VIDEO : ಅನ್ನದಾತನ ವೀಡಿಯೋ ನೋಡಿ ಕಣ್ಣೀರಿಟ್ಟ ಜನರಿಗೆ ವೀಡಿಯೋ ಕೊನೆಯಲ್ಲಿ ಕಾದಿತ್ತು ಶಾಕ್!
ನಮ್ಮ ದೇಶದಲ್ಲಿ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಕೃಷಿ ಎಂದೇ ಹೇಳಲಾಗುತ್ತದೆ. ಆದರೂ ಕೃಷಿ ಹಾಗೂ ಅದರಿಂದಲೇ ಜೀವನವನ್ನು ಕಟ್ಟಿಕೊಂಡ ಅಸಂಖ್ಯಾತ ಮಂದಿ ರೈತರು ತಮ್ಮ ಜೀವನದ ನಿರ್ವಹಣೆಗೆ ಸಹ ಕಷ್ಟ ಪಡುವಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಅನ್ನದಾತನಾದ ರೈತನಿಗೆ ಸೂಕ್ತ ನೆರವು, ಅಗತ್ಯವಿರುವ ಸೌಲಭ್ಯಗಳು, ನಷ್ಟ ಎದುರಾದಾಗ ಪರಿಹಾರ ಇದ್ಯಾವುದೂ ಸಹ ಸರಿಯಾದ ಸಮಯದಲ್ಲಿ ಅವರ ಕೈ ಹಿಡಿಯುತ್ತಿಲ್ಲ ಎನ್ನುವುದು ವಾಸ್ತವ.
ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಜೀ’ವ ಕ’ಳೆ’ದು’ಕೊಂಡ ರೈತರು ಅದೆಷ್ಟೋ, ಅನ್ನದಾತನ ಗೋಳು ಅಧಿಕಾರಿಗಳು ಹಾಗೂ ನಾಯಕರ ಮಾತಿನ ಸರಕಾಗಿದೆಯೇ ಹೊರತು ವಾಸ್ತವದಲ್ಲಿ ಆತನ ಕೈ ಹಿಡಿದು ಮೇಲೆತ್ತುವ ಮಂದಿ ಮಾತ್ರ ಕಾಣದೇ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೈತರು ತಮ್ಮ ಸಂಕಟವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು ಸಹ ಉಂಟು.
ರೈತರು ತಮಗೆ ಉಂಟಾದ ನಷ್ಟದ ಕುರಿತಾಗಿ ವೀಡಿಯೋ ಗಳನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಶಾಸಕರ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡುವರು. ಅಲ್ಲದೇ ಈ ವೀಡಿಯೋ ಗಳ ಮೂಲಕ ಅವರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು, ಸಂಕಷ್ಟಗಳನ್ನು ಜನರ ಮುಂದೆ ಇಡುತ್ತಾರೆ.

ಆದರೆ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಇದು ಕೂಡಾ ಬೆಳೆ ಹಾನಿಯಿಂದ ಕಂಗಲಾದ ರೈತನೊಬ್ಬನು ಗೋ’ಳನ್ನು ತೋರಿಸುವ ವೀಡಿಯೋ ಆಗಿದೆ. ಆದರೆ ಈ ವೀಡಿಯೋದ ಕೊನೆಯಲ್ಲಿ ಕಂಡ ಟ್ವಿಸ್ಟ್ ನೋಡಿ ಜನರು ದಂಗಾಗಿದ್ದಾರೆ. ಬಹುಶ ಿದು ಹಳೆಯ ವಿಡಿಯೊವಾಗಿದ್ದು ಮತ್ತೆ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಗಮನಿಸದಾಗ ಬಾಳೆ ತೋಟವೊಂದರಲ್ಲಿ ಹಾಳಾಗಿರುವ ಬೆಳೆಯ ನಡುವೆ ನೆಲದ ಮೇಲೆ ಬಿದ್ದು ರೈತನೋರ್ವ ಹತಾಶೆಯಿಂದ ಗೋಳಾಡುತ್ತಾ ತನ್ನ ವೇದನೆಯನ್ನು ಹೇಳಿಕೊಳ್ಳುತ್ತಿರುವುದನ್ನು ನೋಡಬಹುದು. ಆತ ತನಗಾಗಿರುವ ನಷ್ಟದ ಕುರಿತಾಗಿ ಅತ್ತು, ಕಿರುಚುತ್ತಾ ತನ್ನ ನೋವಿಗೆ ಮಿಡಿಯಲು ಯಾವ ಅಧಿಕಾರಿಗಳು, ಯಾವ ನಾಯಕರು ಬರಲಿಲ್ಲ ಎಂದು ಆತ ಹೊರಳಾಡುತ್ತಾನೆ.

