ಮದುವೆಯ 8 ದಿನಗಳಲ್ಲೇ ಗಂಡನನ್ನು ಬಿಟ್ಟು ತವರು ಮನೆಗೆ ಹೋದವಳ ಕಥೆ; ಗಂಡ ಮರಳಿ ಕರೆತರಲು ಹೋದಾಗ ನಡೆದದ್ದೇ ಬೇರೆ..!!
ರಾಹುಲ್ ಕೋಪದಿಂದ ಮಾತನಾಡುತ್ತಿದ್ದ, ಹಾಲ್ ನಲ್ಲಿ ಎಲ್ಲರೂ ತುಟಿ ಬಿಚ್ಚದೆ ಸುಮ್ಮನೆ ಕುಳಿತಿದ್ದರು. ನೇಹಾ ಮಾತ್ರ ತಲೆ ಕೆಳಗೆ ಹಾಕಿ ಬಿಕ್ಕಳಿಸುತ್ತ ಅಳುತ್ತಿದ್ದಳು. ನೇಹಾಳ ತಂದೆ ರಾಹುಲ್ ನಿಗೆ ಕೈ ಜೋಡಿಸಿ ವಿನಂತಿಸುತ್ತಿದ್ದರು, ಅಳಿಮಯ್ಯ ದಯವಿಟ್ಟು ನನಗೆ ಕ್ಷಮಿಸಿ…ಇಷ್ಟೆಲ್ಲಕ್ಕೆ ನಾನೇ ಕಾರಣನಾಗಿದ್ದೇನೆ, ಮಗಳಿಗೆ ಕೊಡುವ ಸಂಸ್ಕಾರದಲ್ಲಿ ನಾನೇ ಎಲ್ಲೋ ಕಡಿಮೆ ಬಿದ್ದಿದ್ದೇನೆ ಎನ್ನುವಾಗ ಅವರ ಕಣ್ಣಿನಲ್ಲಿ ಅಪರಾಧಿ ಪ್ರಜ್ಞೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವರ ಕಡೆ ನೋಡಿದಾಗ ರಾಹುಲ್ ನಿಗೂ ಸಹಿತ ಕೆಡುಕೆನಿಸಿತು. ಹಾಗೆ ನೋಡಲಾಗಿ ಇದರಲ್ಲಿ ಅವರ ತಪ್ಪೇನು ಇರಲಿಲ್ಲ, ಆದರೂ ಮಗಳು ಮಾಡಿದ ತಪ್ಪಿಗೆ ಶಿಕ್ಷೆ ಮಾತ್ರ ಅವರು ಅನುಭವಿಸುತ್ತಿದ್ದರು. ‘ಇಲ್ಲ ಮಾವಯ್ಯ ದೋಷ ನಿಮ್ಮೊಬ್ಬರದಷ್ಟೇ ಇಲ್ಲ, ಮಕ್ಕಳಿಗೆ ಸಂಸ್ಕಾರ ತಂದೆ ಮತ್ತು ತಾಯಿ ಇಬ್ಬರಿಂದಲೂ ದೊರೆಯುತ್ತದೆ. ಆದರೆ ವಿಶೇಷವಾಗಿ ಹುಡುಗಿಯರ ವಿಷಯದಲ್ಲಿ ಹುಡುಗಿಯ ತಾಯಿ ಆಕೆಯ ಗೆಳತಿಯಾಗಿ, ಆಕೆಯ ಸಹವರ್ತಿಯಾಗಿ, ಆಕೆಯ ಸಮಸ್ಯೆಗಳನ್ನು, ಭಾವನೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಬಗೆಹರಿಸಲು ಸಹಾಯ ಮಾಡುವ ಮಹತ್ವದ ಪಾತ್ರವನ್ನು ತಾಯಿಯಾದವಳು ಮಾಡಬೇಕು’.

