ವೀ’ರ್ಯ ದಾನಿಯಿಂದ ಹುಟ್ಟಿದ ಯುವತಿ, ವಿಶ್ವದಾದ್ಯಂತ ಇರುವ ತನ್ನ 63 ಜನ ಸಹೋದರ, ಸಹೋದರಿಯರನ್ನು ಹುಡುಕಿದ ರೋಚಕ ಕಥೆ

ಬ್ರಿಟನ್ ದೇಶದ ಫ್ಲೊರಿಡಾ ನಗರದ ನಿವಾಸಿಯಾಗಿರುವ ಕಿಯಾನಿ ಎರೊಯೊ ಎನ್ನುವ ಯುವತಿಯೊಬ್ಬಳು ಒಂದು ವಿಶೇಷವಾದ ಹಾಗೂ ಬಹಳ ಆಸಕ್ತಿಕರ ಎನಿಸುವಂತಹ ಕಾರ್ಯಾಚರಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈ ಯುವತಿಯು ಒಬ್ಬ ಸ್ಪ’ರ್ಮ್ ಡೊನರ್ ಅಥವಾ ವೀ’ರ್ಯ ದಾನಿಯಿಂದ ಜನಿಸಿದ ಶಿಶುವಾಗಿದ್ದ, ಇದೀಗ ಈಕೆ ಪ್ರಪಂಚದಾದ್ಯಂತ ವಿವಿಧ ಮೂಲೆಗಳಲ್ಲಿ ಇರುವಂತಹ ತನ್ನ ಒಡ ಹುಟ್ಟಿದವರನ್ನು ಹುಡುಕುವುದರಲ್ಲಿ ತಲ್ಲೀನಳಾಗಿದ್ದಾಳೆ.

ತನ್ನ ಸಹೋದರ ಸಹೋದರಿಯರೊಂದಿಗೆ ಸದಾ ಸಂಪರ್ಕದಲ್ಲಿ ಇರುವಂತಹ ಉದ್ದೇಶದೊಂದಿಗೆ ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡುತ್ತಾ ಆಕೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾಳೆ.

23 ವರ್ಷ ವಯಸ್ಸಿನ ಕಿಯಾನಿ ಮಾತನಾಡುತ್ತಾ, ನಾನು ಚಿಕ್ಕವಯಸ್ಸಿನಿಂದಲೂ ನನ್ನ ನೆರೆಹೊರೆಯಲ್ಲಿ ಮಕ್ಕಳು ತಮ್ಮ ಕುಟುಂಬದ ಜೊತೆಗೆ ಪೋಷಕರ ಜೊತೆಗೆ ಇರುವುದನ್ನು ನೋಡುತ್ತಿದ್ದೆ. ಆ ಮಕ್ಕಳ ಜೊತೆಯಲ್ಲಿ ಅವರ ಮನೆಗಳಲ್ಲಿ ತಂದೆ-ತಾಯಿ ಇಬ್ಬರೂ ಇರುತ್ತಿದ್ದರು. ಆದರೆ ನಮ್ಮ ಮನೆಯಲ್ಲಿ ನನಗೆ ಇದ್ದಿದ್ದು ಮಾತ್ರ ಇಬ್ಬರೂ ಸಹಾ ತಾಯಂದಿರೇ.

ಇತರೆ ಮಕ್ಕಳ ಹಾಗೆ ನನಗೆ ಅಪ್ಪ ಇರಲಿಲ್ಲ. ಅಲ್ಲದೇ ತಂದೆಯ ಕುರಿತಾಗಿ ನನಗೆ ಕೆಲವು ವಿಷಯಗಳು ಮಾತ್ರವೇ ತಿಳಿದಿತ್ತು. ಅವರು ಕಲೆ ಮತ್ತು ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದರು ಎಂಬುದು ನನಗೆ ಗೊತ್ತಾಯ್ತು. ಅಲ್ಲದೇ ನನಗೂ ಕೂಡ ಕಲೆಯಲ್ಲಿ ಆಸಕ್ತಿ ಇದ್ದು, ನಾನು ನನ್ನ ಪೇಂಟಿಂಗ್ ಹವ್ಯಾಸದಿಂದ ಬಹಳಷ್ಟು ಪೇಂಟಿಂಗ್ ಗಳನ್ನು ಮಾಡಿದ್ದೇನೆ.

