Advance Technology : ಭವಿಷ್ಯದಲ್ಲಿ ತಂತ್ರಜ್ಞಾನ ಹೀಗೂ ಬರಬಹುದು ಅಂತ ತೋರಿಸಿಕೊಡುವ ಫನ್ನಿ ವಿಡಿಯೋ ನೋಡಿ!!

ಇಂದಿನ ತಂತ್ರಜ್ಞಾನ ಯುಗದಲ್ಲಿ ನಮಗೆ ಯಾವುದೇ ಬೇಕಾದ ಮಾಹಿತಿ ಕೇವಲ ಒಂದು ಕ್ಲಿಕ್ ನಲ್ಲಿ ದೊರೆಯುವದು. ತಂತ್ರಜ್ಞಾನದಿಂದ ಇಂದು ಮಾನವನು ಏನೆಲ್ಲಾ ಸಾಧನೆ ಮಾಡಿದ್ದಾನೆ. ಪ್ರತಿಯೊಂದು ಕೆಲಸ ಸರಾಗವಾಗಿ ಮಾಡುವ ಸಲುವಾಗಿ ಮಾನವನು ತನಗೆ ಬೇಕಾದ ಹಾಗೆ ಯಂತ್ರಗಳ ರಚನೆ ಮಾಡಿದ್ದಾನೆ ಅಲ್ಲದೆ ಅವುಗಳನ್ನು ಉಪಯೋಗ ಮಾಡಿ ತನ್ನ ಸಮಯ ಹಾಗೂ ಪರಿಶ್ರಮ ಎರಡು ಸಹ ಉಳಿತಾಯ ಮಾಡಿಕೊಂಡಿದ್ದಾನೆ.

ಮಾನವನು ಅನೇಕ ವಸ್ತುಗಳ ಶೋಧನೆ ಮಾಡಿ ಇಂದು ಅವುಗಳನ್ನು ತನ್ನ ಜೀವನದಲ್ಲಿ ಉಪಯೋಗ ಮಾಡಿಕೊಳ್ಳುತ್ತಿದ್ದಾನೆ. ಆ ವಸ್ತುಗಳಿಂದ ತನ್ನ ಜೀವನ ಸುಖಕರವಾಗಿಸಿಕೊಂಡು ತನಗೆ ಬೇಕಾದ ರೀತಿಯಲ್ಲಿ ಉಪಯೋಗ ಮಾಡಿಕೊಂಡಿದ್ದಾನೆ. ಇಂದಿನ ಕಾಲದಲ್ಲಿ ಎಲ್ಲಕ್ಕೂ ಹೆಚ್ಚು ಉಪಯೋಗ ವಾಗುತ್ತಿರುವ ತಂತ್ರಜ್ಞಾನದ ಸಾಧನವೆಂದರೆ ಮೊಬೈಲ್. ಇಂದಿನ ಪ್ರತಿಯೊಬ್ಬ ಮನುಷ್ಯ ಮೊಬೈಲ್ ಗೆ ತುಂಬಾ ಹೊಂದಿಕೊಂಡಿದ್ದಾನೆ. ಒಂದು ವೇಳೆಯ ಊಟ ಇರದೇ ಇದ್ದರೂ ನಡೆಯಬಹುದು ಆದರೆ ಒಂದು ನಿಮಿಷ ಮೊಬೈಲ್ ಇಲ್ಲದಿದ್ದರೆ ಏನೋ ಪ್ರಪಂಚನೆ ಕಳೆದು ಹೋಗಿದೆ ಅನ್ನೋ ಮಟ್ಟಿಗೆ ಫೀಲ್ ಮಾಡಿಕೊಳ್ಳುತ್ತಾರೆ.

ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಟೆಕ್ನೋಲೊಜಿ ಕುರಿತು ಫನ್ನಿಯಾಗಿ ತೋರಿಸಲಾಗಿದೆ. ಈ ವೀಡಿಯೋ ನೋಡಿದ ಮೇಲೆ ನಿಜಕ್ಕೂ ಹೀಗೆ ಬಂದರೆ ಹೇಗೆ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ನಿರ್ಮಾಣ ವಾಗಬಹುದು.

