ಈ ಊರಲ್ಲಿ ಹುಡುಗಿಯರು ಮದುವೆಗಾಗಿ ಹಂಬಲಿಸುತ್ತಾರೆ, ಆದರೆ ಮದುವೆಯಾಗೋ ಹುಡುಗರೇ ಸಿಗುತ್ತಿಲ್ಲ!
ಜಗತ್ತಿನ ಅನೇಕ ದೇಶಗಳಲ್ಲಿ ಪುರುಷರಿಗೆ ಹೋಲಿಸಿದಾಗ ಸ್ತ್ರೀಯರ ಸಂಖ್ಯೆ ತುಂಬಾ ಕಡಿಮೆ ಇದೆ. ಇನ್ನು ಕೆಲವೊಂದು ಚಿಕ್ಕ ಊರುಗಳಿದ್ದರೂ ಅವು ತಮ್ಮದೇ ರೂಢಿ ಪರಂಪರೆಗೆ ಒಳಗಾಗಿರುತ್ತವೆ. ಹಿಂದಿನಿಂದಲೂ ಬಂದಿರತಕ್ಕಂತಹ ಕಟ್ಟಳೆಗಳಿಗೆ ಬಂಧಿತರಾಗಿರುತ್ತವೆ. ಇಲ್ಲಿ ಪ್ರಸ್ತಾಪಿಸುತ್ತಿರುವ ಊರು ಸಹ ಇದೆ ರೀತಿಯ ರೂಢಿ ಪರಂಪರೆಗೆ ಒಳಗಾಗಿರಬೇಕೇನೋ ಅನ್ನಿಸುತ್ತದೆ. ಈ ಊರು ಸುಮಾರು ನೂರು ವರ್ಷಗಳಿಂದಲೇ ಹೊರಗಿನ ಜಗತ್ತಿನಿಂದ ಸಂಬಂಧವನ್ನು ಮುರಿದುಕೊಂಡು ಬಿಟ್ಟಿದೆ. ಇಲ್ಲಿ ಪುರುಷರ ಸಂಖ್ಯೆ ತುಂಬಾ ಕಡಿಮೆ ಇದೆ. ಹೀಗಾಗಿ ಈ ಊರಲ್ಲಿಯ ಹದಿ ಹರೆಯದ ಹುಡುಗಿಯರು ಮದುವೆಗಾಗಿ ಕಾತರರಾಗಿರುತ್ತಾರೆ. ಈ ಊರಲ್ಲಿ ಸುಮಾರು 300 ಹುಡುಗಿಯರು ಮದುವೆಗಾಗಿ ಕಾಯುತ್ತಿದ್ದಾರೆ. ಸುಮಾರು 600 ರಿಂದ 650 ಜನ ಮಹಿಳೆಯರ ಈ ಊರಲ್ಲಿ 300 ಜನ ಹುಡುಗಿಯರಿಗಾಗಿ ಅವಿವಾಹಿತ ಪುರುಷನನ್ನು ಹುಡುಕುವದು ತುಂಬಾ ಕಷ್ಟಸಾಧ್ಯವಾಗಿಬಿಟ್ಟಿದೆ. ಇಂಥ ಈ ವಿಶೇಷ ಊರಿನ ಬಗ್ಗೆ ಇಲ್ಲಿ ತಿಳಿಯುವಾ…
ಈ ಊರಲ್ಲಿಯ ಮಹಿಳೆಯರ ವಯಸ್ಸು 20 ರಿಂದ 35 ರ ವರೆಗೆ ಇದೆ. ಊರಲ್ಲಿ ಇರುವ ಎಲ್ಲ ಪುರುಷರು ವಿವಾಹಿತರಾಗಿದ್ದಾರೆ, ಇಲ್ಲವೇ ಮನೆ ಅಳಿಯರಾಗಿದ್ದಾರೆ. ಇಲ್ಲಿಯ ಪರಿಸ್ಥಿತಿ ಹೇಗಿದೆ ಎಂದರೆ, ಹುಡುಗಿಯರಿಗೆ ಮದುವೆ ಮಾಡಿಕೊಳ್ಳಬೇಕೆಂಬ ಆಸೆ ಆದರೆ ಮದುವೆಯ ನಂತರ ತವರೂರನ್ನು ಬಿಟ್ಟು ಹೋಗಲಿಕ್ಕಿಲ್ಲ. ಯಾಕೆಂದರೆ ಇಲ್ಲಿಯ ಹುಡುಗಿಯರ ಇಚ್ಚೆ ಅಥವಾ ರೂಲೇ ಹೀಗಿದೆ. ಇಲ್ಲಿ ಪುರುಷರು ತಮ್ಮ ಯಾವುದೇ ಖಾಸಗಿ ವಿಷಯಗಳಲ್ಲಿ ತಲೆ ತೂರುವ ಹಾಗಿಲ್ಲ. ಮದುವೆಯ ನಂತರ ಹುಡುಗ ತಮ್ಮೂರಲ್ಲೇ ತಮ್ಮ ನಿಯಮಗಳಂತೆ ಇರಬೇಕು. ಸ್ತ್ರೀ ಪ್ರಧಾನವಾದ ಈ ಊರಲ್ಲಿ ಬೇಸಾಯದಿಂದ ಹಿಡಿದು ಮನೆಯ ಎಲ್ಲ ಕೆಲಸಗಳನ್ನೆಲ್ಲ ಸ್ತ್ರೀಯರೇ ಮಾಡುತ್ತಾರೆ. ಇದು ಬ್ರಾಜಿಲ್ ದೇಶದಲ್ಲಿ ‘ನೋಐವಾ ಡೊ ಕಾರಡಿರೋ (noiva do cordeiro)’ ಹೆಸರಿನಿಂದ ಗುರುತಿಸಿಕೊಂಡಿದೆ.

ಈ ಊರನ್ನು ‘ಸೆನ್ಹೊರಿಹಾ ಡಿ ಲೀಮಾ’ ಹೆಸರಿನ ವ್ಯಕ್ತಿಯೊಬ್ಬ ತಯಾರಿಸಿದ್ದನು. ಮುಂದೆ 1940 ರಲ್ಲಿ ‘ಎನಿಸಿಯೋ ಪರೇರಾ’ ಹೆಸರಿನ ವ್ಯಕ್ತಿಯೊಬ್ಬ ಇಲ್ಲಿ ಚರ್ಚ್ ನಿರ್ಮಿಸಿ ಕೆಲವೊಂದು ಕಟ್ಟಳೆಗಳನ್ನು ಹಾಕಿದ. ಅದರ ಅಧೀನದಲ್ಲಿ ಮಧ್ಯ ಸೇವನೆಗೆ ನಿರ್ಬಂಧ, ಸಂಗೀತ ಕೇಳುವದು, ಕೂದಲು ಕತ್ತರಿಸುವ ಹಾಗಿಲ್ಲ ಹೀಗೆ ಅನೇಕ ವಿಚಿತ್ರವಾದ ನಿಯಮಗಳನ್ನು ಜಾರಿಯಲ್ಲಿ ತಂದನು. ಮುಂದೆ 1995 ರಲ್ಲಿ ಆತನ ಮರಣದ ನಂತರ ಇಲ್ಲಿರುವ ಮಹಿಳೆಯರು ಒಂದು ನಿಶ್ಚಯಕ್ಕೆ ಬಂದರು. ಅದೇನೆಂದರೆ, ಪುರುಷರು ತಯಾರಿಸಿದ ನಿಯಮಗಳನ್ನು ಎಂದಿಗೂ ಪಾಲನೆ ಮಾಡುವದಿಲ್ಲ. ಹೀಗಾಗಿ ಅಂದಿನಿಂದ ಅಲ್ಲಿ ಸ್ತ್ರೀಯರ ವರ್ಚಸ್ಸೇ ಕಂಡು ಬರುತ್ತದೆ.