ಅಮಿತಾಬ್ ಬಚ್ಚನ್ ಅವರ ಅಂದಾಜು ಆಸ್ತಿ ಸುಮಾರು 2950 ಕೋಟಿ! ಆದರೆ ಅವರ ಈ ಸಹೋದರ ಇನ್ನೂ ಕಡುಬಡವ! ಯಾಕ್ ಹೀಗೆ… ಓದಿ!

ಮುಂಬೈ – ಅಮಿತಾಬ್ ಬಚ್ಚನ್ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ. ಬಾಲಿವುಡ್‌ನ ಸೂಪರ್‌ ಸ್ಟಾರ್ ಎಂದು ಪರಿಗಣಿಸಲ್ಪಟ್ಟ ಅಮಿತಾಬ್ ಬಚ್ಚನ್ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿದವರು. ಹಾಗೆಯೇ ದುಡ್ಡನ್ನೂ ಗಳಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರ ಕಠಿಣ ಪರಿಶ್ರಮದ ಫಲವೇ ಬಚ್ಚನ್ ಕುಟುಂಬವನ್ನು ದೇಶದ ಕೋಟ್ಯಾಧಿಪತಿಗಳ ಸಾಲಿನಲ್ಲಿ ಎಣಿಸಲಾಗುತ್ತದೆ.

60 ವಯಸ್ಸು ದಾಟಿದರೂ ಅಮಿತಾಬ್ ಬಚ್ಚನ್ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿಗಳನ್ನು ಹೊಂದಿರುವ ಅಮಿತಾಬ್ ಅವರ ಕುಟುಂಬಕ್ಕೆ ಪ್ರತಿಯೊಂದು ಸೌಕರ್ಯವಿದೆ, ಐಷಾರಾಮಿ ಬದುಕು ಅವರದಾಗಿದೆ. ಆದರೆ ಇಂದು ನಾವು ಅವರ ಕುಟುಂಬದ ಸದಸ್ಯರ ಬಗ್ಗೆ ಮಾತನಾಡುತ್ತಿದ್ದೇವೆ, ಅವರು ಬಡತನದಿಂದ ಬೇಯುತ್ತಿದ್ದಾರೆ.

ನಾವು ಆ ಕುಟುಂಬದ ಬಗ್ಗೆ ಮಾತನಾಡುವ ಮೊದಲು, ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರ ಅಂದಾಜು ಒಟ್ಟು ಆಸ್ತಿ ಮೌಲ್ಯ ತಿಳಿಯೋಣ. ಅಮಿತಾಬ್ ರವರ ಘೋಷಿತ ಆಸ್ತಿ ಸುಮಾರು 400 ಮಿಲಿಯನ್ ಡಾಲರ್! ಅಂದರೆ ಸುಮಾರು 2950 ಕೋಟಿ!! ಅವರು ತಮ್ಮ ವೃತ್ತಿಜೀವನದಲ್ಲಿ 180 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.

ಅಮಿತಾಬ್ 1969 ರಲ್ಲಿ ‘ಸಾತ್ ಹಿಂದೂಸ್ತಾನಿ’ ಚಿತ್ರದ ಮೂಲಕ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು. ಆದರೆ ನಾವು ಬಚ್ಚನ್ ಕುಟುಂಬದಿಂದ ಬೇರ್ಪಟ್ಟ ಕುಟುಂಬದ ಬಗ್ಗೆ ಮಾತನಾಡುತ್ತಿದ್ದೇವೆ, ಅದು ಇಂದು ಜೀವನೋಪಾಯಕ್ಕಾಗಿ ಪರಿತಪಸುವಂತಾಗಿದೆ. ಅಮಿತಾಬ್ ಅವರ ಕುಟುಂಬದಲ್ಲಿ ಎಲ್ಲರೂ ಕೋಟ್ಯಾಧಿಪತಿಗಳು, ಆದ್ದರಿಂದ ಅದು ಯಾರು? ಎಂಬ ಪ್ರಶ್ನೆ ಕಾಡುತ್ತಿದೆಯಾ?