ಪ್ರಸ್ತುತ ವೀಡಿಯೋದಲ್ಲಿ ಮೂವರು ವ್ಯಕ್ತಿಗಳು ಒಂದೇ ಕಡೆಗೆ ಕುಳಿತುಕೊಂಡಿರುತ್ತಾರೆ. ಅವರು ಒಬ್ಬರಿಗೊಬ್ಬರು ಮಾತಾನಾಡದೆ ಹಾಗೆ ಕುಳಿತುಕೊಂಡು ತಮ್ಮಷ್ಟಕ್ಕೆ ತಾವು ಕಾಲ ಕಳೆಯುತ್ತಿರುತ್ತಾರೆ. ತದನಂತರ ಆಕಸ್ಮಿಕವಾಗಿ ಫೋನ್ ರಿಂಗ್ ಆಗುತ್ತೆ ಎಲ್ಲರೂ ಒಬ್ಬರಿಗೊಬ್ಬರು ನೋಡುತ್ತಾರೆ ಆಗ ಮೊದಲನೆಯ ವ್ಯಕ್ತಿ ತನ್ನ ಕೈ ಬೆರೆಳು ತಗೆದು ನಾವು ಹೇಗೆ ಮೊಬೈಲ್ ಬಟನ್ ಪ್ರೆಸ್ ಮಾಡುತ್ತೇವೆಯೋ ಹಾಗೆ ಆತ ಬೆರಳನ್ನು ಒತ್ತಿ ಮೊಬೈಲ್ ನಲ್ಲಿ ಮಾತಾಡುವ ಹಾಗೆ ಆಕ್ಟ್ ಮಾಡಿ ತದನಂತರ ಕಾಲ್ ಕಟ್ ಮಾಡಲು ಮತ್ತೆ ತನ್ನ ಬೆರಳಿಗೆ ಪ್ರೆಸ್ ಮಾಡುತ್ತಾನೆ ಆಗ ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಆಶ್ಚರ್ಯದಿಂದ ಈತನನ್ನು ನೋಡುತ್ತಾರೆ. ಈತ ಅಡ್ವಾನ್ಸ್ ಟೆಕ್ನೋಲೊಜಿ ಅಂತ ಹೇಳುತ್ತಾನೆ.

ತದನಂತರ ಮತ್ತೊಂದು ಫೋನ್ ರಿಂಗ್ ಟೋನ್ ಬಾರಿಸಲು ಶುರುವಾಗುತ್ತೆ ಆಗ ಮತ್ತೆ ಎಲ್ಲರೂ ಸಹ ಒಬ್ಬರಿಗೊಬ್ಬರು ನೋಡುತ್ತಾರೆ ಆಗ ಮಧ್ಯದಲ್ಲಿದ್ದ ವ್ಯಕ್ತಿ ತನ್ನ ಗಂಟಲಿನಲ್ಲಿ ಮೊಬೈಲ್ ಇದೆ ಅನ್ನೋ ಹಾಗೆ ಆಕ್ಟ್ ಮಾಡಿ ಮಾತಾಡುತ್ತಾನೆ ಕೊನೆಗೆ ಆತನು ಕೂಡಾ ಇದು ನನ್ನ ಅಡ್ವಾನ್ಸ್ ಟೆಕ್ನೋಲೊಜಿ ಅಂತ ಹೇಳುತ್ತಾನೆ. ಇವರಿಬ್ಬರೂ ಫೋನ್ ಹೇಗೆ ಬರುತ್ತೆ ತೋರಿಸಿಕೊಟ್ಟರೆ ಮೂರನೆಯ ವ್ಯಕ್ತಿಗೆ ಫ್ಯಾಕ್ಸ್ ಬರುತ್ತೆ. ಆ ವ್ಯಕ್ತಿಗೆ ಫ್ಯಾಕ್ಸ್ ಹೇಗೆ ಬರುತ್ತೆ ಅಂತ ತೋರಿಸಿಕೊಟ್ಟ ಪರಿ ನೋಡಿದರೆ ನೀವು ಹೊಟ್ಟೆ ಹುಣ್ಣಾಗುವ ತನಕ ನಗುವಿರಿ.

ವೀಡಿಯೋ ನೋಡಿ.