‘ಜೀವನದಲ್ಲಿ ಯಶಸ್ಸು ಕಾಣುವದು ಹೇಗೆ’ ಎಂದು ಕೇಳಿದ ಹುಡುಗಿಗೆ, ನಾಲ್ಕೇ ವಾಕ್ಯದಲ್ಲಿ ಅದ್ಭುತವಾದ ಉತ್ತರ ನೀಡಿದ ಮಿಸೈಲ್ ಮ್ಯಾನ್ ಅಬ್ದುಲ್ ಕಲಾಮ್!!

ಗುರುವಿನ ಸ್ಥಾನವೇ ಪರಮಶ್ರೇಷ್ಠ ಎಂದು ಯಾರೋ ಒಬ್ಬರು ನಿಜವಾಗಿ ಹೇಳಿದ್ದಾರೆ. ಆದ್ದರಿಂದ ಜೀವನದಲ್ಲಿ ಗುರುವನ್ನು ಮರೆಯಬಾರದು. ಸಾಮಾನ್ಯವಾಗಿ ನಾವು ಎಲ್ಲರನ್ನೂ ಬಿಟ್ಟು ಮುಂದೆ ಸಾಗುತ್ತೇವೆ, ಯಾರ ಸಹಾಯದಿಂದ ನಾವು ಯಶಸ್ಸಿನ ಸಾಗರವನ್ನು ದಾಟಿದ್ದೇವೆಯೋ ಅವರನ್ನು ಮರೆತುಬಿಡುತ್ತೇವೆ. ನಾವು ಎಷ್ಟು ಯಶಸ್ವಿಯಾಗುತ್ತೇವೆ ಅಥವಾ ಎಷ್ಟು ವಿಫಲರಾಗುತ್ತೇವೆ ಎಂಬುದು ಮುಖ್ಯವಲ್ಲ. ನಿಮ್ಮ ವ್ಯಕ್ತಿತ್ವವನ್ನು ನೀವು ಎಷ್ಟು ಎತ್ತರಕ್ಕೆ ಏರಿಸುತ್ತೀರಿ ಎಂಬುದು ಜೀವನದಲ್ಲಿ ತುಂಬಾ ಮುಖ್ಯವಾಗಿದೆ.

ಮಕ್ಕಳ ವಿದ್ಯಾಭ್ಯಾಸವು ಮೊದಲು ಮನೆಯಲ್ಲಿ ಮತ್ತು ಮನೆಯಿಂದ ಹೊರಬಂದ ನಂತರ ಶಾಲೆಯಲ್ಲಿ ಪ್ರಾರಂಭವಾಗುತ್ತದೆ. ಶಿಕ್ಷಕರು ಕೂಡ ತರಗತಿಯಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಸುಧಾರಿಸಲು ಶ್ರಮಿಸುತ್ತಾರೆ. ತರಗತಿಯಲ್ಲಿ ಶಿಕ್ಷಕರು ನಮ್ಮನ್ನು ಒಳ್ಳೆಯ ರೂಢಿ ಕಲಿಸುವದರೊಂದಿಗೆ ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ದೂರು ಮಾಡಲು ಪ್ರಯತ್ನ ಮಾಡುತ್ತಾರೆ.

ಶಿಕ್ಷಕರು ತಾನು ಕಲಿಸುವ ವಿದ್ಯಾರ್ಥಿಯು ಬೆಳೆದು ಉತ್ತಮ ಸ್ಥಾನವನ್ನು ತಲುಪಬೇಕು ಮತ್ತು ಕುಟುಂಬ ಮತ್ತು ಶಾಲೆಗೆ ಕೀರ್ತಿ ತರಬೇಕೆಂದು ಯಾವಾಗಲೂ ಬಯಸುತ್ತಾರೆ. ಜೀವನದಲ್ಲಿ ನಾವು ಯಶಸ್ಸು ಕಾಣಬೇಕಾದರೆ ನಮ್ಮ ಮನಸ್ಸಲ್ಲಿ ಹುಮ್ಮಸ್ಸು, ಧೈರ್ಯ , ತಾಳ್ಮೆ, ಸದ್ಭಾವನೆ ಇವೆಲ್ಲವೂ ಇರುವದು ತುಂಬಾ ಮುಖ್ಯವಾಗಿದೆ. ಆದರೆ ಇವುಗಳ ಹೊರತಾಗಿ ನಮ್ಮ ಜೀವನದಲ್ಲಿ ಯಶಸ್ಸು ಕಾಣಲು ಮತ್ತೆ ಯಾವ ಯಾವ ಸಂಗತಿಗಳು ತುಂಬಾ ಮುಖ್ಯವಾದ ಪಾತ್ರ ವಹಿಸುತ್ತವೆ ಎಂಬುದು ಈ ವೀಡಿಯೋದಲ್ಲಿ ಕಾಣಬಹುದು.

ಪ್ರಸ್ತುತ ವಿಡಿಯೋದಲ್ಲಿ ಒಂದು ಶಾಲೆಯ ಸಮಾರಂಭದಲ್ಲಿ ನಮ್ಮ ದೇಶದ ಮಿಸೈಲ್ ಮ್ಯಾನ್ ಎಂದು ಖ್ಯಾತಿ ಪಡೆದುಕೊಂಡಿರುವ ಡಾ ಎಪಿಜೆ ಅಬ್ದುಲ್ ಕಲಾಮ್ ಅವರು ಮಕ್ಕಳನ್ನು ಮಾರ್ಗದರ್ಶನ ಮಾಡುತ್ತಿದ್ದರು. ಆಗ ಅದೇ ಸಮಯದಲ್ಲಿ ಒಂದು ಹುಡುಗಿ ಎದ್ದು ನಿಂತು ‘ನಮ್ಮ ಮುಂಬರುವ ಜೀವನದ ಬಗ್ಗೆ ಸ್ವಲ್ಪ್ ಹೇಳಿ’ ಅಂದರೆ ಜೀವನದಲ್ಲಿ ಯಶಸ್ಸು ಹೇಗೆ ಕಾಣುವದು ? ಎಂಬ ಪ್ರಶ್ನೆ ಅಬ್ದುಲ್ ಕಲಾಮ್ ಅವರಿಗೆ ಕೇಳಿದಳು. ಆಗ ಅಬ್ದುಲ್ ಕಲಾಂ ಅವರು ಅತೀ ಸರಳ ಭಾಷೆಯಲ್ಲಿ ಅಂದರೆ ಕೇವಲ ನಾಲ್ಕೇ ವಾಕ್ಯದಲ್ಲಿ ಯಶಸ್ಸಿನ ಬಗ್ಗೆ ತಿಳಿಸಿದರು. ಅವರ ಈ ಅದ್ಭುತವಾದ ಲೈನ್ ಗಳು ನಮ್ಮ ಜೀವನದಲ್ಲಿ ಸಹ ಅಳವಡಿಸಿಕೊಂಡರೆ ನಾವು ಸಹ ನಮ್ಮ ಜೀವನದಲ್ಲಿ ಯಶಸ್ಸು ಕಾಣುವದು ಖಂಡಿತ. ಅಬ್ದುಲ್ ಕಲಾಮ್ ಅವರು ಹೇಳಿರುವ ಅದ್ಭುತವಾದ ವಾಕ್ಯ ಗಳು ಯಾವವು ಎಂಬುದನ್ನು ಈ ವೀಡಿಯೋದಲ್ಲಿ ನೋಡಿ.

ವೀಡಿಯೋ ನೋಡಿ.

 

View this post on Instagram

 

A post shared by LABSNAA (@labsnaa_)

ಪ್ರಸ್ತುತ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ labsanaa ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ನಷ್ಟು ನೆಟ್ಟಿಗರು ವೀಕ್ಷಣೆ ಮಾಡಿ, ಎಪ್ಪತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರ ಈ ಅದ್ಭುತವಾದ ವಿಚಾರ ಸರಣಿಯ ವಿಡಿಯೋ ನಿಮಗೆ ಇಷ್ಟವಾದರೆ ಶೇರ್ ಮಾಡಿ.