ಕ್ರೀಡೆ ಸಹಾ ನನ್ನ ಆಸಕ್ತಿಯಾಗಿದ್ದು, ಸರ್ಫಿಂಗ್ ನನ್ನ ನೆಚ್ಚಿನ ಹವ್ಯಾಸವಾಗಿದೆ. ಆದರೆ ನನ್ನ ತಾಯಿಯ ಮನೆಯ ಕಡೆ ಇಂತಹ ವಾತಾವರಣ ಇಲ್ಲ. ಆದ್ದರಿಂದಲೇ ನಾನು ತಂದೆಯಿಂದ ಇಂತಹ ಇನ್ನಷ್ಟು ಗುಣಗಳನ್ನು ಪಡೆದುಕೊಂಡಿದ್ದೇನೆ ಎನ್ನುವುದನ್ನು ತಿಳಿಯಲು ಬಯಸುತ್ತಿದ್ದೆ ಎಂದು ಹೇಳಿದ್ದಾರೆ.

ಕಿಯಾನಿ ತಾನು ಚಿಕ್ಕವಯಸ್ಸಿನಿಂದಲೇ ಅಪ್ಪನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ, ಮನೆಯಲ್ಲಿ ಅವರು ಇಲ್ಲದ ಕೊರತೆ ನನ್ನನ್ನು ಸದಾ ಕಾಡುತ್ತಿತ್ತು. ನಾನು ಪ್ರತಿ ವರ್ಷ ಫಾದರ್ಸ್ ಡೇ ಪ್ರಯುಕ್ತ ನನ್ನ ಸ್ಪ’ರ್ಮ್ ಡೋನರ್ ಫಾದರ್ ಗಾಗಿ ವಿಶೇಷವಾದ ಶುಭಾಶಯ ಕಾರ್ಡ್ ಗಳನ್ನು ಸಿದ್ಧ ಪಡಿಸುತ್ತಿದ್ದೆ.

ಆದರೆ ಅದೆಲ್ಲಾ ಹಾಗೇ ಉಳಿಯುತ್ತಿತ್ತು. ಏಕೆಂದರೆ ಅವರ ಪ್ರೊಫೈಲ್ ಖಾಸಗಿಯಾಗಿ ಇತ್ತು ಹಾಗೂ ಅವರ ಪರಿಚಯ ಅಷ್ಟಾಗಿ ಯಾರಿಗೂ ನೀಡುತ್ತಿರಲಿಲ್ಲ. ಆದ್ದರಿಂದಲೇ ಅವರ ಸ್ಪ’ರ್ಮ್ ಡೊನೇಟ್ ಮಾಡಿದ್ದರಿಂದ ಜನ್ಮಿಸಿದ ಯಾವುದೇ ಮಕ್ಕಳಿಗೂ ಅವರನ್ನು ಸಂಪರ್ಕಿಸುವುದು ಸಾಧ್ಯವಿರಲಿಲ್ಲ ಎನ್ನುತ್ತಾರೆ ಕಿಯಾನಿ.

ನಂತರದ ದಿನಗಳಲ್ಲಿ ಕಿಯಾನಿ ಒಂದು ಸ್ಪ’ರ್ಮ್ ಡೋನರ್ ಕಂಪನಿಗಾಗಿ ಮಾಡಿದ ವಿಡಿಯೋವನ್ನು ನೋಡಿ ಆಕೆಯ ತಂದೆ ಮನಸ್ಸನ್ನು ಬದಲಾಯಿಸಿದರು. ಅವರು ತಮ್ಮ ಪ್ರೊಫೈಲನ್ನು ಪಬ್ಲಿಕ್ ಮಾಡಿದರು. ಅಲ್ಲದೆ ಕಿಯಾನಿಗೆ 18 ವರ್ಷ ವಯಸ್ಸಾದ ಮೇಲೆ ಆಕೆ ತನ್ನ ತಂದೆಯನ್ನು ಭೇಟಿ ಮಾಡುವ ಅವಕಾಶ ದಕ್ಕಿತು.

ಈ ವೇಳೆಯಲ್ಲಿ ಕಿಯಾನಿ ತನ್ನ ಸ್ಪ’ರ್ಮ್ ಡೋನರ್ ಫಾದರ್ ನಿಂದ ಜನಿಸಿದಂತಹ ತನ್ನ ಸಹೋದರ ಸಹೋದರಿಯರನ್ನು ಭೇಟಿ ಮಾಡಬೇಕು ಎನ್ನುವ ಇಚ್ಛೆ ಉಂಟಾಯಿತು. ಆಕೆ ಸ್ಪ’ರ್ಮ್ ಡೋನೇಟ್ ಮಾಡುವ ಕಂಪನಿಯ ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಮಾಡಿದರು. ಅವರಿಂದ ತನ್ನ ಸಹೋದರ-ಸಹೋದರಿಯರ ಕುರಿತಾಗಿ ಮಾಹಿತಿಯನ್ನು ಪಡೆದು ಅವರನ್ನು ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದರು.