‘ನೇಹಾಳ ವಯಸ್ಸಿನ ಪ್ರಕಾರ ಆಕೆಯ ಮನಸ್ಸು ಈಗ ಚಂಚಲವಾಗಿದೆ. ಈ ವಯಸ್ಸಿನಲ್ಲಿ ಹುಡುಗಿಯರು ಹುಡುಗರ ಕಡೆಗೆ ಆಕರ್ಷಿತರಾಗುವದು ಸಹಜ. ಈ ಸಂದರ್ಭದಲ್ಲಿ ಹುಡುಗಿಯರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಸಂಪೂರ್ಣ ಕರ್ತವ್ಯ ತಾಯಿಯದಾಗಿರುತ್ತದೆ. ನನ್ನ ಪ್ರಕಾರ ಈ ವಿಷಯದಲ್ಲಿ ನೇಹಾಳು ಎಷ್ಟು ತಪ್ಪಿತಸ್ಥಳಾಗಿದ್ದಾಳೆಯೋ ಅದಕ್ಕಿಂತ ಹೆಚ್ಚು ತಪ್ಪು ನಿಮ್ಮದಾಗಿದೆ ಅತ್ತೆಮ್ಮ….! ನಿಮಗೆ ಈ ಎಲ್ಲ ವಿಷಯಗಳು ಗೊತ್ತಿದ್ದೂ ಗೊತ್ತಿಲ್ಲದಂತೆ ದುರ್ಲಕ್ಷ ಮಾಡಿದಿರಿ. ನೀವು ನಿಮ್ಮ ಮಗಳಿಗೆ ಯೋಗ್ಯ ಮಾರ್ಗದರ್ಶನ ಮಾಡಬೇಕಿತ್ತು, ಮತ್ತು ಸಮಯ ಸಂದರ್ಭ ನೋಡಿಕೊಂಡು ಮಾವಯ್ಯನ ನಿದರ್ಶನಕ್ಕೆ ತರುವ ಹೊಣೆ ನಿಮ್ಮದಾಗಿತ್ತು’.
ಇರಲಿ, ‘ನಿಮಗೆ ಯಾವ ನಿರ್ಣಯ ತೆಗೆದುಕೊಳ್ಳಬೇಕೋ ಅದನ್ನು ನೀವು ತೆಗೆದುಕೊಳ್ಳಿ, ಮತ್ತು ನನಗೆ ತಿಳಿಸಿ ನಾನು ಸದ್ಯಕ್ಕೆ ಹೊರಡುತ್ತೇನೆ’ ಎಂದು ಹೇಳಿ ರಾಹುಲ್ ಹೊರಡಲು ಅಣಿಯಾದ. ಅಷ್ಟರಲ್ಲೇ ನೇಹಾಳ ತಂದೆ ರಾಹುಲ್ ನಿಗೆ ಕೈ ಜೋಡಿಸಿ ಅವನನ್ನು ತಡೆಯುತ್ತ, ಅಳಿಮಯ್ಯ ಸ್ವಲ್ಪ ನಿಲ್ಲಿ, ನಮ್ಮ ತಪ್ಪನ್ನು ತಿದ್ದಿಕೊಳ್ಳುವ ಒಂದು ಸಂಧಿಯನ್ನು ದಯಪಾಲಿಸಿ. ನಿಮ್ಮಂತಹ ಅಳಿಯ ಸಿಗಬೇಕಾದರೆ ದೇವರಿಗೆ ಹರಕೆ ಹೊತ್ತರೂ ಕಷ್ಟ. ಆದರೆ ನನ್ನ ಮಗಳಿಗೆ ಇದರ ಬಗ್ಗೆ ಎಳ್ಳಷ್ಟೂ ಚಿಂತೆ ಇಲ್ಲ, ಈ ವಿಷಯದ ಬಗ್ಗೆ ನನಗೆ ದುಃಖವೆನಿಸುತ್ತೆ. ನೇಹಾಳ ತಂದೆ ನೇಹಾಳ ಕಡೆಗೆ ನೋಡುತ್ತಾ ಹೇಳಿದರು, ‘ನೇಹಾ ಈಗ ನೀನು ಏನು ಮಾಡಬೇಕೆಂದಿರುವೆ’? ನೇಹಾ ಅಳುತ್ತಿದ್ದರೂ ಸಹ ಅವಳ ಕಣ್ಣಿನಲ್ಲಿ ಮಾತ್ರ ಅಪಾರಾಧಿಯ ಭಾವನೆ ಎದ್ದು ಕಾಣುತ್ತಿತ್ತು. ‘ಅಪ್ಪ, ನನಗೆ ದಯವಿಟ್ಟು ಕ್ಷಮಿಸು, ನನ್ನ ಕಡೆಯಿಂದ ತುಂಬಾ ದೊಡ್ಡ ತಪ್ಪಾಗಿದೆ, ನೀವು ತೆಗೆದುಕೊಂಡ ಯಾವ ನಿರ್ಣಯವನ್ನು ನಾನು ಒಪ್ಪುತ್ತೇನೆ….’ ಎಂದಾಗ ನೇಹಾಳ ತಂದೆ, ‘ಇಲ್ಲ…ಈಗ ನಿರ್ಣಯ ನಿನಗೆ ತೆಗೆದುಕೊಳ್ಳಬೇಕಾಗಿದೆ’ ಎಂದರು.
