ಆಲಿಯಾ ಭಟ್ ಬಳಿ ಕೆಲಸ ಕೇಳಿದ ಶಾರೂಖ್ ಖಾನ್ : ಸಮಯಕ್ಕೆ ಸರಿಯಾಗಿ ಶೂಟಿಂಗ್ ಗೆ ಬರುವೆನೆಂದು ಭರವಸೆ ನೀಡಿದ ನಟ!
ಬಾಲಿವುಡ್ ನ ಸ್ಟಾರ್ ನಟಿ ಆಲಿಯಾ ಭಟ್ ಇದೀಗ ನಿರ್ಮಾಪಕಿ ಕೂಡಾ ಆಗಿದ್ದಾರೆ. ಅವರ ತಮ್ಮ ಹೋಂ ಪ್ರೊಡಕ್ಷನ್ ನ ಹೊಸ ಸಿನಿಮಾ ಡಾರ್ಲಿಂಗ್ಸ್ ನ ಚಿತ್ರೀಕರಣವನ್ನು ಈಗಾಗಲೇ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಶಾರೂಖ್ ಖಾನ್ ಅವರು ಟ್ವೀಟ್ ಮಾಡಿ ಆಲಿಯಾ ಭಟ್ ಅವರಿಗೆ ಶುಭ ಹಾರೈಸಿರುವುದರ ಜೊತೆಗೆ ಆಲಿಯಾ ಮುಂದೆ ಒಂದು ಬೇಡಿಕೆಯನ್ನು ಸಹಾ ಇಟ್ಟಿದ್ದಾರೆ. ಶಾರೂಖ್ ಖಾನ್ ಆಲಿಯಾ ಮುಂದೆ ಆಕೆಯ ಹೋಂ ಬ್ಯಾನರ್ ನ ಮುಂದಿನ ಸಿನಿಮಾದಲ್ಲಿ ತನಗೂ ಒಂದು ಪಾತ್ರವನ್ನು ನೀಡುವಂತೆ ಬೇಡಿಕೆಯನ್ನು ಇಟ್ಟಿದ್ದಾರೆ. ಕಿಂಗ್ ಖಾನ್ ಶಾರೂಖ್ ಖಾನ್ ತನಗೊಂದು ಪಾತ್ರ ನೀಡುವಂತೆ ಮಾಡಿದ ಟ್ವೀಟ್ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಶಾರೂಖ್ ಖಾನ್ ಮತ್ತು ಆಲಿಯಾ ಭಟ್ 2016 ರಲ್ಲಿ ಡಿಯರ್ ಜಿಂದಗಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.
ಶಾರೂಖ್ ಖಾನ್ ಅವರು ಆಲಿಯಾ ಭಟ್ ಟ್ವೀಟ್ ಗೆ ರಿಯಾಕ್ಷನ್ ಅನ್ನು ನೀಡಿದ್ದಾರೆ. ಶಾರೂಖ್ ಖಾನ್ ಅವರು, “ಈ ಪ್ರೊಡಕ್ಷನ್ ನಂತರ ದಯವಿಟ್ಟು ನಿಮ್ಮ ಮುಂದಿನ ಪ್ರೊಡಕ್ಷನ್ ನಲ್ಲಿ ನನ್ನನ್ನು ಸೈನ್ ಮಾಡಿ. ನಾನು ಶೂಟಿಂಗ್ ಗಾಗಿ ಬಹಳ ಸಂಯಮದಿಂದ ಬರುವುದು ಮಾತ್ರವೇ ಅಲ್ಲದೇ ನಾನು ಬಹಳ ವೃತ್ತಿಪರನಾಗಿ ಇರುವೆ ಎಂದು ಪ್ರಮಾಣ ಮಾಡುತ್ತೇನೆ” ಎಂದಿದ್ದಾರೆ. ಶಾರೂಖ್ ಖಾನ್ ಈ ಬೇಡಿಕೆಯನ್ನು ಅಥವಾ ಮನವಿಯನ್ನು ಒಂದು ತಮಾಷೆಯ ರೀತಿಯಲ್ಲಿ ಆಲಿಯಾ ಮುಂದೆ ಇರಿಸಿದ್ದಾರೆ ಎನ್ನುವುದು ವಾಸ್ತವ.