ಅಂದಹಾಗೆ ಅಮಿತಾಬ್ ಬಚ್ಚನ್ ಅವರ ಸ್ವಂತ ಕುಟುಂಬದ ವಿಷಯಕ್ಕೆ ಬಂದರೆ, ಐಶ್ವರ್ಯಾ, ಅಭಿಷೇಕ್ ಮತ್ತು ಜಯ ಬಚ್ಚನ್ ಎಲ್ಲರೂ ಸಾಕಷ್ಟು ಹಣವನ್ನು ಹೊಂದಿದ್ದಾರೆ. ನಾವು ಹೇಳುತ್ತಿರುವುದು ಅಮಿತಾಬ್ ಬಚ್ಚನ್ ಅವರ ಸ್ವಂತ ಚಿಕ್ಕಮ್ಮನ ಮಗ ಅನೂಪ್ ರಾಮಚಂದ್ರ ಅವರ ಬಗ್ಗೆ.

ಬಚ್ಚನ್ ಕುಟುಂಬವು ಅನೂಪ್ ರಾಮಚಂದ್ರ ಅವರೊಂದಿಗೆ ವಿಶೇಷ ಮತ್ತು ಹತ್ತಿರದ ಸಂಬಂಧವನ್ನು ಹೊಂದಿದೆ. ಇದರ ಹೊರತಾಗಿಯೂ ರಾಮಚಂದ್ರ ಇಂದು ಬಡತನದಲ್ಲಿ ಬದುಕುತ್ತಿದ್ದಾರೆ. ಅನೂಪ್ ರಾಮಚಂದ್ರ ಅವರ ಕುಟುಂಬವು ಈ ಮೊದಲು ಸ್ವಲ್ಪ ಹಣವನ್ನು ಹೊಂದಿದ್ದರೂ ಸಮಯ ಕಳೆದಂತೆ ಅದೆಲ್ಲ ಕರಗಿತು. ಇದಕ್ಕೆ ಮುಖ್ಯ ಕಾರಣ ಅಮಿತಾಬ್ ಮತ್ತು ಅನೂಪ್ ನಡುವಿನ ಆಸ್ತಿ ವಿವಾದ.

ಈ ಕಾರಣದಿಂದಾಗಿ ಅನೂಪ್ ಮತ್ತು ಅವರ ಕುಟುಂಬದಿಂದ ಅಮಿತಾಬ್ ಕುಟುಂಬ ದೂರವಾಯಿತು. ಅಭಿಷೇಕ್ ಬಚ್ಚನ್ ಅವರ ಮದುವೆಗೆ ಬರಲು ಕೂಡ ಅನೂಪ್ ಬಳಿ ಹಣ ಇರಲಿಲ್ಲವಂತೆ. ಅದಕ್ಕಾಗೇ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೂ ಅವರಿಗೆ ಯಾವುದೇ ರೀತಿ ನೆರವು ಸಿಗಲಿಲ್ಲ.

ಅನೂಪ್ ಮತ್ತು ಅವರ ಪತ್ನಿ ಮೃದುಲಾ ಅವರು ಕಟ್ಘರ್‌ನ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಅನೂಪ್ ಪ್ರಕಾರ ಈ ಮನೆ ಪೂರ್ವಜರದಾಗಿದ್ದು, ಈ ಬಗ್ಗೆ ಅಮಿತಾಬ್ ಮತ್ತು ಅನೂಪ್ ನಡುವೆ ಕೆಲವು ವಿವಾದಗಳಿವೆ. ಅಮಿತಾಬ್ – ಅನೂಪ್ ಅವರ ಸಂಬಂಧ ದೂರವಾಗಿದ್ದು ಇದೇ ಕಾರಣಕ್ಕೆ.

ಆದರೆ ತಮ್ಮ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಬಾಲ್ಯದ ನೆನಪುಗಳನ್ನು ಮ್ಯೂಸಿಯಂ ಮಾಡುವ ಮೂಲಕ ಅವರ ಪೂರ್ವಜರ ಮನೆಯಲ್ಲಿ ಇಡಬೇಕು ಎಂಬುದು ಅಮಿತಾಬ್ ಅಭಿಲಾಷೆ. ಅವರ ಆಸೆ ಸರಿಯಿದೆಯಾದರೂ ತಮ್ಮ ಸಹೋದರನಿಗೆ ಇತರೆ ವ್ಯವಸ್ಥೆ ಮಾಡಿ ಆ ಮನೆಯನ್ನು ಮ್ಯೂಸಿಯಂ ಮಾಡಬಹುದಿತ್ತು. ಆದರೆ ಇಂದಿಗೂ ಅವರ ಸಂಬಂಧ ಹಳಸಿಯೇ ಇದೆ.
-Team Infotrend