರೇಮ ಎನ್ನುವುದು ಒಂದು ಭಾವನೆ, ಇದು ಮನಸ್ಸಿನಿಂದ ಅಲ್ಲ ಹೃದಯದಿಂದ ಬರುತ್ತದೆ. ಪ್ರೀತಿ ಸ್ನೇಹದಿಂದ ಕ್ರಮೇಣ ಪ್ರೀತಿಯ ಕಡೆಗೆ ಸಾಗುತ್ತದೆ. ಇದು ಬಲವಾದ ಆಕರ್ಷಣೆ ಮತ್ತು ವೈಯಕ್ತಿಕ ಸಂಪರ್ಕದ ಭಾವನೆಯಾಗಿದ್ದು ಅದು ನಿಮ್ಮನ್ನು ಎಲ್ಲವನ್ನೂ ಮರೆತು ಅವರೊಂದಿಗೆ ಹೋಗುವಂತೆ ಮಾಡುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸುಲಭವಾಗಲೆಂದು  ನಾವು ನಿಮಗೆ Love Quotes in Kannada ಎಂಬ ಕನ್ನಡ ಪ್ರೀತಿಯ ಸಂದೇಶಗಳನ್ನು ಇಲ್ಲಿ ತಂದಿದ್ದೇವೆ.

Love Quotes in Kannada

Love quotes in kannada

ಬಯಸಿದೆ ನಾ ನಿನ್ನನು
ಬದಲಾಯಿಸಿದೆ ನೀ ನನ್ನನು
ನೀ ಹೇಳಿದೆ ಮಾತೊಂದನು
ನಾನಾದೆ ನಿನ್ನವನು…

Love quotes in kannada

ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ
ನನ್ನ ಪ್ರೀತಿ ಮೋಹದ ಮಾಯೆಯಲ್ಲ
ನಿನ್ನ ನಂಬಿಕೆಯ ಛಾಯೆ…!

Love quotes in kannada

ಕೆಲವರಿಗೆ ಪ್ರೀತಿ ಎಂದರೆ ಅನುಮಾನ
ಕೆಲವರಿಗೆ ಅದು ಸಂಬಂಧ
ಕೆಲವರಿಗೆ ಅದು ಸೆಂಟಿಮೆಂಟ್
ಆದರೆ ನನಗೆ ಅದೊಂದು ಪುಟ್ಟ ಜಗತ್ತು

Love quotes in kannada

ನಿನ್ನ ಪ್ರೀತಿಸಲು ಕಲಿತ ಹೃದಯ
ನಿನ್ನನ್ನು ಮರೆಯುವ ಕನಸನ್ನು ಯಾಕೆ ಕಾಣಲಿಲ್ಲ?
ಏಕೆಂದರೆ ನನಸಾಗದ ಕನಸಿಗಾಗಿ ಹಗಲಲ್ಲಿ
ಕನಸು ಕಾಣುತ್ತಿರುವ ಪೆದ್ದ ನಾನು

Love quotes in kannada

ಹೃದಯದಲ್ಲಿ ನೀ ಬರೆದ ಬರವಣಿಗೆ
ಮಾಡುತ್ತಿದೆ ನಮ್ಮ ಪ್ರೀತಿಯ ಮೆರವಣಿಗೆ

Love quotes in kannada

ಪ್ರೀತಿ ಇಲ್ಲದ ಮೇಲೆ ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?
ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ

Love quotes in kannada

ಪ್ರೀತಿಸುವುದು ಹಾಗೂ ಮತ್ತೊಬ್ಬರಿಂದ
ಪ್ರೀತಿಯನ್ನು ಪಡೆಯುವುದು ಪ್ರಪಂಚದಲ್ಲಿ
ನಿಜವಾದ ಸಂತೋಷ

ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ
ನಿಮ್ಮ ಕೋಪವನ್ನು ಅಳಿಸಿ ಹಾಕುತ್ತದೆ

Love quotes in kannada

ಗುಲಾಬಿಯಲ್ಲಿ ಮುಳ್ಳು ಜಾಸ್ತಿ
ಸಮುದ್ರದಲ್ಲಿ ನೀರು ಜಾಸ್ತಿ
ನನಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ

Love quotes in kannada

ಪ್ರೀತಿಸುವ ವ್ಯಕ್ತಿಯನ್ನು ಭೇಟಿಯಾದಾಗ
ಪರಸ್ಪರ ನಗುತ್ತಾ ಭೇಟಿ ಮಾಡೋಣ
ಏಕೆಂದರೆ, ನಗು ಪ್ರೀತಿಯ ಶುರುವಾಗಿರುತ್ತದೆ

Love quotes in kannada

ಕಾದು ಕುಳಿತಿರುವೆ ಗೆಳತಿ ನಿನ್ನ ನೋಡಲು ಅಲ್ಲ
ಸಿಗದ ನಿನ್ನ ಪ್ರೀತಿಯ ತುಸು ಮಾತಿಗೆ
ಹುಚ್ಚು ಪ್ರೀತಿಯ ಪೆದ್ದು ಮನಸ್ಸು

Love quotes in kannada

ನೀವು ಪ್ರೀತಿಸಿದವರ ಹೃದಯ ಕಲ್ಲು
ಎಂದು ಗೊತ್ತಾದ ಮೇಲೆ ಯಾವತ್ತೂ
ಅವರಿಂದ ದೂರ ಆಗಬೇಡಿ.
ಯಾಕೆಂದರೆ ಕಲ್ಲಿನ ಮೇಲೆ ಬರೆದ
ಹೆಸರು ಯಾವತ್ತೂ ಅಳಿಸಲ್ಲ

Love quotes in kannada

ಪ್ರೀತಿ ಇಲ್ಲದ ಜಗತ್ತು
ಸೂರ್ಯನಿಲ್ಲದ ಆಕಾಶದ ಹಾಗೆ

Love quotes in kannada

ನಗುವ ಕಂಗಳ ಹಿಂದೆ ಕಣ್ಣೀರು
ಕೋಪದಿಂದ ಇರುವ ಕಣ್ಣುಗಳ ಹಿಂದೆ ಪ್ರೀತಿ
ಗೆಲುವಿನ ಕಣ್ಣುಗಳ ಹಿಂದೆ ಪರಿಶ್ರಮ
ಇರುತ್ತದೆ ಅನ್ನೋದು ನೆನಪಿರಲಿ

Love quotes in kannada

ಕ್ಷಣ ಮಾತ್ರವು ನಿನ್ನನ್ನು ಅಗಲಿ ಇರಲು
ಅರಿಯದ ಈ ಜೀವ…
ನೀನಿರದೆ ಉಸಿರಿಹುದು : ಹೃದಯ ನಿರ್ಜೀವ

Love quotes in kannada

ಪ್ರೀತಿ ಎಂದರೆ ನನ್ನ ಕನಸುಗಳು
ನಿನ್ನ ಕನಸುಗಳ ಜೊತೆಗೆ ಸೇರಿಕೊಂಡಾಗ

Love quotes in kannada

ಹೃದಯವನ್ನು ಪ್ರವೇಶಿಸಲು ದಾರಿ ಇದೆ
ಆದರೆ ಹೃದಯದಿಂದ ಹೊರ ಹೋಗಲು
ದಾರಿ ಇಲ್ಲ… ಈ ಕಾರಣಕ್ಕೆ ಒಮ್ಮೆ ಕಾಲಿಟ್ಟ
ಹೃದಯವನ್ನು ಎಂದಿಗೂ ಒಡೆಯಬೇಡಿ

ನನ್ನನ್ನು ಮರೆತ ನಿನಗೆ ನನ್ನ ನೆನಪಾಗಲಿಲ್ಲ
ಜಗವನ್ನೇ ಮರೆತ ನನಗೆ ನಿನ್ನನ್ನು ಮರೆಯಲಾಗಲಿಲ್ಲ

Love quotes in kannada

ನಿನ್ನನ್ನ ನಿನ್ನ ಪಾಡಿಗೆ ಬಿಟ್ಟಿದ್ದೀನಿ ಅಂದ್ರೆ
ನನಗೆ ನಿನ್ನ ಮೇಲೆ ಪ್ರೀತಿ ಕಡಿಮೆ ಆಗಿದೆ ಅಂತ ಅಲ್ಲ
ನನ್ನ ಪ್ರೀತಿಯಿಂದ ನಿನಗೆ ಹಿಂಸೆ ಆಗದೆ ಇರಲಿ ಅಂತ

Love quotes in kannada

ಕಾದಿರುವೆ ನಿನಗಾಗಿ
ನೀನೆಂದು ಬರುವೆ ನನಗಾಗಿ…?