ಆಲಿಯಾ ಭಟ್ ಈಗಾಗಾಲೇ ನಟಿಯಾಗಿ ಬಾಲಿವುಡ್ ನಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ. ಇದೀಗ ನಟಿ ಆಲಿಯಾ ಡಾರ್ಲಿಂಗ್ಸ್ ಸಿನಿಮಾದ ಮೂಲಕ ಮೊಟ್ಟ ಮೊದಲ ಸಿನಿಮಾ ನಿರ್ಮಾಣವನ್ನು ಮಾಡಲು ಹೊರಟಿದ್ದು, ನಿರ್ಮಾಪಕಿಯಾಗಿದ್ದಾರೆ. ನಟ ಶಾರೂಖ್ ಖಾನ್ ಅವರು ತಮ್ಮ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಮುಖಾಂತರ ಆಲಿಯಾ ಭಟ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಪ್ರಾಜೆಕ್ಟ್ ನಲ್ಲಿ ಸಹ ನಿರ್ಮಾಪಕನಾಗಿ ಬಂಡವಾಳವನ್ನು ಹೂಡುತ್ತಿರುವುದು ವಿಶೇಷವಾಗಿದೆ.
After this production please sign me up for your next home production little one. I will come in time for the shoot and be very professional..promise! https://t.co/rXzha7LmZR
— Shah Rukh Khan (@iamsrk) July 3, 2021
ಆಲಿಯಾ ಭಟ್ ಅವರ ಈ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಯಲ್ಲಿ ನಟಿ ಶೆಫಾಲಿ ಶಾಹ್ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ಡಾರ್ಲಿಂಗ್ಸ್ ಸಿನಿಮಾ ತಾಯಿ ಮಗಳ ಸಂಬಂಧದ ಕುರಿತಾದ ಕಥಾ ಹಂದರವನ್ನು ಹೊಂದಿದ್ದು, ಈ ಸಿನಿಮಾ ಮುಂಬೈನ ಕೆಳ ಮದ್ಯಮ ವರ್ಗದ ಹಿನ್ನೆಲೆಯಲ್ಲಿ ಕಥೆ ಮುಂದೆ ಸಾಗುತ್ತದೆ. ಇಲ್ಲಿ ಇಬ್ಬರೂ ಸಹಾ ಅಸಾಧಾರಣವಾದ ಪರಿಸ್ಥಿತಿಗಳಲ್ಲಿ ಧೈರ್ಯವನ್ನು ಪ್ರದರ್ಶನ ಮಾಡುವ ಮೂಲಕ ತಮ್ಮ ತಮ್ಮ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಶಾರೂಖ್ ಖಾನ್ ಹಾಗೂ ಆಲಿಯಾ ಭಟ್ ಅವರ ಸಿನಿಮಾಗಳ ಕೆಲಸದ ಬಗ್ಗೆ ಒಂದು ದೃಷ್ಟಿ ಹರಿಸೋಣ.
hahaha I could ask for nothing more.. done deal signed! Love you my favourite 🤗 https://t.co/mW5fIXCwff
— Alia Bhatt (@aliaa08) July 3, 2021
ಶಾರೂಖ್ ಖಾನ್ ಪ್ರಸ್ತುತ ಪಠಾಣ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಾರೂಖ್ ಖಾನ್ ಜೊತೆಗೆ ನಟಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ದೀಪಿಕಾ ಹಾಗೂ ಶಾರೂಖ್ ಖಾನ್ ಜೊತೆಯಾಗಿ ನಟಿಸುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಇದಕ್ಕೂ ಮೊದಲು ಅವರು ಓಂ ಶಾಂತಿ ಓಂ, ಚೆನ್ನೈ ಎಕ್ಸ್ಪ್ರೆಸ್, ಹ್ಯಾಪಿ ನ್ಯೂ ಇಯರ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇನ್ನು ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಥಿಯಾವಾಡ ಸಿನಿಮಾ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ. ಇದಲ್ಲದೇ ಬ್ರಹ್ಮಾಸ್ತ್ರ ಮತ್ತು ಆರ್ ಆರ್ ಆರ್ ಸಿನಿಮಾದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ.