Video; ಬೀಚಿನಲ್ಲಿ ಕುಳಿತು ಆಸ್ವಾದ ತೆಗೆದುಕೊಳ್ಳುತ್ತಿರುವ ಜನರ ಜಾತ್ರೆಯಲ್ಲಿ ನುಗ್ಗಿ ಬಂದ ದೈತ್ಯ ಅವಳಿ ಅಲೆಗಳು! ಎಲ್ಲವೂ ಚಲ್ಲಾಪಿಲ್ಲಿ…
ಕರಾವಳಿಯ ಸುಂದರ ನೋಟ ನೋಡುವುದು ಯಾರಿಗಿಷ್ಟವಿಲ್ಲ? ಸಮುದ್ರದ ದಂಡೆಯಲ್ಲಿ ಆರಾಮಾಗಿ ಕುಳಿತು ಅಲೆಗಳ ಆಟವನ್ನು ನೋಡುವ ಹವ್ಯಾಸ ಯಾರಿಗಿಲ್ಲ? ಸಮುದ್ರದಲ್ಲಿ ಇಳಿದು ಅಲೆಗಳೊಂದಿಗೆ ಆಡುವ ನೀರಿನ ಆಟ ಯಾರಿಗಿಷ್ಟವಿಲ್ಲ? ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವರಿಗೆ ಸಮುದ್ರದ ದಂಡೆಯಲ್ಲಿ ಸುತ್ತಾಡುವ, ಆರಾಮವಾಗಿ ಕುಳಿತುಕೊಳ್ಳುವ, ನೀರಿನಲ್ಲಿ ಇಳಿದು ಆಟವಾಡುವ, ಇಷ್ಟ ಪ್ರತಿಯೊಬ್ಬರಿಗೂ ಇರುತ್ತದೆ. ಅದಕ್ಕಾಗಿ ದೊಡ್ಡ ದೊಡ್ಡ ಕರಾವಳಿ ತೀರಗಳಲ್ಲಿ ಜನರಿಗೆ ಕೆಲವೊಮ್ಮೆ ಕಾಲಿಡಲು ಸಹ ಜಾಗವಿರುವುದಿಲ್ಲ. ಅಷ್ಟೊಂದು ಜನರಿಂದ ಕಿಕ್ಕಿರಿದು ಬೀಜಗಳು ತುಂಬಿರುತ್ತವೆ.
ಸಮುದ್ರವು ಕಾಣಲು ಎಷ್ಟು ಚಂದವಾಗಿರುತ್ತದೆ ಅಷ್ಟೆ ಕೆಲವೊಂದು ಸಲ ಇದು ಸಹ ರೌದ್ರ ರೂಪವೂ ತಾಳುತ್ತದೆ. ರೌದ್ರ ರೂಪ ತಾಳಿದಾಗ ಸಮುದ್ರ ಅಲೆಯಲ್ಲಿ ಪ್ರತಿಯೊಂದು ವಸ್ತು ಅಣು ರೇಣುವಿನಂತೆ ಮಗುಚಿ ಹೋಗುತ್ತದೆ. ಅಷ್ಟೊಂದು ಭಯ ಹುಟ್ಟಿಸುತ್ತದೆ ಈ ಸಾಗರ. ಇಲ್ಲಿ ಆಡುವ ಆಟ ಕೆಲವೊಮ್ಮೆ ಎಂದೂ ಮರೆಯದ ಭಯದ ಅನುಭವವನ್ನು ನೀಡುತ್ತದೆ.
ಪ್ರಸ್ತುತ ವಿಡಿಯೋ ಒಂದನ್ನು ಈ ಅಂಕಣದಲ್ಲಿ ನಿಮಗಾಗಿ ತಂದಿದ್ದೇವೆ ಮಿತ್ರರೇ. ಈ ವಿಡಿಯೋ ದೃಶ್ಯದಲ್ಲಿ ಕಂಡುಬರುವ ಸಮುದ್ರದ ಚೆಲ್ಲಾಟ ಜನರ ಅ#ನಾಹುತ ಫಜೀತಿ ಮಾಡಿದೆ. ಸಾಕಷ್ಟು ಜನರು ಸಮುದ್ರದ ದಡದಲ್ಲಿ ಬೆಳೆದ ಎತ್ತರ ಮರಗಳ ನೆರಳಿನಲ್ಲಿ ಕುಳಿತು ಆರಾಮಾಗಿ ಕರಾವಳಿಯ ಆಸ್ವಾದವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಒಂದು ದೈತ್ಯ ಅಲೆ ಕ್ಷಣದಲ್ಲಿ ಜನರ ಮಧ್ಯೆ ಬಂದು ನುಗ್ಗುತ್ತದೆ. ಆ ಒಂದು ಅಲೆಯಿಂದ ಜನರು ಚೆಲ್ಲಾಪಿಲ್ಲಿಯಾಗಿ ಹುಚ್ಚೆದ್ದು ಇನ್ನಷ್ಟು ದಡಕ್ಕೆ ಬರಲು ಪ್ರಯತ್ನಿಸುತ್ತಾರೆ. ಈ ಮೊದಲ ಅಲೆಯ ಶಕ್ತಿ ಕಡಿಮೆಯಾಯಿತು ಎಂದು ನಿರಾತಂಕವಾಗಿ ಉಸಿರು ಬಿಡುವಷ್ಟರಲ್ಲಿ ಇನ್ನೊಂದು ದೈತ್ಯ ಅಲೆ ಬಂದು ಅಪ್ಪಳಿಸಿ ಜನರಿಗೆ ಕ್ಷಣದಲ್ಲಿ ಜನರ ಚಿಂದಿ ಉಡಾಯಿಸುತ್ತದೆ. ಅಷ್ಟೇ ಅಲ್ಲ ಮರಳಿ ಹೋಗುವಾಗ ಅನೇಕರನ್ನು ತನ್ನ ಜೊತೆಗೆ ಎಳೆದುಕೊಂಡು ಹೋಗುವ ದೃಶ್ಯ ಇಲ್ಲಿ ನೋಡಬಹುದು.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋ ದೃಶ್ಯವನ್ನು ಇನ್ಸ್ಟಾಗ್ರಾಮ್ ನಲ್ಲಿ meanhawaii ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಎರಡು ಮಿಲಿಯನ್ ವರೆಗೆ ವೀಕ್ಷಣೆ ಪಡೆದಿದ್ದು ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.