ಅಬ್ಬಬ್ಬಾ..! ಬಹುಭಾಷಾ ಬೆಡಗಿ ರಶ್ಮಿಕಾ ಜೊತೆ ಪುಷ್ಪ ಚಿತ್ರದಲ್ಲಿ ನಟಿಸುತ್ತಿರುವ ಅಲ್ಲು ಅರ್ಜುನ್ ಸಂಭಾವನೆ ಎಷ್ಟು ಗೊತ್ತಾ?

ಸಧ್ಯ ಕೊರೋನ ಹಾವಳಿಯಿಂದಾಗಿ ನಿಂತಿರುವ ಪುಷ್ಪ ಚಿತ್ರದ ಚಿತ್ರೀಕರಣ ದಿನಾಂಕ ಹಾಗೂ ಬಿಡುಗಡೆ ದಿನಾಂಕ ಕೂಡ ಮುಂದೆ ಹೋಗಿದೆ. ಈ ಬಹುನಿರೀಕ್ಷಿತ ಸಿನೆಮಾಕ್ಕೆ ಅಲ್ಲು ಅರ್ಜುನ್ ಭರ್ಜರಿ ಸಂಭಾವನೆ ಪಡೆದಿದ್ದಾರೆ. ಈ ಪುಷ್ಪ ಚಿತ್ರ ಬಾಹುಬಲಿ ಹಾಗೂ ಕೆಜಿಎಫ್ ಹಾಗೆ ಎರಡು ಭಾಗದಲ್ಲಿ ಬರಲಿದ್ದು, ಅಲ್ಲು ರಫ್ ಲುಕ್ ನ ಸ್ಟಿಲ್ ಗಳು ಗಮನ ಸೆಳೆಯುತ್ತಿವೆ. ಈ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು ಸಧ್ಯ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿದ್ದಾರೆ.

ಅಲ್ಲು ಅರ್ಜುನ್ ಗೆ ಕೊರೋನ ಪಾಸಿಟಿವ್ ಆಗಿದ್ದು, ಅವರೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಿನೆಮಾ ಶೂಟಿಂಗ್ ಆರಂಭವಾಗುತ್ತದೆ. ನಟಿ ರಶ್ಮಿಕಾ ಕೂಡ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ, ಇದರಿಂದ ಅವರಿಗೆ ಇನ್ನೂ ಸಾಕಷ್ಟು ಅವಕಾಶ ಒದಗಿ ಬರುವ ನಿರೀಕ್ಷೆ ಇದೆ. ಸಧ್ಯ ಬಾಲಿವುಡ್ ಫಿಲ್ಮ್ ಗೂ ಸಹ ರಶ್ಮಿಕಾ ಸಹಿ ಹಾಕಿದ್ದಾರೆ.

ಹ್ಯಾಪಿ, ಬನ್ನಿ, ಆರ್ಯ ಮುಂತಾದ ಮಹಾನ್ ಹಿಟ ಫಿಲ್ಮ್ ನೀಡಿರುವ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಈ ಪುಷ್ಪ ಚಿತ್ರದಲ್ಲಿ ಲಾರಿ ಡ್ರೈವರ್ ಪಾತ್ರ ನಿರ್ವಹಿಸಲಿದ್ದಾರೆ. ಇದರಲ್ಲಿ ಕಂಪ್ಲೀಟ್ ರಫ್ ಕ್ಯಾರೆಕ್ಟರ್ ಅವರದು. ಇನ್ನು ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರ ಮಾಡಲಿದ್ದಾರೆ.ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಇದರಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಹಾಗೂ ಮುತ್ತಮ್ ಸೆಟ್ಟಿ ಮೀಡಿಯಾದವರು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ಮುತ್ತಮ್ ಸೆಟ್ಟಿ ಅಲ್ಲು ಅರವಿಂದ್ ಸಂಬಂಧಿಕರಾಗಿದ್ದು, ಅಲ್ಲು ಅರ್ಜುನ್ ರವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತಿದೆಯಂತೆ. ಟಾಲಿವುಡ್ ನ ಅಂದಾಜಿನ ಪ್ರಕಾರ ಅಲ್ಲು ಸಂಭಾವನೆ ಸುಮಾರು 50 ಕೋಟಿ ಆಗಿರಲಿದೆ!
ಸುಕುಮಾರ್ ನಿರ್ದೇಶನದ ಈ ಚಿತ್ರ ಭರ್ಜರಿ ಹಿಟ್ ಆಗಲಿದೆ ಎಂಬುದು ಎಲ್ಲರ ನಿರೀಕ್ಷೆ. ಕೊರೋನ ಕಾಟ ಇರದಿದ್ದರೆ ಸಾಕು.
-Team Infotrend