Activa ಈಗ EV ಸ್ವರೂಪದಲ್ಲಿ ಬರಲಿದೆ? Honda ಪ್ರಾರಂಭಿಸಿತು ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟಿಂಗ್ ಗೆ ಪ್ರಾರಂಭ, ನೋಡಿ ಈ ವರದಿ.

ಕಳೆದ ಅನೇಕ ತಿಂಗಳುಗಳಿಂದ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಭಾರತೀಯರು ಆಕರ್ಷಿತರಾಗುತ್ತಿರುವುದು ಕಂಡುಬರುತ್ತಿದೆ. ಕಾರು ಅಥವಾ ಸ್ಕೂಟರ್ ಇರಲಿ ಎಲೆಕ್ಟ್ರಿಕ್ ಸೆಗ್ಮೆಂಟ್ ನಲ್ಲಿಯ ವಾಹನಗಳ ಮಾರಾಟ ಹೆಚ್ಚಾಗುತ್ತಿರುವುದು ತಿಳಿದುಬರುತ್ತಿದೆ. ಮುಂಬರುವ ಕಾಲದಲ್ಲಿ ಅನೇಕ ದೊಡ್ಡ ದೊಡ್ಡ ಟು ವೀಲರ್ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕುಗಳನ್ನು ಲಾಂಚ್ ಮಾಡಲಿದ್ದಾರೆ. ಜಪಾನಿನ ದಿಗ್ಗಜ ಕಂಪನಿಯಾದ ಹೋಂಡಾ ಸಹಿತ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಈ ಸ್ಕೂಟರ್ ಆಕ್ಟಿವಾ ಇರಲಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಎಲ್ಲಕ್ಕೂ ಹೆಚ್ಚು ಮಾರಾಟವಾಗುವ ಸ್ಕೂಟರ್ ಹೋಂಡಾ ಆಕ್ಟಿವಾ ಇನ್ನು ಎಲೆಕ್ಟ್ರಿಕ್ ರೂಪದಲ್ಲಿ ಅಂದರೆ Honda Activa Electric ಹೆಸರಿನಲ್ಲಿ ಲಾಂಚ್ ಆಗಲಿದೆ ಎಂಬ ಸುದ್ದಿಗಳು ಬರುತ್ತಿವೆ. ಆದರೆ ಕಂಪನಿಯ ಕಡೆಯಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಇನ್ನೂ ಹೊರಗೆ ಬಂದಿಲ್ಲ. ಮೀಡಿಯಾ ರಿಪೋರ್ಟ್ ಗಳ ಪ್ರಕಾರ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟಿಂಗ್ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಹೋಂಡಾ 2024 ರವರೆಗೆ ಮೂರು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಲಿದೆ.

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಭಾರತದಲ್ಲಿ ಮುಂದಿನ ವರ್ಷ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಮಾಡುವ ಪ್ರಯತ್ನದಲ್ಲಿದೆ. ಇತ್ತೀಚೆಗೆ ಹೋಂಡಾದ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ BENLY ಭಾರತದ ರಸ್ತೆಯ ಮೇಲೆ ಕಂಡುಬಂದಿತ್ತು. ಆದರೆ ಬ್ಯಾಟರಿ ಮತ್ತು ರೇಂಜ್ ಟೆಸ್ಟಿಂಗ್ ಮಾಡಿದನಂತರ ಕಂಪನಿ ತನ್ನ ಬೆಸ್ಟ್ ಸೆಲ್ಲಿಂಗ್ ಆಕ್ಟಿವಾ ಸ್ಕೂಟರ್ ಗೆ Honda Activa EV ರೂಪದಲ್ಲಿ ಪ್ರಸ್ತುತಪಡಿಸುವ ದಟ್ಟ ಸಾಧ್ಯತೆ ಇರುವ ಚರ್ಚೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೋಂಡಾ ಕಂಪನಿಯು ಎಲೆಕ್ಟ್ರಿಕ್ ಟು ವೀಲರ್ ಮಾರ್ಕೆಟಿನ ಮೌಲ್ಯಮಾಪನ ಮಾಡುತ್ತಿದೆ. ಹೋಂಡಾ ಕಂಪನಿಯು 2024 ರ ವರೆಗೆ ಕನಿಷ್ಠ ಮೂರು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಲಾಂಚ್ ಮಾಡುವ ತಯಾರಿಯಲ್ಲಿದೆ. ಆದರೆ ಇದರಲ್ಲಿ ಎಷ್ಟು ಮಾಡೆಲ್ಸ್ ಗಳು ಭಾರತದಲ್ಲಿ ಲಾಂಚ್ ಆಗಲಿವೆ ಎಂಬುದರ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಏತನ್ಮದ್ಯೆ ಸಪ್ಟೆಂಬರ್ ತಿಂಗಳಲ್ಲಿ TVS iQube ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಮತ್ತೊಮ್ಮೆ ಹಿಂದೆ ಹಾಕಿದೆ. ಸಪ್ಟೆಂಬರ್ ತಿಂಗಳಲ್ಲಿ ಬಜಾಜ್ ಆಟೋ ಒಂದೇ ಒಂದು ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ 642 ಯುನಿಟ್ಸ್ ಗಳ ಮಾರಾಟ ಮಾಡಿದೆ. TVS Motors ಇದೇ ತಿಂಗಳಿನಲ್ಲಿ iCube ಒಟ್ಟು 766 ಯೂನಿಟ್ಸ್ ಗಳ ಮಾರಾಟ ಮಾಡಿದೆ.

💐