‘ನಾವು ತೆಗೆದುಕೊಳ್ಳಬೇಕಾದ ನಿರ್ಣಯವನ್ನು ಬೇರೊಬ್ಬರ ಮೇಲೆ ಬಿಟ್ಟು ಬಿಡುವದರಿಂದ ಅದರ ಪರಿಣಾಮವೇನಾಗತ್ತದೆ ಎಂಬುದರ ಅರಿವು ನನಗಾಯಿತು’ ಎಂದು ನೇಹಾ ಅಳುತ್ತಾ ತನ್ನ ತಂದೆಗೆ ಹೇಳಿದಳು. ‘ಅಪ್ಪ, ನನ್ನಿಂದ ತಪ್ಪಾಗಿದೆ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಈ ತಪ್ಪು ಕೊನೆಯ ತಪ್ಪೆಂದು ತಿಳಿಯುತ್ತೇನೆ, ಆದ್ದರಿಂದ ನನಗೆ ಒಂದೇ ಒಂದು ಸಲ ಕ್ಷಮಿಸಿ, ಪ್ಲೀಜ್…ಮತ್ತೊಮ್ಮೆ ಎಂದಿಗೂ ನನ್ನಿಂದ ತಪ್ಪಾಗಲಾರದು, ಅಪ್ಪ ನೀವು ನಿಜವಾಗಿಯೂ ಸರಿಯಾಗಿ ಮಾತಾಡಿದ್ದೀರಿ, ರಾಹುಲ್ ನಂತಹ ತಿಳುವಳಿಕೆಯುಳ್ಳ ಹುಡುಗ ಗಂಡನಾಗಿ ಪಡೆಯಬೇಕಾದರೆ ಹಣೆಬರಹ ಬೇಕು’ ಎಂದು ಹೇಳಿ ರಾಹುಲ್ ನ ಮುಂದೆ ಬಂದು ಕೈ ಜೋಡಿಸಿ ಹೇಳಿದಳು, ‘ರಾಹುಲ್ ನನಗೆ ದಯವಿಟ್ಟು ಕ್ಷಮಿಸು, ನಾನು ನನ್ನ ಸ್ವಂತದ ಸುಖಕ್ಕಾಗಿ ಎಲ್ಲರ ವಿಶ್ವಾಸವನ್ನು ಮಣ್ಣುಗೂಡಿಸಿದೆ. ನನಗೆ ಗೊತ್ತು ನನ್ನ ತಪ್ಪು ಕ್ಷಮಿಸಲಿಕ್ಕೆ ಯೋಗ್ಯವಲ್ಲ, ಅದು ಅಕ್ಷಮ್ಯವಾಗಿದೆ. ಆದರೂ ಆ ತಪ್ಪನ್ನು ತಿದ್ದಲು ಒಂದು ಅವಕಾಶ ನನಗೆ ಕೊಡಿ, ಕೊನೆಯ ತಪ್ಪು ಎಂದು ತಿಳಿದು ಕ್ಷಮಿಸಿ ಪ್ಲೀಜ್ ಪ್ಲೀಜ್…ನನಗೆ ಕ್ಷಮಿಸಿ’ ಎಂದು ಒಂದೇ ಸಮನೆ ಗೋಗರೆದಳು. ‘ಇಲ್ಲ… ನೇಹಾ ಮತ್ತೆ ನೀನು ತಪ್ಪು ಮಾಡುತ್ತಿರುವೆ ನನಗೆ ಇದೆಲ್ಲ ಹಿಡಿಸುವದಿಲ್ಲ’ ರಾಹುಲ್ ಕೋಪದಲ್ಲಿ ಅಂದನು. ರಾಹುಲ್ ಮಾತನಾಡಿದ ಈ ವಾಕ್ಯವನ್ನು ಕೇಳಿ ಎಲ್ಲರೂ ಮೂಕರಾದರು. ನೇಹಾಳ ತಂದೆ ಒಮ್ಮೆಲೇ ಸ್ಥಳದಲ್ಲೇ ಕುಸಿದರು. ಇನ್ನು ನೇಹಾಳ ಜೀವನದಲ್ಲಿ ಏನಾದರೂ ಅನುಚಿತ ಘಟಿಸುವದು ಎಂಬ ಶಂಕೆ ಅವರ ಮನಸ್ಸಿನೆದುರು ನಿಂತಿತು. ನೇಹಾ ರಾಹುಲ್ ಕಡೆಗೆ ನೋಡುತ್ತಾ ನಿಂತಿದ್ದಳು. ಮುಖಕ್ಕೆ ಯಾರಾದರೂ ಜೋರಾಗಿ ಕಪಾಳಮೋಕ್ಷ ಮಾಡಿದ ಹಾಗೆ ನೇಹಾಳ ಅನುಭವವಾಗಿತ್ತು. ತಲೆ ತಿರುಗಿದಂತಾಗಿ ಅಲ್ಲಿಯೇ ಸೋಫಾದ ಮೇಲೆ ಕುಳಿತಳು. ಸ್ವಲ್ಪ ಸಮಯ ನೀರವ ವಾತಾವರಣದ ನಂತರ ರಾಹುಲ್, ‘ನೇಹಾ, ನೀನು ಅಲೋಕ್ ನಿಗೆ ಪ್ರೀತಿ ಮಾಡುತ್ತಿಯಲ್ಲ, ಹಾಗಾದರೆ ನನ್ನ ಜೊತೆಗೆ ನೀನು ಹೇಗೆ ಸಂಸಾರ ಮಾಡುವೆ? ಮತ್ತು ನಮ್ಮ ಸಂಸಾರ ಸುಖದ ಸಂಸಾರವಾಗುವದೇ? ಅಲೋಕ್ ನ ಸ್ಥಾನವನ್ನು ನನಗೆ ಬಿಟ್ಟು ಕೊಡುವೆಯಾ? ನೀನು ಶರೀರದಿಂದ ನನ್ನ ಹತ್ತಿರ ಮನಸ್ಸಿನಿಂದ ಅಲೋಕ್ ನ ಹತ್ತಿರ ಇರುವೆ, ಇದು ಹೇಗೆ ಸಾಧ್ಯ? ಈ ರೀತಿಯ ಸಂಸಾರಕ್ಕೆ ಏನಾದರೂ ಅರ್ಥವಿದೆಯಾ’? ನೀನೇ ಹೇಳು.

