ರಾತ್ರಿಯಲ್ಲಿ ಚಿರತೆ ಹಸುವನ್ನು ರಹಸ್ಯವಾಗಿ ಭೇಟಿಯಾಗುತ್ತಿತ್ತು, ಹಿಂದಿನ ಕಾರಣ ತಿಳಿದರೆ ಅಚ್ಚರಿ ಪಡುವಿರಿ!
ಸೋಶಿಯಲ್ ಮಿಡಿಯಾದಲ್ಲಿ ಕೆಲವೊಂದು ಚಿತ್ರಗಳು ಮತ್ತು ವೀಡಿಯೋಗಳು ಯಾವಾಗ ಯಾಕೆ ವೈರಲ್ ಆಗುತ್ತೋ ಗೊತ್ತೇ ಆಗುವದಿಲ್ಲ. ಈಗ ಒಂದು ಆಕಳು ಮತ್ತು ಚಿರತೆಯ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋವನ್ನು IFS ಆಫೀಸರ್ ಆದ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.
ಆಕಳು ಮತ್ತು ಚಿರತೆಯ ಫೋಟೋವನ್ನು ಶೇರ್ ಮಾಡುತ್ತ ಅದಕ್ಕೆ ಸುಶಾಂತ್ ಅವರು ಕ್ಯಾಪ್ಶನ್ ಕೊಟ್ಟಿದ್ದಾರೆ, ಬೇಟೆಗಾರ ಮತ್ತು ಬೇಟೆ ಜೊತೆ ಜೊತೆಯಲಿ. ಅನೇಕ ದಿನಗಳಿಂದ ಚಿರತೆ ರಾತ್ರಿಯ ಸಮಯದಲ್ಲಿ ಆಕಳಿನ ಹತ್ತಿರ ಬಂದು ಕೂರುತ್ತಿತ್ತು. ಕಾರಣ ಈ ಚಿರತೆಗೆ ಆಕಳು ತನ್ನ ಮಗುವಿನಂತೆ ಜೋಕೆ ಮಾಡಿತ್ತು. ಈ ಫೋಟೋ ವಡೋದರಾ ಜಿಲ್ಲೆಯ ಅಂತೋಲಿ ಊರಿನದ್ದಾಗಿದೆ.

ಆಕಳು ಚಿರತೆಯ ಜೊತೆಗೆ ಇರುವ ಈ ಫೋಟೋವನ್ನು ನೋಡಿ ಪ್ರತಿಯೊಬ್ಬ ವ್ಯಕ್ತಿಗೆ ಆಶ್ಚರ್ಯವಾಗಿದೆ. ಹಾಗೂ ಇದರ ಹಿಂದಿನ ಗುಟ್ಟೇನು ಎಂದು ತಿಳಿಯಲು ಪ್ರತಿಯೊಬ್ಬನು ಉತ್ಸುಕನಾಗಿದ್ದನು.
Prey & predator together🙏
— Susanta Nanda IFS (@susantananda3) May 5, 2020
Hunter & the hunted in the same frame and cuddling each other! For several nights, the leopard visited the cow, who treated it as its own calf. Old one.
Credit;Rohit Vyas at
Antoli village in Vadodara. pic.twitter.com/DBOK1BnolL
ಪ್ರಸ್ತುತ ಫೋಟೋ 2002 ರಲ್ಲಿಯದಿದೆ. ಅಂತೋಲಿ ಊರಲ್ಲಿ ರಾತ್ರಿಯ ಸಮಯದಲ್ಲಿ ನಾಗರಿಕರೆಲ್ಲ ಮಲಗಿದಾಗ ಚಿರತೆ ಪ್ರತಿದಿನ ಆಕಳ ಭೆಟ್ಟಿಗೆ ಬರುತ್ತಿತ್ತು. ಚಿರತೆ ಆಕಳಿನ ಹತ್ತಿರ ಬಂದು ಕುಳಿತಾಗ ಆಕಳು ಚಿರತೆಯ ಕುತ್ತಿಗೆ, ಮುಖ, ಕಿವಿ ಮತ್ತು ಬೆನ್ನನ್ನು ನೆಕ್ಕುತ್ತಿತ್ತು. ತನ್ನ ಕರುವಿಗೆ ಮುದ್ದು ಮಾಡುವ ಹಾಗೆ ಆ ದೃಶ್ಯವಿರುತ್ತಿತ್ತು. ವಿಶೇಷವೆಂದರೆ, ಸುತ್ತಮುತ್ತಲಿನ ಬೇರೆ ಪ್ರಾಣಿಗಳಿಗೆ ಚಿರತೆ ಯಾವುದೇ ರೀತಿಯ ಕಷ್ಟ ಕೊಡುತ್ತಿರಲಿಲ್ಲ. ಚಿರತೆ ಬರುತ್ತಿತ್ತು, ಆಕಳಿನ ಜೊತೆಗೆ ಸ್ವಲ್ಪ ಹೊತ್ತು ಕುಳಿತು ಆನಂತರ ನಿಧಾನವಾಗಿ ಅರಣ್ಯದ ಕಡೆಗೆ ಹೋಗುತ್ತಿತ್ತು.
ಕೆಲವೊಂದು ಸಲ ಪ್ರಾಣಿಗಳ ವ್ಯವಹಾರವೂ ಸಹಿತ ಬದಲಾಗುತ್ತದೆ. ಚಿರತೆ ಮತ್ತು ಆಕಳಿನ ಈ ಘಟನೆಯಿಂದ ಪ್ರಾಣಿಗಳ ವ್ಯವಹಾರದಲ್ಲಿ ಎಷ್ಟೋ ಸಲ ಈ ತರಹದ ಬದಲಾವಣೆ ಕಂಡು ಬರುತ್ತವೆ ಎಂದು ಪ್ರಾಣಿ ತಜ್ಞರ ಅಭಿಪ್ರಾಯವಾಗಿದೆ. ಯಾವುದೋ ಸಂದರ್ಭದಲ್ಲಿ ಚಿರತೆ ಮೊದಲ ಸಲ ಊರಲ್ಲಿ ಬಂದಾಗ ಆಕಳು ಚಿರತೆಗೆ ತಾಯಿಯ ಮಮತೆಯನ್ನು ನೀಡಿರಬೇಕು ಆದ್ದರಿಂದ ಅದು ಆ ವಾತ್ಸಲ್ಯಕ್ಕಾಗಿ ಹಾತೊರೆದು ಪ್ರತಿದಿನ ಬರುತ್ತಿರಬೇಕು ಎಂಬ ವಿಚಾರ ವ್ಯಕ್ತ ಮಾಡಿದ್ದಾರೆ.