ಪಕ್ಕಾ ದೇಶಿ ಅಂದಾಜಿನಲ್ಲಿ ಅಜ್ಜಿ ನದಿಯಲ್ಲಿ ಹೊಡೆದ ಜಿಗಿತ; ಅದ್ಭುತ! ಈಗಲೇ1 ಹೀಗಾದ್ರೆ ಚಿಕ್ಕವರಿದ್ದಾಗೇಷ್ಟು ಮಾಡಿರಬೇಕು ಮಸ್ತಿ?

ಕೆಲವರಿಗೆ ವಯಸ್ಸು ಬರೀ ನಂಬರ್ ಅಷ್ಟೇ. ಅಂಥವರು ವಯಸ್ಸು ಹೆಚ್ಚಾಗಿದ್ದರೂ ಚಿಕ್ಕ ಮಕ್ಕಳಂತೆ ತುಂಬಾ ಜೋಶ್ ನಿಂದ ಹಾಗೂ ಅತೀ ಚಟುವಟಿಕೆಯಿಂದಲೇ ವರ್ತಿಸುತ್ತಾರೆ. ಸದ್ಯ ಹಳ್ಳಿ ಅಜ್ಜಿಯ ಸೂಪರ್ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿ ನೀವು ವಾವ್ ಎನ್ನದೆ ಸಾಧ್ಯವೇ ಇಲ್ಲ.

ಈ ವಿಡಿಯೋದ ದೃಶ್ಯದಲ್ಲಿ ಸುಮಾರು 60/65 ವಯಸ್ಸು ದಾಟಿದ ಅಜ್ಜಿ ಈ ವಯಸ್ಸಿನವರು ಹೆಮ್ಮೆ ಪಡುವ ಕೆಲಸ ಮಾಡುತ್ತಾಳೆ. ಅದೇನೆಂದರೆ, ಅಜ್ಜಿ ಸುಮಾರು ಅಡಿಗಳ ಮೇಲಿಂದ ನದಿಯಲ್ಲಿ ಧೈರ್ಯದಿಂದ ಧುಮುಕುತ್ತಾಳೆ, ಅದು ಸಖತ್ತಾಗಿ. ಇಲ್ಲಿ ಅಜ್ಜಿ ಒಂದು ನದಿಯ ದಡದಲ್ಲಿರುವ ಬ್ರಿಡ್ಜ್ ಮೇಲೆ ಏರಿ ಏನು ಮಾಡುತ್ತಾಳೆ ಎನ್ನುವಷ್ಟರಲ್ಲಿ ನೇರ ನದಿಯ ನೀರಿನಲ್ಲಿಯೇ ಧುಮುಕುತ್ತಾಳೆ ಅದು ಒಂದೆರಡು ಬಾರಿ. ಒಮ್ಮೆ ನೇರ ಮತ್ತೊಮ್ಮೆ ತಲೆ ಕೆಳಗೆ ಮಾಡಿ ಮಗದೊಮ್ಮೆ ಮತ್ತೆ ಬೇರೆ ಸ್ಟೈಲ್ ನಲ್ಲಿ. ಈ ದೃಶ್ಯ ನೋಡಲು ನಿಜಕ್ಕೂ ಸೂಪರ್ ಆಗಿದೆ. ಚಿಕ್ಕವರ ಈ ರೀತಿ ಮಾಡಲು ಹೆದರುವಾಗ ಈ ಅಜ್ಜಿ ಚಿಕ್ಕವರಿಗೂ ನಾಚಿಸುವಂತೆ ನದಿಯಲ್ಲಿ ಜಿಗಿತ ಹೊಡೆಯುತ್ತಾಳೆ, ಮತ್ತು ನಿರಾಯಾಸವಾಗಿ ಈಜಾಡುತ್ತಾಳೆ. ನಿಜಕ್ಕೂ ಅದ್ಬುತವೇ ಸರಿ.

ನೋಡಿ ಅಜ್ಜಿಯ ಈ ಸೂಪರ್ ವಿಡಿಯೋ…

 

View this post on Instagram

 

A post shared by Harish K (@harishk637)

ಅಜ್ಜಿಯ ಈ ಸುಂದರವಾದ ವಿಡಿಯೋವನ್ನು ಸಮಾಮಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನಲ್ಲಿ harishk637 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 6.7 ಮಿಲಿಯನ್ ಜನರು ವೀಕ್ಷಿಸಿದ್ದು ಸುಮಾರು 5 ಲಕ್ಷ 37 ಸಾವಿರ ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.