Airlines Secrets: ಏರೋಪ್ಲೇನ್ ನಲ್ಲಿ ಏರ್ ಹೋಸ್ಟೆಸ್ ಗಳು ಯಾವತ್ತೂ ಟೀ ಅಥವಾ ಕಾಫಿ ಕುಡಿಯುವದಿಲ್ಲ, ಕಾರಣ ಕೇಳಿ ದಂಗಾಗುವಿರಿ!

ನೀವು ಒಂದು ವೇಳೆ ಫ್ಲೈಟ್ ನಲ್ಲಿ ಪ್ರವಾಸ ಮಾಡಿದ್ದೇ ಆದರೆ ಪ್ರವಾಸದ ಮಧ್ಯೆ ಚಹಾ ಅಥವಾ ಕಾಫಿ ಕುಡಿದಿರಲೇಬೇಕು. ಆದರೆ ಫ್ಲೈಟ್ ನಲ್ಲಿ ಸರ್ವಿಸ್ ನೀಡುವ ಏರ್ ಹೋಸ್ಟೆಸ್ ಗಳು ಪ್ರವಾಸದ ಮಧ್ಯೆ ಚಹಾ ಅಥವಾ ಕಾಫಿ ಕುಡಿಯುವದನ್ನು ನೋಡಿದ್ದೀರಾ? ಬಹುಶಃ ನೊಡಲಿಕ್ಕಿಲ್ಲ. ಕ್ರೂ ಮೆಂಬರ್ಸ್ ಗಳು ಫ್ಲೈಟ್ ನಲ್ಲಿ ಚಹಾ ಕುಡಿಯದಿರುವದರ ಹಿಂದಿನ ಸತ್ಯಾಂಶ ತಿಳಿದಾಗ ನಿಮಗೆ ನಿಜಕ್ಕೂ ಆಶ್ಚರ್ಯವಾಗುವದು ಖಂಡಿತ. ಈ ಲೇಖನ ಓದಿದ ನಂತರ ಫ್ಲೈಟ್ ನಲ್ಲಿ ಟೀ ಮತ್ತು ಕಾಫಿ ಆರ್ಡರ್ ನೀಡುವ ಮೊದಲು ಖಂಡಿತಾ ಇನ್ನು ಮುಂದೆ 10 ಸಲ ಯೋಚಿಸುವಿರಿ.

ಫ್ಲೈಟ್ ನಲ್ಲಿ ಸರ್ವಿಸ್ ನೀಡುವ ಈ ಸೀಕ್ರೆಟ್ ಏರ್ ಹೋಸ್ಟೆಸ್ ಸಿಎರಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುತ್ತಾರೆ. ಅವರ ಟಿಕ್ ಟಾಕ್ ಅಕೌಂಟ್ ಗೆ 31 ಲಕ್ಷ ಫಾಲೋವರ್ಸ್ ಇದ್ದಾರೆ. ಇವರು ಯಾವತ್ತೂ ಫ್ಲೈಟ್ ಮತ್ತು ತಮ್ಮ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಅವರ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಫ್ಲೈಟ್ ಅಟೆಂಡೆಂಟ್ ಹಾಗೂ ಪೈಲಟ್ ಗೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ಹೇಳಿದ್ದಾರೆ.

ಫ್ಲೈಟ್ ನಲ್ಲಿ ಟೀ ಮತ್ತು ಕಾಫಿ ಯಾಕೆ ಕುಡಿಯುವುದಿಲ್ಲ ಕ್ರೂ ಮೆಂಬರ್ಸ್…

 

View this post on Instagram

 

A post shared by Cierra Mistt (@cierra_mistt)

ಸಿಎರಾ ಮಿಸ್ಟ್ ಹೇಳುವ ಪ್ರಕಾರ ಕ್ರೂ ಮೆಂಬರ್ಸ್ ಗಳು ಫ್ಲೈಟ್ ನಲ್ಲಿರುವ ನೀರಿನ ಟ್ಯಾಂಕ್ ಉಪಯೋಗ ಮಾಡುವುದರಿಂದ ಆದಷ್ಟು ದೂರ ಇರುತ್ತಾರೆ. ನಾನಿಲ್ಲಿ ಇವರಿಗೆ ಸಂಬಂಧಪಟ್ಟ ಕೆಲವು ಸೀಕ್ರೆಟ್ ಗಳನ್ನು ಹೇಳುತ್ತೇನೆ, ನಾನು ಚಾಲೆಂಜ್ ಮಾಡಿ ಹೇಳುತ್ತೇನೆ ಈ ವಿಷಯಗಳು ನಿಮಗೆ ಗೊತ್ತಿಲ್ಲ, ಎನ್ನುತ್ತಾರೆ ಸಿಎರಾ. ಅದೇನೆಂದರೆ, ಎಷ್ಟು ಸಾಧ್ಯವಿದೆ ಅಲ್ಲಿಯವರೆಗೆ ನಾವು ಈ ನೀರಿನ ಉಪಯೋಗ ಮಾಡುವದಿಲ್ಲ. ಟೀ, ಕಾಫಿ ಯಂತೂ ಮೊದಲೇ ಕುಡಿಯುವುದಿಲ್ಲ. ಇದಕ್ಕೆ ಕಾರಣ ಟೀ ಕಾಫಿ ಮಾಡಲು ಉಪಯೋಗಿಸುವ ನೀರು ಫ್ಲೈಟ್ ನಲ್ಲಿರುವ ಟ್ಯಾಂಕ್ ನಲ್ಲಿಂದ ಬರುತ್ತದೆ. ಆ ನೀರಿನ ಟ್ಯಾಂಕ್ ಮೇಲಿಂದ ಮೇಲೆ ಹೆಚ್ಚಾಗಿ ಸ್ವಚ್ಚ ಗೊಳಿಸುವದೇ ಇಲ್ಲ ಎನ್ನುತ್ತಾಳೆ ಸಿಎರಾ. ಏರ್ಲೈನ್ ಕಂಪನಿಯವರು ಸಮಯ ಸಮಯಕ್ಕೆ ಟ್ಯಾಂಕ್ ನಲ್ಲಿಯ ನೀರನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಆ ನೀರಿನಲ್ಲಿ ಏನಾದರೂ ಆಕ್ಷೇಪಾರ್ಹ ಪದಾರ್ಥಗಳು ಸಿಕ್ಕರೆ ಮಾತ್ರ ಆ ಟ್ಯಾಂಕಿನ ಸ್ವಚ್ಛತೆಯನ್ನು ಮಾಡುತ್ತಾರೆ ಎಂದು ಹೀಗೂ ಹೇಳುತ್ತಾಳೆ ಸಿಎರಾ.