ಬಾವಲಿಗಳು ಮರದಲ್ಲಿ ಉಲ್ಟಾ ನೇತಾಡುತ್ತವಲ್ಲ ಯಾಕೆ? ವೈಜ್ಞಾನಿಕ ಕಾರಣ ವಿವರಿಸುವ ಮಾಹಿತಿ ಹಾಗೂ ವಿಡಿಯೊ ಇಲ್ಲಿದೆ ನೋಡಿ

ವಿಡಿಯೊ ಕೆಳಗೆ ಇದೆ, ಅದು ಹಿಂದಿಯಲ್ಲಿದ್ದು ಅದರಲ್ಲಿಯ ಮಾಹಿತಿಯೇ ಇಲ್ಲಿ ಕನ್ನಡದಲ್ಲಿದೆ, ಹಿಂದಿ ಬರಲಾರದವರು ಇಲ್ಲಿ ಓದಿ ಅಲ್ಲಿ ವಿಡಿಯೊ ನೋಡಬಹುದು… ನೀವೆಲ್ಲ ಸರ್ವೇ ಸಾಮಾನ್ಯವಾಗಿ ಬಾವಲಿಗಳನ್ನು ನೋಡಿಯೇ ಇರುತ್ತೀರಿ, ಇವುಗಳು ನಿಶಾಚರಿಗಳಾಗಿವೆ, ಅಂದರೆ ಹಗಲು ಹೊತ್ತಿನಲ್ಲಿ ಅಥವಾ ಬೆಳಕಿನ ಪ್ರದೇಶಗಳಲ್ಲಿ ಅಷ್ಟೊಂದು ಆಕ್ಟಿವ್ ಆಗಿರೋದಿಲ್ಲ, ಬದಲಾಗಿ ರಾತ್ರಿ ಹೊತ್ತು ಅಥವಾ ಕೆಲವು ಕತ್ತಲೆಯ ಪ್ರದೇಶಗಳಲ್ಲಿ ತುಂಬಾ ಆಕ್ಟಿವ್ ಇರುತ್ತವೆ. ಅಷ್ಟೇ ಅಲ್ಲದೇ ಗಿಡಗಳ ರೆಂಬೆ ಕೊಂಬೆಗಳಿಗೆ ಹಾಗೂ ಕತ್ತಲೆ ಇರುವ ಗುಹೆಗಳಲ್ಲಿ ಉಲ್ಟಾ ನೇತಾಡುತ್ತವೆ.

ಅವು ಸೀದಾ ಯಾವತ್ತೂ ಕೂರುವುದಿಲ್ಲ, ಮಲಗುವುದಿಲ್ಲ, ಇದರ ಹಿಂದಿನ ಕಾರಣವೇನು? ಬನ್ನಿ ನೋಡೋಣ…

ನಿಮಗೆ ಈ ವಿಚಾರ ಸ್ವಲ್ಪ ವಿಚಿತ್ರ ಏನಿಸಬಹುದು ಆದರೆ ಇದು ಸತ್ಯ, ಈ ಬಾವಲಿಗಳು ಏಕೈಕ ಹಾರುವ ಸಸ್ತನಿಗಳಾಗಿವೆ. ಅಂದರೆ ಮೊಟ್ಟೆ ಇಡದೇ ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತವೆ ಹಾಗೂ ಇವುಗಳು ಸ್ಥನಗಳನ್ನು ಹೊಂದಿದ್ದು ತಮ್ಮ ಮರಿಗಳಿಗೆ ಹಾಲುಣಿಸುತ್ತವೆ! ಹೀಗೆ ಹಾಲೂಣಿಸಿ ಹಾರಬಲ್ಲ ಏಕೈಕ ಜೀವಿ ಇದು.

ಜಗತ್ತಿನಾಧ್ಯಂತ ಈ ಬಾವಲಿಗಳ ಒಂದು ಸಾವಿರಕ್ಕಿಂತಲೂ ಹೆಚ್ಚು ಉಪಜಾತಿಗಳಿವೆ, ವಿಚಿತ್ರ ಹಾಗೂ ಭಯಾನಕ ಸತ್ಯವೆಂದರೆ ಇವುಗಳಲ್ಲಿ ಕೆಲವು ಜಾತಿಯ ಬಾವಲಿಗಳು ಕೇವಲ ರ’ಕ್ತ ಕು’ಡಿ’ಯು’ತ್ತವೆ..! ಈ ಕಾರಣದಿಂದ ಇವುಗಳನ್ನು ರಾಕ್ಷಸ ಬಾವಲಿಗಳು ಎಂದು ಕರೆಯಲಾಗುತ್ತದೆ.

