CA, MBA ಡಿಗ್ರಿ ಪಡೆದರೂ ಬೇಸಾಯ ಮಾಡುತ್ತಿರುವ ಯುವತಿಯರು! ಯಾಕೆ ಗೊತ್ತಾ..? ತಿಳಿದುಕೊಳ್ಳಿ
ಈ ಲೇಖನದಲ್ಲಿರುವ ಹುಡುಗಿಯರ ಸಾಧನೆಯನ್ನು ನೋಡಿ ಓದಿ ನಿಜಕ್ಕೂ ಆಶ್ಚರ್ಯವೆನಿಸುವದು. ಹರಿಯಾಣ ರಾಜ್ಯದ ಬಹದ್ದೂರ್ ಗಡ ಊರಲ್ಲಿಯ ಯಾಮಿಕಾ ಬಹತಿ ಮತ್ತು ಶಿವಾನಿ ಮಹೇಶ್ವರಿ ಇಬ್ಬರು ಹುಡುಗಿಯರು ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಿದರೂ ಸಹಿತ ಬೇಸಾಯದ ಕಡೆಗಿರುವ ಇವರ ಹವ್ಯಾಸ ಮತ್ತು ಇವರ ಐಡಿಯಾಗಳು ಇನ್ನೊಬ್ಬರಿಗೆ ತುಂಬಾ ಪ್ರೇರಣೆಯಾಗಿವೆ. ಯಾಮಿಕಾ ಇವಳು ದೇಶದಲ್ಲಿಯ ಅತೀ ಕಠಿಣವಾದ ಪರೀಕ್ಷೆ CA ಉತ್ತೀರ್ಣರಾಗಿದ್ದರೆ, ಶಿವಾನಿಯು MBA ಪದವಿಯನ್ನು ಪಡೆದಿದ್ದಾರೆ. ಇವರ ನೌಕರಿ ಮಾಡುವ ಮನಸ್ಸು ಮಾಡಿದರೆ ಯಾವುದೇ ದೊಡ್ಡ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ನೌಕರಿ ಮಾಡಬಹುದಾಗಿತ್ತು. ಆದರೆ ಇವರ ವಿಚಾರವೆ ಬೇರೆಯಾಗಿದೆ. ಇವರು ತಮ್ಮ ಕರಿಯರನ್ನು ಬೇಸಾಯದಲ್ಲಿ ಬೆಳಗಿಸಬೇಕೆಂದು ನಿಶ್ಚಯಿಸಿ ಬೇಸಾಯದ ಕಡೆಗೆ ಹೊರಳಿದ್ದಾರೆ.
ಇವರು ತಮ್ಮ ಬೇಸಾಯಕ್ಕಾಗಿ ಹರಿಯಾಣದ ಟಾಂಡಾ ಹೆಸರಿನ ಊರನ್ನು ಆಯ್ಕೆ ಮಾಡಿದರು. ಇಲ್ಲಿ ಎಂಟು ಎಕರೆ ಭೂಮಿಯಲ್ಲಿ ಎಲ್ಲಾ ಕಡೆಗೆ ನೆಟ್ ಹಾಕಿ ದಿನದ ಐದು-ಆರು ಗಂಟೆಗಳ ವರೆಗೆ ಕೆಲಸ ಮಾಡುತ್ತಾರೆ.
ಮೊದಮೊದಲು ಇವರು ತಮ್ಮ ಭೂಮಿಯಲ್ಲಿ ಹೂವಿನ ಬೇಸಾಯವನ್ನು ಮಾಡಿದರು. ಈ ಅದೇ ಭೂಮಿಯಲ್ಲಿ ಸೌತೆ ಮತ್ತು ಟೊಮೆಟೊ ಬೆಳೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಹೇಳುವ ಹಾಗೆ ತೋಟದಲ್ಲಿ ಕ್ರೈಸಾಂಥೆಮಮ್, ಜರ್ಬೇರ, ಗ್ಲೈಡ್ ದಂತಹ ಹೂಗಳಿಗೆ ದೆಹಲಿಯಲ್ಲಿ ತುಂಬಾ ಬೇಡಿಕೆ ಇದೆ. ಈ ಜಾತಿಯ ಒಂದು ಹೂವಿನ ಬೆಲೆ 40 ರಿಂದ 50 ರೂಪಾಯಿಗಳಾಗಿದೆ. ಪ್ರತಿ ಎಕರೆಗೆ ಸುಮಾರು ಲಕ್ಷ ಲಕ್ಷ ರೂಪಾಯಿಗಳ ರೂಪಾಯಿಗಳ ಆದಾಯ ಪಡೆದಿದ್ದಾರೆ.

ಯಾಮಿಕಾ ಹೇಳುವ ಹಾಗೆ, ಭಾರತ ಒಂದು ಕೃಷಿ ಪ್ರಧಾನ ದೇಶವಾಗಿದೆ ಎಂಬುದನ್ನು ನಾನು ಶಾಲೆಯಲ್ಲಿಯೇ ಕಲಿತಿದ್ದೇನೆ. ಹೀಗಿರುವಾಗಲೂ ಇಲ್ಲಿಯ ರೈತರಿಗೆ ಸಿಗಬೇಕಾದ ಲಾಭ ಸಿಗುವುದಿಲ್ಲ. ಅಲ್ಲದೆ ಇಲ್ಲಿಯ ಕೃಷಿಕರು ತುಂಬಾ ಹಾನಿಗೆ ಒಳಗಾಗುತ್ತಾರೆ. ಇದರ ಮುಖ್ಯ ಕಾರಣ ರೈತರು ಪರಂಪರಾಗತವಾಗಿ ಬಂದಿರುವ ಕೃಷಿ ಪದ್ಧತಿಯನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಕೈಗಾರಿಕೆಯ ಕಾರಣಗಳಿಂದ ಕೃಷಿಯು ಕುಸಿತಕ್ಕೆ ಕಾರಣವಾಗಿದೆ. ಮತ್ತು ಯುವಜನ ಬೇಸಾಯದಿಂದ ದೂರ ಹೋಗುತ್ತಿರುವ ಕಾರಣದಿಂದ ನಾವು ಬೇಸಾಯ ಮಾಡುವ ನಿಶ್ಚಯಕ್ಕೆ ಬಂದೆವು.
ಬೇಸಾಯದಲ್ಲಿ ತಮ್ಮ ಕರಿಯರ್ ಪ್ರಾರಂಭ ಮಾಡುವ ಮೊದಲು, ನೆಟ್ ಫಾರ್ಮಿಂಗ್ ಮತ್ತು ಆಧುನಿಕ ಬೇಸಾಯದ ಬಗ್ಗೆ ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿಯನ್ನು ಹೇಗೆ ತೆಗೆಯುವುದು ಎಂಬುದರ ಬಗ್ಗೆ ಅಭ್ಯಾಸ ಮಾಡಿದ್ದಾರೆ.
ನೆಟ್ ಫಾರ್ಮಿಂಗ್ ಇದು ಕಡಿಮೆ ನೀರಿನಲ್ಲಿ ಬೇಸಾಯ ಮಾಡಬಹುದಾದ ವ್ಯವಸ್ಥೆಯಾಗಿದೆ. ಈ ಪದ್ಧತಿಯಲ್ಲಿ ತೋಟದಲ್ಲಿ ವ್ಯರ್ಥವಾಗಿ ಹೋಗುವ ನೀರನ್ನು ಸಹ ಮರಳಿ ಉಪಯೋಗಿಸಲು ಬರುವುದು.

ಕೃಷಿಯಲ್ಲಿ ಲಾಭವಿದೆ ಹಾನಿಯಿಲ್ಲ ಎಂಬುದನ್ನು ಸಿದ್ಧಪಡಿಸುವ ಸಲುವಾಗಿ ಶಿವಾನಿ ಅವರು ಬೇಸಾಯವನ್ನು ಆರಿಸಿದ್ದಾರೆ. ಅದಕ್ಕಾಗಿ ರೈತರು ಪರಂಪರಾಗತವಾಗಿ ಬಂದ ಕೃಷಿಪದ್ಧತಿಯನ್ನು ಬಿಟ್ಟು ಆಧುನಿಕ ಕೃಷಿ ಪದ್ಧತಿಯನ್ನು ಆರಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಬೇಸಾಯದ ಕೆಲಸಗಳನ್ನು ಹೆಚ್ಚುವರಿಯಾಗಿ ಪುರುಷವರ್ಗವೆ ನೋಡುತ್ತದೆ. ಆದ್ದರಿಂದ ನಮಗೂ ಸಹಿತ ಕೃಷಿ ಕೆಲಸ ಮಾಡಲು ಬರುತ್ತದೆ ಎಂಬುದನ್ನು ಇತರರಿಗೆ ತೋರಿಸುವದಿತ್ತು. ಮತ್ತು ಇದರಿಂದ ಹುಡುಗಿಯರು ಸಹಿತ ಹಣಗಳಿಸಬಹುದು. ಆಧುನಿಕ ಕೃಷಿ ಪದ್ಧತಿಯಲ್ಲಿ ಪಾಲಿಹೌಸ್ ಕೃಷಿಯಲ್ಲಿ ಸರಕಾರದಿಂದ ಅರ್ಧದಷ್ಟು ಸಬ್ಸಿಡಿಯೂ ಸಿಗುತ್ತದೆ.
ಹರಿಯಾಣದ ಹುಡುಗಿಯರಾದ ಯಮಿಕಾ ಮತ್ತು ಶಿವಾನಿ ಇವರು, ಮನಸ್ಸು ಮಾಡಿದರೆ ಹುಡುಗಿಯರು ಏನು ಕಡಿಮೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಇವರಿಬ್ಬರ ಈ ಕೆಲಸ ನಿಜವಾಗಿಯೂ ಇನ್ನೊಬ್ಬರಿಗೆ ಪ್ರೇರಣೆಯಾಗಿದೆ.
.