ವಯಸ್ಸಾದ ರಾಜಕಾರಣಿಗಳು ಬದುಕಿ ಬರ್ತಿದಾರೆ, ವಯಸ್ಸಿನ ಹುಡುಗರು ಹೋಗುತ್ತಿದ್ದಾರೆ, ಕಾರಣ ಏನ್ ಗೊತ್ತಾ?

ತುಂಬಾ ಜನ ಸಾಮಾಜಿಕ ಜಾಲತಾಣದಲ್ಲಿ ಇಂಥ ಕಾಮೆಂಟ್ – ಪೋಸ್ಟ್ ಹಾಕ್ತಾನೆ ಇರ್ತಾರೆ, ಅವರ ತಕರಾರು ಏನಂದರೆ ವಯಸ್ಸಾದ ರಾಜಕಾರಣಿಗಳು ಎಂಟೇ ದಿನದಲ್ಲಿ ಆರಾಮಾಗಿ ಬರ್ತಿದಾರೆ ಆದರೆ ಹರೆಯದ ಹುಡುಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅಂತ‌. ಪ್ರಾಣ ಕಳೆದುಕೊಂಡವರ ಸಂಬಂಧಿಕರು – ಸ್ನೇಹಿತರು ತಮ್ಮವರನ್ನು ಕಳೆದುಕೊಂಡ ಸಂಕಟದಲ್ಲಿ ಹೀಗೆ ಮಾತಾಡುವುದು ಸಹಜ. ಕೆಲವರು ಚಾನೆಲ್ ಗಳಿಗೆ ಕೂಡ ಹೀಗೆಯೇ ಹೇಳಿಕೆ ಕೊಟ್ಟಿದ್ದು ಅದು ಜನರಲ್ಲಿ ಗೊಂದಲ ಮೂಡಿಸುತ್ತಿದೆ, ಅದಕ್ಕಾಗಿ ಈ ಸಣ್ಣ ಬರಹ.

ಕೊರೋನ ಎರಡನೇ ಅಲೆಯಲ್ಲಿ ವಯಸ್ಸಾದವರಿಗಿಂತ ಹರೆಯದವರೇ ಹೆಚ್ಚು ಟಾರ್ಗೆಟ್ ಆಗುತ್ತಿರುವುದು ನಿಮಗೆಲ್ಲ ಗೊತ್ತಿದೆ. ವಾಸ್ತವದಲ್ಲಿ ಕೊರೋನಕ್ಕೆ ವಯಸ್ಸಿನ ಮಿತಿ ಇಲ್ಲ, ದೇಶ – ಭಾಷೆಯ ಗಡಿ ಇಲ್ಲ, ಬಡವರು – ಶ್ರೀಮಂತರು ಎಂಬ ಬೇಧವೂ ಇಲ್ಲ. ಎಲ್ಲರನ್ನೂ ಅದು ಸಮಾನವಾಗಿ ಕಾಣುತ್ತದೆ, ಸಮಾನವಾಗಿ ಕಾಡುತ್ತದೆ.

ಹಾಗಿದ್ದ ಮೇಲೆ ವಯಸ್ಸಿನ ಹುಡುಗರು – ಬಡವರು ಬಲಿಯಾಗ್ತಿದಾರಲ್ಲ ಯಾಕೆ ಎಂಬ ಪ್ರಶ್ನೆ ಏಳುತ್ತದೆ. ಆದರೆ ನೀವು ಗಮನಿಸಿರಬಹುದು, ನಿರ್ಲಕ್ಷ್ಯ ಮಾಡಿದ ಶ್ರೀಮಂತರು ಕೂಡ ಉಳಿದಿಲ್ಲ. ದುಡ್ಡಿದೆ, ಎಂಥ ಚಿಕಿತ್ಸೆಯಾದರೂ ಪಡೆಯುತ್ತಾರೆ ಎಂದು ಯಾರಾದೂ ಅಂದುಕೊಂಡಿದ್ದರೆ ಅದು ಶುದ್ದ ಸುಳ್ಳು.ಕೋಟ್ಯಾದಿಪತಿಗಳು ಕೂಡ ದಿನಬೆಳಗಾಗುವುದರಲ್ಲಿ ಉಸಿರು ಚೆಲ್ಲಿದ ಉದಾಹರಣೆಗಳಿವೆ.