‘ಆದ್ದರಿಂದಲೇ ನಾನು ಹೇಳ್ತಾ ಇರೋದು, ನೀನು ಮನಸ್ಸಿನಿಂದ ಪ್ರೀತಿಸುವವನನ್ನೇ ಮದುವೆಯಾಗಿ ಆತನ ಜೊತೆಗೆಯೇ ಸಂಸಾರವನ್ನು ಮಾಡು, ನಾನು ಯಾವತ್ತು ನಿನ್ನ ಜೊತೆಗಿದ್ದೇನೆ, ನೀನು ಮೊದಲು ಅಲೋಕ್ ನಿಗೆ ಫೋನ್ ಮಾಡು, ಮತ್ತು ಆತನಿಗೆ ಹೇಳು ನನಗೆ ನಿನ್ನ ಜೊತೆಗೆ ಮದುವೆಯಾಗಬೇಕಿದೆ ಎಂದು’. ರಾಹುಲ್ ನೇಹಾಗೆ ಹೇಳಿದನು. ಎಲ್ಲರೂ ರಾಹುಲ್ ಕಡೆಗೆ ದೊಡ್ಡ ಕಣ್ಣುಗಳಿಂದಲೇ ನೋಡುತ್ತಿದ್ದರು. ನೇಹಾಳಿಗಂತೂ ತನ್ನ ಕಿವಿಯ ಮೇಲೆ ವಿಶ್ವಾಸವೇ ಕೂಡಲಿಲ್ಲ. ಕಣ್ಣುಗಳಲ್ಲಿ ಅಶ್ರು ತುಂಬಿಕೊಂಡಿದ್ದವು, ಅಷ್ಟೇ ಅಲ್ಲ ರಾಹುಲ್ ಬಗ್ಗೆ ಮನದಲ್ಲಿ ಸಾಕಷ್ಟು ಗೌರವವು ಇತ್ತು. ನೇಹಾಳಿಗೆ ರಾಹುಲ್ ಕಾಲ್ ಮಾಡಲು ಹೇಳಿದ ನಂತರ ಸನ್ನೆಯಿಂದ ಅವಳಿಗೆ ಸ್ಪೀಕರ್ ಆನ್ ಮಾಡಲು ಹೇಳಿದ.
ಈಗ ಎಲ್ಲರ ಗಮನ ಆ ಫೋನ್ ಕಡೆಗೆಯೇ ಇತ್ತು. ಆ ಕಡೆಯಿಂದ ಬಂತು ಶಬ್ದ… ಹೆಲೋ ನೇಹಾ ಹೇಳು, ಎಂದಾಗ ನೇಹಾ, ಹೆಲೋ ಅಲೋಕ್ ನನಗೆ ನಾಳೆ ನಿನ್ನ ಜೊತೆ ಮಾದುವೆಯಾಗಬೇಕಿದೆ, ನಮ್ಮಿಬ್ಬರ ಲಗ್ನ ಮಾಡಿ ಕೊಡಲು ಎಲ್ಲರೂ ಒಪ್ಪಿದ್ದಾರೆ, ಇಷ್ಟು ಹೇಳಿದಾಗ ಆ ಕಡೆಯಿಂದ ಅಲೋಕ್ ಹೇಳಿದ, ‘ನೇಹಾ ನೀನು ಮೂರ್ಖಳಾಗಿರುವಿಯೇನು? ಏನು ಮಾತಾಡುತ್ತಿರುವೆ? ನಿನ್ನದು ಈಗಷ್ಟೇ ಮದುವೆಯಾಗಿದೆ, ಮತ್ತು ನೀನು ನಿನ್ನ ಗಂಡನ ಜೊತೆಗೆ 12 ದಿವಸ ಇದ್ದು ಬಂದಿರುವೆ, ಅಂದಾಗ ನಾನ್ಹೇಗೆ ನಿನ್ನ ಜೊತೆಗೆ ಮದುವೆಯಾಗಲಿ? ಇದು ಸಾಧ್ಯವಿಲ್ಲ, ನನಗೆ ಕ್ಷಮಿಸು ನಾನು ನಿನ್ನ ಜೊತೆಗೆ ಮದುವೆಯಾಗಲಾರೆ’. ಇದನ್ನು ಕೇಳಿ ನೇಹಾಳಿಗೆ ನಿಂತ ಭೂಮಿಯೇ ಬಾಯಿ ತೆರೆದು ತನ್ನನ್ನು ನುಂಗಿಕೊಳ್ಳುತ್ತಿರುವ ಹಾಗೆ ಭಾಸವಾಯಿತು. ಆದರೂ ದೃತಿಗೆಡದೆ ನೇಹಾ ‘ಅಲೋಕ್ ನೀನು ಏನು ಮಾತಾಡುತ್ತಿರುವೆ? ನಾನು ನಿನ್ನನ್ನೇ ಪ್ರೀತಿಸಿರುವೆ. ನಿನಗಾಗಿ ನಾನು ನನ್ನ ಸಂಸಾರವನ್ನು ಬಿಟ್ಟು ಬಂದಿದ್ದೇನೆ, ನಿನಗೆ ನನ್ನ ಮೇಲೆ ವಿಶ್ವಾಸವಿಲ್ಲವೆ? ಮತ್ತೆ ನಾನು ನೀನು ಭೆಟ್ಟಿಯಾಗಿದ್ದು ಅದೆಲ್ಲ ಏನು ಹೇಳ್ತೀಯಾ’? ಎಂದಾಗ ಅಲೋಕ್ ‘ನೇಹಾ ನಾನು ನಿನ್ನನ್ನು ಭೆಟ್ಟಿಯಾಗಲು ಬರುತ್ತಿರಲಿಲ್ಲ , ನೀನಾಗಿ ನನ್ನನ್ನು ಕರೆಯುತ್ತಿರುವದರಿಂದ ನಾನು ಬರುತ್ತಿದ್ದೆ, ನಿನ್ನ ಟೈಮ್ ಪಾಸ್ ಗಾಗಿ, ಇದೆಲ್ಲದರ ಅರ್ಥ ಮದುವೆ ಮಾಡಿಕೊಳ್ಳುವದು ಅಂತ ಎಣಿಸಬೇಡ. ನೇಹಾ ನಿನ್ನ ಮದುವೆಯಾಗಿದೆ, ನೀನು ನಿನ್ನ ಗಂಡನ ಜೊತೆಗೆ ನಾಲ್ಕಾರು ದಿವಸಗಳವರೆಗೆ ಇದ್ದೂ ಸಹ ಬಂದಿರುವೆ, ಸಾರಿ ನನಗೆ ಕ್ಷಮಿಸಿಬಿಡು’ ಎಂದು ಹೇಳಿ ಅಲೋಕ್ ಫೋನ್ ಕಟ್ ಮಾಡಿದ.
ಯಾರ ಮೇಲೆ ಇಷ್ಟು ದಿವಸ ಮನದಾಳದಿಂದ ಇಷ್ಟೊಂದು ಪ್ರೀತಿ ಮಾಡಿದೆ, ಯಾರಿಗಾಗಿ ನಾನು ಎಲ್ಲರನ್ನು ತೊರೆಯಲು ತಯಾರಾದೆ ಆತನೇ ನನ್ನನ್ನು ಒಂದೇ ಕ್ಷಣದಲ್ಲಿ ತೊರೆದು ಬಿಟ್ಟನಲ್ಲಾ…
ಪ್ರೇಮಭಂಗವಾದ ದುಃಖ ನೇಹಾಳ ಕಣ್ಣುಗಳಲ್ಲಿ ಕಣ್ಣೀರಾಗಿ ತುಂಬಿ ನಿಂತದ್ದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಒತ್ತರಿಸಿ ಬಂದ ದುಃಖಕ್ಕೆ ತಡೆಯಲಾಗದೆ ಕಣ್ಣೀರಿನ ಸ್ವರೂಪದಲ್ಲಿ ದಾರಿ ಮಾಡಿ ಕೊಟ್ಟಳು. ಎಲ್ಲವೂ ಮುಗಿದೆ ಹೋಯಿತು ಎನ್ನುವಂಥ ಭಾವನೆ ಆಕೆಯಲ್ಲಿ ನಿರ್ಮಾಣವಾಗಿತ್ತು. ಈ ನಡೆದು ಹೋದ ಚಿತ್ರವನ್ನು ನೇಹಾಳ ತಂದೆ ಬಿಟ್ಟ ಕಣ್ಣುಗಳಿಂದ ನೋಡುತ್ತಲೇ ಇದ್ದರು, ಅಲೋಕ್ ನಿಂದ ನೇಹಾಳ ಮುಕ್ತತೆ ಮನಸ್ಸಿಗೆ ನೆಮ್ಮದಿ ನೀಡಿದರೂ, ಅಲೋಕ್ ಕೊಟ್ಟ ಪೆಟ್ಟಿನ್ನು ತಂದೆಯ ಮುದ್ದು ಮಗಳು ಹೇಗೆ ಸಹಿಸಬಲ್ಲಳು, ಅದಕ್ಕಿಂತ ಹೆಚ್ಚಾಗಿ ಮಗಳ ಮುಂದಿನ ಜೀವನ ಹೇಗೆ ಎಂಬ ದೈತ್ಯ ಪ್ರಶ್ನೆಯೂ ಅವರನ್ನು ಕಾಡಲು ತಯಾರಾಗಿತ್ತು.
