ಸೋಂಕಿತಳಾಗಿದ್ದಾಗ ತನಗೆ ಊಟ ಕಳಿಸಿದವರಿಗೆ ಮರಳಿ ಊಟದ ಡಬ್ಬಿ ಕೊಡುವಾಗ ಆ ಮಹಿಳೆ ಏನು ಕೊಟ್ಟು ಕಳಿಸಿದಳು ಗೊತ್ತಾ!?

ಕೊರೋನ ನಮ್ಮ ದೇಶಕ್ಕೆ ವಕ್ಕರಿಸಿದಾಗಿನಿಂದ ಇಲ್ಲಿ ಬರೀ ಜನ ಮಾತ್ರವಲ್ಲ, ಸಂಬಂಧಗಳು ಕೂಡ ದೂರವಾಗಿವೆ. ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಣಿದು ಹಾಕಿರುವ ಕೊರೋನದಿಂದ ಉಂಟಾದ ಸಾವುಗಳ‌ ಲೆಕ್ಕ ಒಂದೆಡೆಯಾದರೆ, ಅದರಿಂದ ದೈಹಿಕ ಹಾಗೂ ಮಾನಸಿಕವಾಗಿ ನೋವುಂಡವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಮೊನ್ನೆ ತಾನೆ ಹಾವೆರಿಯಲ್ಲಿ ಸೋಂಕು ತಗುಲಿ ಆಸ್ಪತ್ರೆ ಸೇರಿ ಹುಷಾರಾಗಿ ಬಂದ ತಾಯಿಯನ್ನು ಮಗ ಮನೆಗೆ ಸೇರಿಸಿಕೊಳ್ಳಲಿಲ್ಲ, ಪರಿಣಾಮ ಆಕೆ ಕೆ’ರೆ’ಗೆ ಹಾ’ರಿ ಜೀ”ವ ಕ’ಳೆ’ದುಕೊಂಡಳು. ಅಂದರೆ ಇಲ್ಲಿ ತಾಯಿ ಮಗನ ಸಂಬಂಧವನ್ನೇ ಕೊರೋನ ಇಲ್ಲವಾಗಿಸಿತು.

ಇನ್ನು ನೀವು ಗಮನಿಸಿದ ಹಾಗೆ, ಇತ್ತೀಚೆಗೆ ಸಂಬಂಧಿಕರಾರೂ ಮನೆಗೆ ಬರುತ್ತಿಲ್ಲ, ಕರೆಯಲು ನಮಗೂ ಇಷ್ಟವಿಲ್ಲ. ಎಲ್ಲಿ ನಮಗೆ – ಮನೆಯ ಮಕ್ಕಳಿಗೆ ಸೋಂಕು ಅಂಟಿಸಿಬಿಡುತ್ತಾರೊ ಅಂತ ಭಯ ಎಲ್ಲರಲ್ಲೂ ಇದೆ. ಅಪ್ಪ, ಅಮ್ಮ, ಮಕ್ಕಳು, ಮೊಮ್ಮಕ್ಕಳು, ಅತ್ತೆ, ಸೊಸೆ, ಅಕ್ಕ, ತಂಗಿ, ಅಣ್ಣ, ತಮ್ಮ, ಸ್ನೇಹಿತರು ಹೀಗೆ ಎಲ್ಲರೂ ಒಬ್ಬರಿಂದೊಬ್ಬರು ದೂರವೇ ಇರಲು ಇಷ್ಟಪಡುತ್ತಾರೆ, ಅದರಲ್ಲೂ ಬೇರೆ ಊರಲ್ಲಿ ಇದ್ದವರನ್ನು ಕರೆಸಿಕೊಳ್ಳಲೂ ಹಿಂಜರಿಯುವ ಹಾಗಾಗಿದೆ.