ಜಗತ್ತಿನಲ್ಲಿ ಕಂಡುಬರುವ ಹೆಚ್ಚಿನ ಬಾವಲಿಗಳು ಕಂದು ಅಥವಾ ಕಪ್ಪು ಬಣ್ಣದ್ದಾಗಿರುತ್ತವೆ. ಇನ್ನೊಂದು ವಿಶೇಷ ಹಾಗೂ ಆಶ್ಚರ್ಯ ಸಂಗತಿ ಎಂದರೆ, ಈ ಬಾವಲಿಗಳು ಬರೋಬ್ಬರಿ 10 ಕೋಟಿ ವರ್ಷಗಳ ಹಿಂದೆಯೂ, ಅಂದರೆ ಡೈನೋಸಾರ್ ಗಳ ಕಾಲದಿಂದಲೂ ಆಸ್ತಿತ್ವದಲ್ಲಿವೆ. ಹಾಗೂ ಇಂದಿಗೂ ಸಹ ಇವುಗಳ ಆಸ್ತಿತ್ವ ಇದೆ.

ಬಾವಲಿಗಳು ಉಲ್ಟಾ ಏಕೆ ನೇತಾಡುತ್ತವೆ..??

ಇದರ ಹಿಂದಿನ ಮುಖ್ಯ ಕಾರಣವೆಂದರೆ, ಈ ಬಾವಲಿಗಳು ಮೂಲ ಸಸ್ತನಿಗಳೆಂದು ಈಗಾಗಲೇ ನಿಮಗೆ ತಿಳಿಸಿದ್ದೇವೆ ಅಂದರೆ ಮೂಲತಃ ಇವುಗಳು ಪಕ್ಷಿಗಳಂತೆ ರೆಕ್ಕೆಗಳನ್ನು ಹೊಂದಿರುವುದಿಲ್ಲ ಹೀಗಾಗಿ ಬಹಳಷ್ಟು ಶ್ರಮ ವಹಿಸಿ ಹಾರುತ್ತಿರುತ್ತವೆ. ಹಾಗೂ ಇವುಗಳು ಪಕ್ಷಿಗಳಂತೆ ಭೂಮಿಯ ಮೇಲಿಂದ ಒಮ್ಮೆಲೇ ಮೇಲೆ ಹಾರಲು ಸಾಧ್ಯವಿಲ್ಲ. ಹೀಗಾಗಿ ಮರದ ಮೇಲೆ ನೇತಾಡುತ್ತಿರುತ್ತವೆ ಮತ್ತು ಹಾಗೇ ಹಾರಿಬಿಡುತ್ತವೆ.

ಇದಷ್ಟೇ ಅಲ್ಲದೇ ಇವುಗಳ ಹಿಂದಿನ ಕಾಲುಗಳು ಅಷ್ಟೊಂದು ಶಕ್ತಿಯುತ ಹಾಗೂ ಪೂರ್ತಿಯಾಗಿ ವಿಕಾಸ ಹೊಂದಿರುವುದಿಲ್ಲ. ಈ ಕಾರಣದಿಂದ ಇವುಗಳು ವಿಮಾನದಂತೆ ವೇಗವಾಗಿ ಓಡಿ ಹಾರಲು ಕೂಡ ಬರುವುದಿಲ್ಲ. ಆ ಕಾರಣಕ್ಕೆ ಮೇಲೆ ನೇತಾಡುತ್ತಾ ಅಲ್ಲಿಂದಲೇ ಬೇಕಾದ ಕಡೆ ಹಾರುತ್ತವೆ, ಇದು ಅವಕ್ಕೆ ಸುಲಭ ಅನಿಸುತ್ತದೆ.