ಪ್ರಖ್ಯಾತ ನಟರು, ಉದ್ಯಮಪತಿಗಳು, ಸಂಸದರು, ಕೇಂದ್ರ ಸಚಿವರು, ಶಾಸಕರು, ಶಾಸಕರ ಕುಟುಂಬದವರು, ಸ್ವತ ಮುಖ್ಯಮಂತ್ರಿಗಳ ಸಹೋದರ ಕೂಡ ಕೊರೋನಕ್ಕೆ ಬಲಿಯಾಗಿರುವುದನ್ನು ನೆನಪಿಸಿಕೊಳ್ಳಿ. ಅದು ಯಾರ ಮರ್ಜಿಯನ್ನೂ ಕಾಯುವುದಿಲ್ಲ, ಎಲ್ಲರ ಮೇಲೂ ಸಮಾನ ಪರಿಣಾಮ ಬೀರುತ್ತದೆ.

ಆಗ್ತಿರೋದೇನು?
ವಾಸ್ತವದಲ್ಲಿ ಆಗುತ್ತಿರೋದೇ ಬೇರೆ, ಜನ ತಿಳಿಯುತ್ತಿರೋದೆ ಬೇರೆ. ಕೊರೋನ ಎಲ್ಲರ ಮೇಲೂ ಏಕಪ್ರಕಾರವಾಗಿ ದಾಳಿ ಮಾಡುತ್ತದಾದರೂ, ರೋಗ ನಿರೋಧಕ ಶಕ್ತಿ‌ ಕಮ್ಮಿ ಇರುವ ವಯಸ್ಸಾದವರಲ್ಲಿ ಅದರ ಲಕ್ಷಣ ಬೇಗ ಕಾಣಿಸಿಬಿಡುತ್ತವೆ. ತಮಗೆ ಕೊರೊನ ಬಂದಿದೆ ಎಂದು ಬೇಗ ಅವರಿಗೆ ಗೊತ್ತಾಗುತ್ತದೆ, ಹೀಗಾಗಿ ತಕ್ಷಣ ಚಿಕಿತ್ಸೆ ಆರಂಭವಾಗುವುದರಿಂದ ಅದು ವ್ಯಾಪಿಸುವ ಮೊದಲೇ ನಾಶವಾಗಿ ರೋಗಿ ಬದುಕುತ್ತಾನೆ.

ಆದರೆ ಹರೆಯದವರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಕೊರೋನ ಬಂದರೂ ಅವರಿಗೆ ತಿಳಿಯಲ್ಲ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಕಾಡುತ್ತವಾದರೂ ಅದು ನಿರ್ಲಕ್ಷ್ಯ ಮಾಡುವಷ್ಟು ಕಡಿಮೆ ಇರುತ್ತದೆ. ಆದರೆ ಯಾವಾಗ ಅದು ಉಲ್ಬಣಿಸುತ್ತದೊ ಆಗ ಟೆಸ್ಟ್ ಮಾಡಿಸಿಕೊಂಡು ಆಸ್ಪತ್ರೆ ಸೇರುವಷ್ಟರಲ್ಲಿ ತುಂಬಾ ತಡವಾಗಿರುತ್ತದೆ. ಚಿಕಿತ್ಸೆ ಫಲಕಾರಿಯಾಗುವುದು ತುಂಬಾ ಕಡಿಮೆ, ಹೀಗಾಗಿ ಯುವಕರ ಸಾವಿನ ಸಂಖ್ಯೆ ಅಧಿಕವಾಗಿದೆ.

ಹ್ಯಾಪಿ ಹೈಪೋಕ್ಸಿಯಾ ಎಂಬ ಇನ್ನೊಂದು ಸೈಲೆಂಟ್ ಕಿ'”ಲ್ಲ’ರ್ ಇದೆ. ಇದರಿಂದಲೇ ಹರೆಯದ ಹುಡುಗರು ಒ್ರಾಣ ಕಳೆದುಕೊಳ್ಳುತ್ತಿರುವುದು. ಕೊರೋನ ವೈರಸ್ ಶ್ವಾಸಕೋಶವನ್ನು ಡ್ಯಾಮೆಜ್ ಮಾಡತೊಡಗಿದಾಗ ಹೀಗಾಗುತ್ತದೆ, ಕಾಯಿಲೆ ಉಲ್ಬಣವಾಗಿ ಯುವಕ ಉಸಿರಾಡಲು ಕೂಡ ಕಷ್ಟಪಡುತ್ತಾನೆ.