Love quotes in kannada

ಪ್ರೀತಿ ಎಂಥ ಪವಾಡ ಎಂದರೆ,
ಮೊದಲ ನೋಟದಲ್ಲೇ ಒಬ್ಬರ ಜೊತೆಗೆ
ಪ್ರೀತಿಯಲ್ಲಿ ಬೀಳಬಹುದು

Love quotes in kannada

ನಾವು ಪ್ರೀತಿಸುವ ವ್ಯಕ್ತಿಗೆ ಪ್ರತಿದಿನ
I Love You ಅಂತ ಹೇಳಬೇಕಿಲ್ಲ
ಮನಸ್ಸಲ್ಲಿ 100 ಸಲ I Love You ಅಂತ
ಹೇಳಿದರೂ ಆ ಮಾತು ಪ್ರೀತಿಸುವ ವ್ಯಕ್ತಿಯ
ಮನಸ್ಸಿಗೆ ತಲುಪುತ್ತದೆ… ಅದೇ ನಿಜವಾದ ಪ್ರೀತಿ

Love quotes in kannada

ಪ್ರಪಂಚಕ್ಕೆ ನೀನೊಬ್ಬ ವ್ಯಕ್ತಿ ಮಾತ್ರ
ಆದರೆ ನನಗೆ ನೀನೇ ಪ್ರಪಂಚ…

Love quotes in kannada

ನನ್ನ ಪ್ರೀಮಿಯಾಗುತ್ತೀಯಾ?
ನನ್ನ ಉಸಿರು ಇರೋವರೆಗೂ
ನಿನ್ನನ್ನು ಕಾಪಾಡುತ್ತೇನೆ

Love quotes in kannada

ಮದುವೆ ಅನ್ನೋದು ಜಗತ್ತಿಗೆ ಸಾಕ್ಷಿ
ಆದರೆ… ಪ್ರೀತಿ ಅನ್ನೋದು ನಮ್ಮಿಬ್ಬರ
ಮನಸ್ಸಿಗೆ ಸಾಕ್ಷಿ…

Love quotes in kannada

ಆಳವಾಗಿ ಪ್ರೀತಿಸುವ ವ್ಯಕ್ತಿಯನ್ನು
ತಡೆಯಲು ಯಾರಿಂದಲೂ ಸಾಧ್ಯವಿಲ್ಲ

Love quotes in kannada

ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ
ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ

Love quotes in kannada

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಹೃದಯವಿಲ್ಲ
ಕಣ್ಣೀರಿಲ್ಲದ ಕಣ್ಣುಗಲಿಲ್ಲ
ಕನಸಿಲ್ಲದ ಮನಸಿಲ್ಲ
ನಿನ್ನ ನೆನಪಿಲ್ಲದೆ ಹೃದಯವಿಲ್ಲ

Love quotes in kannada

ಅರಳುವ ಕನಸಿಗೆ ನೀನೇ ರಾಯಭಾರಿ
ಅರಳಿದ ಕನಸಿಗೆ ನೀನೇ ರೂವಾರಿ

Love quotes in kannada

ಕಣ್ಣು ಮುಚ್ಚಿದರೂ,
ಕಣ್ಣು ಬಿಟ್ಟರೂ ನೀನೇ ಕಾಣುವೆ
ಈ ದೇಹದಲ್ಲಿ ಕೊನೆಯ ಉಸಿರು ಇರೋತನಕ
ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ
ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ..

ಫ್ರೆಂಡ್ಸ್ ನಾವು ತಿಳಿಸಿದ Love Quotes in Kannada ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