ಎಲ್ಲಕ್ಕಿಂತ ಮೊದಲು ತನಗೆ ಹದಿನೈದು ವರ್ಷ ವಯಸ್ಸಾಗಿದ್ದಾಗ ಕುಟುಂಬವೊಂದು ತನ್ನನ್ನು ಭೇಟಿ ಮಾಡಿದ್ದರು. ಆ ಕುಟುಂಬದಲ್ಲಿ ಇಬ್ಬರು ಅವಳಿ ಸಹೋದರಿಯರು ಇದ್ದು, ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿದ್ದರು. ಆ ಇಬ್ಬರು ಹೆಣ್ಣುಮಕ್ಕಳು ಕೂಡಾ ನನ್ನ ಹುಟ್ಟಿಗೆ ಕಾರಣವಾದ ಅದೇ ಸ್ಪ’ರ್ಮ್ ಡೋನರ್ ಎಂದು ತಿಳಿದು ಅವರಿಬ್ಬರೂ ನನ್ನ ಸಹೋದರಿಯರು ಎಂದು ಭಾಸವಾಯಿತು.

ಆಗ ಅವರೊಟ್ಟಿಗೆ ಕಳೆದ ದಿನಗಳು ಬಹಳ ಸಂತೋಷವನ್ನು ನೀಡಿದ್ದವು. ಅದಾದ ಮೇಲೆ ನನ್ನ ಇನ್ನುಳಿದ ಸಹೋದರ ಸಹೋದರಿಯರನ್ನು ಹುಡುಕಬೇಕೆಂಬ ಹಂಬಲವುಂಟಾಯಿತು ಎಂದು ಕಿಯಾನಿ ಹೇಳಿದ್ದಾರೆ. ಕಿಯಾನಿಯ ಪ್ರಯತ್ನದಿಂದ ಆಕೆಗೆ ಒಟ್ಟು 63 ಜನ ಸಹೋದರ-ಸಹೋದರಿಯರು ಇರುವುದು ತಿಳಿದು ಬಂದಿದೆ!

ಕೆನಡಾದಿಂದ ಆಸ್ಟ್ರೇಲಿಯಾದವರೆಗೂ ಆಕೆಯ ಸ್ಪ’ರ್ಮ್ ಡೋನರ್ ಫಾದರ್ ನಿಂದ ಜನ್ಮ ತಳೆದ ಮಕ್ಕಳು ಇದ್ದು, ಅವರೆಲ್ಲಾ ತನ್ನ ಸಹೋದರ ಸಹೋದರಿಯರು ಎನ್ನುವ ಕಿಯಾನಾ ಈಗಾಗಲೇ ಎಲ್ಲರನ್ನೂ ಒಮ್ಮೆ ಭೇಟಿ ಮಾಡಿದ್ದಾರೆ. ಆಕೆ ನೆಲೆಸಿರುವ ನಗರ ಫ್ಲೋರಿಡಾದಲ್ಲೇ ತನಗೆ 12 ಜನ ಅಣ್ಣ-ತಂಗಿಯರಿದ್ದಾರೆ!

ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಎಲ್ಲೂ ಹೊರಗೆ ಓಡಾಟ ಮಾಡಲು ಆಗದ ಕಾರಣ ಕೊರೊನಾ ಸಂಕಷ್ಟ ಮುಗಿದ ನಂತರ ಮತ್ತೆ ಎಲ್ಲರನ್ನೂ ಭೇಟಿಯಾಗುವುದಾಗಿ ಕಿಯಾನ ಹೇಳುತ್ತಾರೆ. ಅವರ ಈ ಭಾವನಾತ್ಮಕ ಹಂಬಲ ಎಲ್ಲರಿಗೂ ಮೆಚ್ಚುಗೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಳ ಕಾರ್ಯಾಚರಣೆಗೆ ತುಂಬಾ ಜನ ಶುಭ ಹಾರೈಸಿದ್ದಾರೆ.
-Team Infotrend