ಹೀಗೆ ಉಸಿರಾಟದ ಸಮಸ್ಯೆ ಕ್ರಮೇಣ ಆಗುವ ಬದಲು ಒಂದೇ ಸಲಕ್ಕೆ ಸುರುವಾಗಿಬಿಡುತ್ತದೆ. ಅಂದರೆ ಇವತ್ತು ಚೆನ್ನಾಗಿದ್ದವನು, ಎಲ್ಲರೊಂದಿಗೆ ಮಾತಾಡುತ್ತಾ ಇದ್ದವನು ಬೆಳಗಾಗುವಷ್ಟರಲ್ಲಿ ಉಸಿರಾಡಲೇ ಸಾಧ್ಯವಾಗದೇ ಸಾವನಪ್ಪಿಬಿಡುತ್ತಾನೆ. ಇದೇ ಈಗ ತುಂಬಾ ಅಪಾಯಕಾರಿಯಾಗಿ ಪರಿಣಿಮಿಸಿರುವುದು.

ಹ್ಯಾಪಿ ಹೈಪೋಕ್ಸಿಯಾ :

ಹ್ಯಾಪಿ ಹೈಪೋಕ್ಸಿಯಾ ಆಂದರೆ ರಕ್ತದೊಳಗಿನ ಆಕ್ಸಿಜನ್ ಪ್ರಮಾಣ ಕಡಿಮೆ ಆಗುವುದು. ವೈರಸ್ ನಿಂದ ಶ್ವಾಸಕೋಶ ತುಂಬಾ ಡ್ಯಾಮೆಜ್ ಆದಾಗ ಆಮ್ಲಜನಕದ ಒಳಹರಿವು ಹಾಗೂ ಕಾರ್ಬನ್ ಡೈ ಆಕ್ಸೈಡ್ ನ ಹೊರ ಹರಿವು ಕಡಿಮೆ ಆಗುತ್ತದೆ. ಹೀಗಾಗುವುದರಿಂದ ರಕ್ತದಲ್ಲಕನ ಆಮ್ಲಜನಕ ಚಲನೆ ಕಡಿಮೆಯಾಗುತ್ತದೆ. ಇದರಿಂದ ದೇಹ ನಿದಾನವಾಗಿ ವಿಷಮಯವಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ.

ದುರದೃಷ್ಟಕರ ಸಂಗತಿಯೇನೆಂದರೆ, ರೋಗ ಉಲ್ಬಣಿಸಿ ತೀರ ಕೊನೆಯ ಹಂತ ತಲುಪುವವರೆಗೂ ಇದು ಕೆಲವೊಮ್ಮೆ ಗೊತ್ತೇ ಆಗುವುದಿಲ್ಲ,ಅದಕ್ಕೇ ಇದಕ್ಕೆ ಸೈಲೆಂಟ್ ಕಿ'”ಲ್ಲ’ರ್ ಎನ್ನಲಾಗುತ್ತದೆ‌. ಇನ್ನೂ ವಿಚಿತ್ರವೆಂದರೆ, ಕೊರೋನ ಟೆಸ್ಟ್ ನೆಗೆಟಿವ್ ಬಂದವರಲ್ಲಿ ಕೂಡ ಇದು ಒಳಗೇ ಅಡಗಿ ಕೂತ ಪ್ರಕರಣಗಳು ಕೂಡ ಪತ್ತೆಯಾಗಿವೆ.

ಸರ್ಕಾರ ಅಥವಾ ವೈದ್ಯರಾದರೂ ಇದಕ್ಕೆ ಏನು ಮಾಡಿಯಾರು. ಸಾಧ್ಯವಾದಷ್ಟು ಎಲ್ಲರೂ ಜಾಗರೂಕರಾಗಿರಿ. ಒಂದು ಸಣ್ಣ ತಪ್ಪು ಕೂಡ ಈವಕ್ಕೆ ಎರವಾಗಬಹುದು. ಯಾರೂ ಜನರನ್ನು ಗೊಂದಲಕ್ಕೆ ದೂಡುವ ಮಾತಾಡದೇ ಸಾಧ್ಯವಾದಷ್ಟು ಜಾಗೃತೆ ಮೂಡಿಸಿ ನಮ್ಮವರನ್ನು ಕಾಪಾಡಿಕೊಳ್ಳೋಣ.
-Team Infotrend