ಈ ಬಾವಲಿಗಳು ಉಲ್ಟಾ ನೇತಾಡುತ್ತಲೇ ನಿದ್ರೆಯನ್ನು ಕೂಡ ಮಾಡುತ್ತವೆ. ನಿಮಗನಿಸುತ್ತಿರಬಹುದು ಇವು ತಮ್ಮ ನಿಯಂತ್ರಣ ಕಳೆದುಕೊಂಡು ಕೆಳಗೆ ಏಕೆ ಬೀಳುವುದಿಲ್ಲ ಎಂದು, ಆದರೆ ಇದರ ಹಿಂದೆ ಒಂದು ಕಾರಣವಿದೆ. ಇವುಗಳ ಕಾಲಿನ ರಕ್ತನಾಳಗಳು ಎಷ್ಟೊಂದು ಸ್ಟ್ರಾಂಗ್ ಆಗಿವೆ ಎಂದರೆ, ಇವುಗಳು ಕೇವಲ ತಮ್ಮ ಬೆರಳುಗಳ ಸಹಾಯದಿಂದಲೇ ಇಡೀ ದೇಹದ ಭಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಶಕ್ತಿ ಹೊಂದಿರುತ್ತವಂತೆ..!

ಈ ಎಲ್ಲಾ ಕಾರಣಗಳಿಂದ ಬಾವಲಿಗಳು ಸಸ್ತನಿಗಳಲ್ಲಿಯೇ ವಿಚಿತ್ರ ಜೀವಿಗಳಾಗಿವೆ. ಈ ಬಗ್ಗೆ ಮೇಲೊಂದು ವಿಡಿಯೊ ಕೂಡ ಇದೆ, ಇದರಲ್ಲಿಯ ಮಾಹಿತಿಯೇ ಅಲ್ಲಿ ಹಿಂದಿಯಲ್ಲಿದೆ, ಹಿಂದಿ ಬರಲಾರದವರು ಇಲ್ಲಿ ಓದಿ ಅಲ್ಲಿ ಬರಿ ನೋಡಬಹುದು.

ಬಾವಲಿಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು :

1 ಸಸ್ತನಿ ಜೀವಿಗಳಲ್ಲಿ ಹಾರಬಲ್ಲ ಏಕೈಕ ಜೀವಿ ಬಾವಲಿ.

2 ಒಂದು ಬಾವಲಿ ಒಂದು ಗಂಟೆಯಲ್ಲಿ 600 ಬೆಡ್‌ ಬಗ್‌ ಗಳನ್ನು ಬೇಟೆಯಾಡಬಲ್ಲದು ಮತ್ತು ಈ ಜೀವಿ ಒಂದು ಗಂಟೆಯಲ್ಲಿ 1500 ಸಣ್ಣ ಹುಳಗಳನ್ನು ಸಹ ತಿನ್ನಬಲ್ಲುದು.

3 ಬಾವಲಿ ರೈತ ಸ್ನೇಹಿ ಕೂಡ ಹೌದು, ಬಾವಲಿಗಳು ಬೇಸಿಗೆಯಲ್ಲಿ ಜಮೀನಿನಲ್ಲಿರುವ ಬಹಳಷ್ಟು ಕೀಟಗಳನ್ನು ತಿಂದು ಅವಯ ಬೆಳೆ ಹಾನಿ ಮಾಡುವುದನ್ನು ತಪ್ಪಿಸುತ್ತದೆ

4 ಚೀನಾ ಮತ್ತು ಜಪಾನ್‌ ನಲ್ಲಿ ಬಾವಲಿಗಳನ್ನು ಅದೃಷ್ಟ ಮತ್ತು ಶುಭ ಚಿಹ್ನೆಗಳ ಸಂಕೇತವೆಂದು ಪರಿಗಣಿಸಲಾಗಿದೆ.

5 ಗನ್ ಪೌಡರ್ ತಯಾರಿಸಲು ಬಾವಲಿಗಳ ಮಲವನ್ನು ಸಹ ಬಳಸಬಹುದು. ಉದಾಹರಣೆಗೆ ಅಮೆರಿಕಾದ ಅಂತರ್ಯುದ್ಧದಲ್ಲಿ ಇದನ್ನು ಒಮ್ಮೆ ಮಾಡಲಾಗಿದೆ.

6 ಬಾವಲಿಗಳಲ್ಲಿ ಕೆಲವು ಜಾತಿಯ ಬಾವಲಿಗಳು ರಕ್ತವನ್ನು ಮಾತ್ರ ಕುಡಿಯುತ್ತವೆ ಮತ್ತು ಅವುಗಳನ್ನು ರಕ್ತಪಿಶಾಚಿ ಬಾವಲಿಗಳು ಎಂದು ಕರೆಯಲಾಗುತ್ತದೆ.