ಒಟ್ಟಿನಲ್ಲಿ ಮನುಷ್ಯ ಸಂಬಂಧಗಳನ್ನು ಹಾಳು ಮಾಡಿದ ಕ್ರೇಡಿಟ್ ಕೊರೋನಕ್ಕೆ ಸಲ್ಲಲೇಬೇಕು. ಕೆಳಗೆ ವಿವರಿಸಿರುವ ಮಹಿಳೆಯೂ ಕಥೆಯೂ ಇದಕ್ಕೇ ಸಂಬಂಧಪಟ್ಟಿದ್ದು. ಎಲ್ಲ ಇದ್ದರೂ ಯಾರೂ ಇರದಂತೆ ಬದುಕಬೇಕಾದ ಪರಸ್ಥಿತಿ ಆಕೆಯದು‌. ಅದರಲ್ಲೂ ಕೊರೋನ ಸೋಂಕಿತಳಾದ ಮೇಲೆ ಪಕ್ಕದ ಮನೆಯವರೂ ಮಾತಾಡಿಸದ ಹಾಗಾಯಿತು.

ಮುಂಬೈನ ಈ ಮಹಿಳೆ ಒಂಟಿಯಾಗಿಯೇ ಹೋಮ್ ಐಶೋಲೇಶನ್ ನಲ್ಲಿ ಉಳಿಯುವಂತಾಯಿತು. ಕೊರೋನ ಬಂದಾಗ ಸುಸ್ತು, ಮೈ ಕೈ ನೋವು, ಜ್ವರ, ಕೆಮ್ಮು ಇವೆಲ್ಲ ಸಾಮಾನ್ಯ. ಅಂಥದರಲ್ಲೇ ಆಕೆ ಅಡುಗೆ ಮಾಡಿಕೊಂಡು ಊಟ ಮಾಡಬೇಕಿತ್ತು. ಸರ್ಕಾರ ಪಾಸಿಟಿವ್ ಹೇಳಿ ಸುಮ್ಮನಾಗಿತ್ತು, ಅತಿ ಹೆಚ್ಚು ಪ್ರಕರಣ ಬಂದಿದ್ದರಿಂದ ಸರ್ಕಾರ ಕೂಡ ಏನೂ ಮಾಡದೇ ಕೈಚೆಲ್ಲಿ ಕೂರುವಂಥ ಸಂಧರ್ಭ ಅದು.

ಆಗ ಆಕೆಗೆ ಆಪದ್ಬಾಂಧವನಂತೆ ಬಂದಿದ್ದು ಒಂದು ಸಂಸ್ಥೆ. ಸಮಸ್ತ ಮಹಾಜನ ಎಂಬ ಈ ಸಂಸ್ಥೆ ಹೋಮ್ ಐಶೋಲೇಶನ್ ಆದವರ ಬಗ್ಗೆ ಮಾಹಿತಿ ಪಡೆದು ಅವರೆಲ್ಲರಿಗೂ ಪೌಷ್ಟಿಕವಾದ ಒಳ್ಳೆ ಊಟ ಕಳಿಸತೊಡಗಿತು. ಅದರಲ್ಲಿ ಆಕೆಯ ವಿಳಾಸವೂ ಸೇರಿತ್ತು. ನೊಂದು ಬೆಂದು ಹೈರಾಣಾಗಿದ್ದ ಆಕೆಗೆ ನಿಜಕ್ಕೂ ಆ ಸಂಸ್ಥೆ ದೇವರಂತೆ ಬಂದಿತ್ತು.

ತನ್ನವರೆಲ್ಲ ದೂರ ಇಟ್ಟು ಮರೆತಿರುವಾಗ, ಸಂಬಂಧವೇ ಇಲ್ಲದ ಆ ಸಂಸ್ಥೆ ಹಾಗೂ ಅದರ ಸಿಬ್ಬಂಧಿಯ ಬಗ್ಗೆ ಆಕೆಗೆ ನಿಜಕ್ಕೂ ಅಪಾರ ಪ್ರೀತಿ ಗೌರವ ಮೂಡಿತು. ಹೇಗಾದರೂ ಸರಿ ಅವರ ಋಣ ತೀರಿಸಬೇಕು ಅಂದುಕೊಂಡಳು.