ಇದನ್ನು ನೋಡಿದಾಗ ಎಂತಹವರ ಮನಸ್ಸು ಸಹ ಕರಗುತ್ತದೆ. ಅನ್ನದಾತನ ಪರಿಸ್ಥಿತಿ ಕಂಡು ಭಾವುಕರಾಗಲೂ ಬಹುದು. ಎಷ್ಟೋ ಜನ ಅರ್ದ ನೋಡಿ ಮುಂದೆ ನೋಡಲಾಗದೇ ಸ್ಕಿಪ್ ಮಾಡುತ್ತಾರೆ. ಆದರೆ ಪೂರ್ತಿ ನೋಡಿದಾಗಲೇ ವೀಡಿಯೋದಲ್ಲಿ ಕಡೆಯ ಕೆಲವು ಕ್ಷಣಗಳಲ್ಲಿ ನಿಮಗೆ ಕಾಣುವುದು ನಿಜಾಂಶ!
ಹಾಗೆ ರೈತ ತನ್ನ ಗೋಳಾಟ ಮಾಡಿದ್ದನ್ನು ವೀಡಿಯೋದಲ್ಲಿ ಒಬ್ಬಾತ ರೆಕಾರ್ಡ್ ಮಾಡುತ್ತಿರುತ್ತಾನೆ. ನೊಂದ ರೈತ ಇಷ್ಟು ಹೊತ್ತು ನೆಲದ ಮೇಲೆ ಬಿದ್ದು ಹೊರಳಾಡಿ, ಅರಚಿ, ಕಣ್ಣೀರು ಹಾಕಿದವನು ಅದನ್ನು ನಿಲ್ಲಿಸಿ ವೀಡಿಯೋ ರೆಕಾರ್ಡ್ ಮಾಡುವಾತನನ್ನು ಸಾಕಾ? ಎಂದು ಪ್ರಶ್ನೆ ಮಾಡುತ್ತಾನೆ!!! ಅಂದರೆ ಇಷ್ಟು ಹೊತ್ತು ವೀಡಿಯೋ ಮಾಡುವುದಕ್ಕಾಗಿ ಆ ವ್ಯಕ್ತಿಯು ಅತೀವವಾದ ದುಃಖವಾದಂತೆ ನಟಿಸುತ್ತಿದ್ದನಾ? ಆತನ ನೋವು ನಿಜವಲ್ಲವೇ? ಎನ್ನುವ ಅನುಮಾನ ನಮ್ಮನ್ನು ಕಾಡುವುದಲ್ಲದೇ ನಾವು ಶಾ ಕ್ ಆಗುತ್ತೇವೆ.
ಇಂತಹ ವೀಡಿಯೋಗಳಿಂದ ನಿಜವಾಗಿಯೂ ನೊಂದ ರೈತರು ಮುಂದೆ ತಮ್ಮ ನೋವು ಹೇಳಿಕೊಂಡು ವೀಡಿಯೋ ಮಾಡಿದರೆ ಜನರು ನಂಬುವರೇ?? ರೈತ ತನ್ನ ನೋವು, ಹತಾಶೆ, ಸಂಕಟವನ್ನು ಹೇಳಿದ್ದು ನಿಜವೋ ಸುಳ್ಳೋ ಆದರೆ ವೀಡಿಯೋಗಾಗಿ ಆತ ಅಷ್ಟೆಲ್ಲಾ ಮಾಡಿದನು ಎಂಬುದು ಎಲ್ಲೋ ಒಂದು ಕಡೆ ಬೇಸರವನ್ನು ಉಂಟು ಮಾಡಬಹುದು.
ಅಲ್ಲದೇ ಪ್ರಸ್ತುತ ಹೀಗೆ ಮಾಡಿದರೆ ಮಾತ್ರವೇ ಎಲ್ಲರನ್ನೂ ತಲುಪಬಹುದು ಎನ್ನುವ ಆಲೋಚನೆ ಇದ್ದರೂ ಇರಬಹುದು. ಏನೇ ಆದರೂ ವೀಡಿಯೋ ಕೊನೆಗೆ ಕಾಣುವ ದೃಶ್ಯ ಜನರಿಗಂತೂ ಶಾ ಕ್ ನೀಡಿದೆ. ಮುಂಬರುವ ರೈತರ ವಿಡಿಯೊಗಳನ್ನು ಸಂಶಯದಿಂದ ನೊಡುವಂತೆ ಮಾಡಿದೆ. ವಿಡಿಯೊ ಮೇಲಿದೆ ನೋಡಿ…