7 ರಕ್ತಪಿಶಾಚಿ ಬಾವಲಿ 1 ದಿನದಲ್ಲಿ ಅದರ ತೂಕಕ್ಕೆ ಸಮಾನವಾದ ರಕ್ತವನ್ನು ಕುಡಿಯಬಲ್ಲುದು!

8 ಬಾವಲಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ವಿಶ್ವದ ಏಕೈಕ ದೇಶ ಅಮೆರಿಕ.

9 ದೊಡ್ಡ ಬಾವಲಿಗಳ ರೆಕ್ಕೆಗಳು ಸುಮಾರು 5 ರಿಂದ 6 ಅಡಿ ಉದ್ದವಿರಬಹುದು.

10 ವಿಜ್ಞಾನಿಗಳ ಪ್ರಕಾರ, ಪ್ರಪಂಚದಲ್ಲಿ ಈವರೆಗೆ ಒಟ್ಟು 1100 ಜಾತಿಯ ಬಾವಲಿಗಳು ಪತ್ತೆಯಾಗಿವೆ, ಅವುಗಳಲ್ಲಿ ಹೆಚ್ಚಿನವು ಅಮೆರಿಕಾದಲ್ಲಿ ಕಂಡುಬರುತ್ತವೆ.

11 ಬಾವಲಿಗಳು ತಮ್ಮ ಗುಹೆಗಳಿಂದ ನಿರ್ಗಮಿಸುವಾಗ ಯಾವಾಗಲೂ ಎಡಗಡೆಗೇ ತಿರುಗುತ್ತವೆ!

12 ಬಾವಲಿಗಳು ಪ್ರಕೃತಿಗೆ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ಉದಾಹರಣೆಗೆ ಬಾವಲಿಗಳು ಮರದ ಸಸ್ಯಗಳ ಬೀಜ ಮತ್ತು ಹಣ್ಣುಗಳನ್ನು ತಿನ್ನುತ್ತವೆ ಮತ್ತು ಅವುಗಳ ಬೀಜಗಳನ್ನು ಕಾಡಿನಲ್ಲಿ ಹರಡುತ್ತವೆ. ಇದರಿಂದಾಗಿ ಕಾಡುಗಳು ದಟ್ಟವಾಗುತ್ತವೆ ಮತ್ತು ಆಮ್ಲಜನಕದ ಮಟ್ಟವು ಹೆಚ್ಚುತ್ತದೆ.

13 ಕೆಲವು ಜಾತಿಯ ಬಾವಲಿಗಳು ಹೆಚ್ಚು ಕಾಲ ಬದುಕಬಲ್ಲವು, ಉದಾಹರಣೆಗೆ ಕಂದು ಬಾವಲಿಗಳು ಸುಮಾರು 40 ವರ್ಷಗಳ ಕಾಲ ಬದುಕಬಲ್ಲವು.

14 ಪ್ರಾಚೀನ ಯುರೋಪಿನಲ್ಲಿ ದೇಶೀಯ ಔಷಧಿಗಳನ್ನು ತಯಾರಿಸಲು ಬಾವಲಿಗಳನ್ನು ಬಳಸಲಾಗುತ್ತಿತ್ತು.

15 ಪ್ರಪಂಚದಲ್ಲಿ ಕಂಡುಬರುವ ಅತ್ಯಂತ ಚಿಕ್ಕ ಜಾತಿಯ ಬಾವಲಿಗಳಿಗೆ ಬಂಬಲ್ಬೀ ಎಂದು ಹೆಸರಿಡಲಾಗಿದೆ ಮತ್ತು ಅದರ ತೂಕ ಕೇವಲ 215 ಗ್ರಾಂ!

16 ಬಾವಲಿಗಳು ಮೊಟ್ಟೆಗಳನ್ನು ಇಡುವುದಿಲ್ಲ, ಅದು ಮರಿಗೆ ನೇರವಾಗಿ ಜನ್ಮ ನೀಡುತ್ತದೆ. ಏಕೆಂದರೆ ಅದು ಮನುಷ್ಯರಂತಹ ಸಸ್ತನಿ ಜೀವಿ.

-ಮಂಜುನಾಥ್