ಕೆಲವೇ ದಿನದಲ್ಲಿ ಹುಷಾರಾಗಿ ಚೇತರಿಸೊಕೊಂಡ ಆಕೆ ಸಂಸ್ಥೆಯವರಿಗೆ ಅವರ ಕೊನೆಯ ಊಟದ ಬಾಕ್ಸ್ ಮರಳಿ ಕಳಿಸುವ ಸಮಯ ಬಂತು. ಅಷ್ಟು ದೊಡ್ಡ ಸಂಸ್ಥೆಗೇ ಸಹಾಯ ಮಾಡುವಷ್ಟು ತಾನು ದೊಡ್ಡವಳಲ್ಲವಾದರೂ ಕೈಲಾಗಿದ್ದು ಏನಾದೂ ಮಾಡಬೇಕು ಅಂದುಕೊಂಡಾಗ ಆಕೆಗೆ ನೆನಪಾಗಿದ್ದು ಕೈಯಲ್ಲಿನ ಬಳೆ!

ತಕ್ಷಣ ತನ್ನ ಕೈಯಲ್ಲಿದ್ದ ನಾಲ್ಕು ಬಂಗಾರದ ಬಳೆಗಳನ್ನು ತಗೆದು ಆ ಊಟದ ಬಾಕ್ಸ್ ನಲ್ಲಿ ಹಾಕಿ ಮುಚ್ಚಿ ಕಳಿಸಿಬಿಟ್ಟಳು! ಮುಂದೆ ಬಾಕ್ಸ್ ಗಳನ್ನು ವಾಶ್ ಮಾಡುವಾಗ ಸಿಬ್ಬಂಧಿಗೆ ಬಳೆ ಸಿಕ್ಕಿದ್ದು ಅವರು ಆಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಮಹಿಳೆ ಹೇಳಿದರು…

ನನ್ನವರೆಲ್ಲ ನನ್ನನ್ನು ದೂರ ಇಟ್ಟು ಸಾಯಲು ಬಿಟ್ಟರು, ಆದರೆ ನೀವು ನನಗೆ ದೇವರಂತೆ ಬಂದು ಪ್ರೀತಿಯಿಂದ ಊಟ ಹಾಕಿ ಬದುಕಿಸಿಕೊಂಡಿದ್ದೀರಿ, ನಿಮ್ಮ‌ ಋಣ ತೀರಿಸುವುದು ಅಸಾಧ್ಯ, ಆದರೆ ನನ್ನ ಕೈಲಾಗಿದ್ದು ಮಾಡಿದ್ದೇನೆ, ಅದರಿಂದ ನನ್ನಂಥ ಮತ್ತೆ ನಾಲ್ಕು ಜನಕ್ಕೆ ಆಸರೆಯಾದರೆ ಅಷ್ಟೇ ಸಾಕು ಎಂದಳು!

ಸಿಬ್ಬಂಧಿಗೆ ಮಾತೇ ಹೊರಡಲಿಲ್ಲ! ಜೊತೆಗೆ ತನ್ನ ಹೆಸರು ವಿಳಾಸ ಬಹಿರಂಗಪಡಿಸಿದಂತೆ ಕೂಡ ಆಕೆ ಸಂಸ್ಥೆಗೆ ವಿನಂತಿಸಿಕೊಂಡಳಂತೆ. ಕೊರೋನ ಕಾಲದಲ್ಲಿ ಸಾಕಷ್ಟು ಜನ ಹಾಗೂ ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿವೆ, ಅವರಿಗೆಲ್ಲ ಧನ್ಯವಾದ.
-Team Infotrend