ತಂದೆ ನಿಧಾನವಾಗಿ ಎದ್ದು ಮಗಳಿಗಾಗಿ ರಾಹುಲ್ ಮಂದೆ ಕೈ ಜೋಡಿಸಿ ನಿಂತು ಕೊನೆಯ ಪ್ರಯತ್ನವೆಂಬಂತೆ ಆರ್ತನಾಗಿ, ಅಳಿಮಯ್ಯನವರೆ, ನೇಹಾಳಿಗೆ ನೀವೇ ಯೋಗ್ಯರಾಗಿದ್ದೀರಿ, ನಾನು ನಿಮ್ಮ ಕಾಲುಗಳಿಗೆ ವಂದಿಸುತ್ತೇನೆ…ಎನ್ನುವಷ್ಟರಲ್ಲಿ ರಾಹುಲ್ ಅವರ ಕೈಗಳನ್ನು ಹಿಡಿದು ಏನೋ ಮಾತಾಡಬೇಕು ಎನ್ನುವದರಲ್ಲಿದ್ದಾಗ ನೇಹಾ ಬಂದು ರಾಹುಲ್ ನ ಕಾಲು ಹಿಡಿದು ತನ್ನ ತಪ್ಪಿನ ಅರಿವಾಗಿ…’ರಾಹುಲ್ ನನಗೆ ದಯವಿಟ್ಟು ಕ್ಷಮಿಸಿ ಬಿಡಿ, ನನ್ನಿಂದ ದೊಡ್ಡ ತಪ್ಪಾಗಿದೆ. ನಾನು ಪ್ರೀತಿಯಲ್ಲಿ ಕುರುಡಳಾಗಿದ್ದೆ, ಸ್ವಾರ್ಥಿಯಾಗಿದ್ದೆ, ಪ್ರೀತಿಗಾಗಿ ನಾನು ಎಲ್ಲರನ್ನೂ ಬಿಡಲು ತಯಾರಾಗಿದ್ದೆ, ಅದು ಪ್ರೀತಿಯಾಗಿರಲಿಲ್ಲ ಬರೀ ಶಾರೀರಿಕ ಆಕರ್ಷಣೆಯಾಗಿತ್ತು. ಹೀಗಾಗಿ ನನ್ನಂತೆ ಅಸಂಖ್ಯ ಹುಡುಗಿಯರು ಈ ಮೋಹದ ಜಾಲದಲ್ಲಿ ಸಿಲುಕುತ್ತಾರೆ ಮತ್ತು ತಮ್ಮ ಸ್ವಂತದ ಜೀವನವನ್ನು ಸರ್ವನಾಶ ಮಾಡಿಕೊಳ್ಳುತ್ತಾರೆ. ನನ್ನ ಜೊತೆಗೂ ಹಾಗೆ ಆಯಿತು. ನನ್ನ ಜೊತೆಗೂ ಇದೆ ನಡೆಯಿತು. ರಾಹುಲ್ ನನಗೆ ಪ್ಲೀಜ್ ಈಗ ಒಂದು ಸಲ ಕ್ಷಮಿಸು, ಭವಿಷ್ಯದಲ್ಲಿ ನನ್ನಿಂದ ಯಾವ ತಪ್ಪೂ ಆಗದಂತೆ ನೋಡಿಕೊಳ್ಳುತ್ತೇನೆ’.
ಆಕೆಯ ಕಣ್ಣುಗಳಿಂದ ಪಶ್ಚಾತಾಪದಲ್ಲಿ ಮಡುಗಟ್ಟಿದ ಕಣ್ಣೀರ ಧಾರೆ ನಿರಂತರವಾಗಿ ಹರಿಯುತ್ತಿತ್ತು. ರಾಹುಲ್ ನಿಧಾನವಾಗಿ ಆಕೆಯನ್ನು ಎಬ್ಬಿಸುತ್ತ, ತನ್ನ ತೋಳುಗಳಲ್ಲಿ ತೆಗೆದುಕೊಂಡಾಗ ನೇಹಾ ಮತ್ತಷ್ಟು ಧಾರಾಕಾರವಾಗಿ ಅತ್ತಳು. ಆಕೆಗೆ ಸಮಾಧಾನವಾದಂತೆನಿಸಿದಾಗ ರಾಹುಲ್ ನಿಧಾನವಾಗಿ ಉಸುರಿದನು, ಹಾಗಾದ್ರೆ ನಾವಿನ್ನೂ ಹೊರೊಡಣವಾ? ನಮ್ಮ ಊರಿಗೆ? ನೇಹಾ ರಾಹುಲ್ ಕಡೆಗೆ ನೋಡಿ ತಲೆ ಅಲ್ಲಾಡಿಸಿ ನಾನು ಪ್ಯಾಕಿಂಗ್ ಮಾಡುತ್ತೇನೆಂದು ಒಳಗೆ ಹೋದಳು.
ನೇಹಾಳ ತಾಯಿಗೆ ತನ್ನ ತಪ್ಪಿನ ಅರಿವಾಗಿತ್ತು. ಆಕೆಯೂ ಕೈ ಜೋಡಿಸಿ ಎಲ್ಲರ ಕ್ಷಮೆ ಕೇಳಿದಳು, ಮತ್ತು ಕಣ್ಣುಗಳನ್ನು ಒರೆಸಿಕೊಳ್ಳುತ್ತ ನೇಹಾಳ ಕಡೆಗೆ ಹೋದಳು.
ಸ್ವಲ್ಪ ಸಮಯದ ನಂತರ ನೇಹಾ ಬ್ಯಾಗ್ ತೆಗೆದುಕೊಂಡು ಹೊರ ಬಂದಳು. ತಂದೆಯ ಆಶಿರ್ವಾದ ಪಡೆಯಲು ಇಬ್ಬರೂ ಬಾಗಿದಾಗ ಅವರಿಬ್ಬರ ಹೆಗಲ ಮೇಲೆ ಕೈಯನ್ನಿಟ್ಟು ಸುಖವಾಗಿರಿ ಎಂದು ಹರಸುವಾಗ ತಂದೆಯ ಕಣ್ಣುಗಳಿಂದ ಆನಂದಾಶ್ರುಗಳು ಹರಿಯುತ್ತಿದ್ದವು.
ಇಂದು ನಿಜವಾಗಿಯೂ ನೇಹಾ ಗಂಡನ ಮನೆಗೆ ಹೋಗುತ್ತಿದ್ದಳು. ಎಲ್ಲರಿಗೂ ಬಾಯ್ ಮಾಡುತ್ತಾ ಇಬ್ಬರೂ ನಡೆದೇಬಿಟ್ಟರು. ಮನೆಗೆ ಬಂದ ನಂತರ ಸೊಸೆಯ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ತೋರಿಸುವ ಆತ್ಮವಿಶ್ವಾಸದೊಂದಿಗೆ ಗಂಡನ ಮನೆಯಲ್ಲಿ ಹೆಜ್ಜೆ ಇಟ್ಟಳು. ಊಟವಾದ ಮೇಲೆ ನೇಹಾ ಬೆಡ್ ರೂಮಿನಲ್ಲಿ ಸೇರಿದಳು, ರಾಹುಲ್ ಒಳಗೆ ಆಕೆಯ ಬರುವನ್ನೇ ಕಾಯುತ್ತಿದ್ದ, ನವವಧುವಿನ ಹಾಗೆ ನಾಚುತ್ತ ಆತನ ಬಾಹುಗಳಲ್ಲಿ ನೇಹಾ ಲೀನವಾದಳು. ನೆನೆಗುದಿಗೆ ಬಿದ್ದ ಮಧುಚಂದ್ರದ ಆ ರಾತ್ರಿ ಇಂದು ಮತ್ತೆ ಗರಿಗೆದರಿ ಇವರಿಬ್ಬರ ಜೀವನದಲ್ಲಿ ಹೊಸ ವಸಂತವನ್ನು ತಂದಿತ್ತು. ಮತ್ತೆ ಆ ರಾತ್ರಿ ಇಬ್ಬರ ಪ್ರಣಯರಸದಲ್ಲಿ ಮುಳುಗಿ ಎದ್ದಂತೆ ಭಾಸವಾಗಿತ್ತು.