ಅಮ್ಮ ಹೇಳಿದ ಪ್ರೀತಿಯ ಫೇಮಸ್ ಶಬ್ದಕ್ಕೆ ಅಮ್ಮನಂತೆಯೇ ಸರಿಯಾಗಿ ರಿಪ್ಲೈ ಮಾಡಿದ ಹಸುಗೂಸು! ನೋಡಿ ಈ ವಿಸ್ಮಯದ ವಿಡಿಯೋ..

ಸೋಶಿಯಲ್ ಮೀಡಿಯಾ ಸೈಟ್ ಗಳಲ್ಲಿ ಮಕ್ಕಳ ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಅದರಲ್ಲೂ ಪುಟ್ಟ ಹಸುಗೂಸುಗಳ ವಿಡಿಯೋಗಳಂತೂ ಎಲ್ಲ ವರ್ಗದ ನೆಟ್ಟಿಗರಿಗೆ ಆಕರ್ಷಿಸುತ್ತವೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ನಿಮ್ಮನ್ನು ಆಕರ್ಷಿಸಬಹುದು. ಇದರಲ್ಲಿ ಸಂಶಯವಿಲ್ಲ.

ಇಲ್ಲಿ ತಾಯಿ ತನ್ನ ಹಸುಗೂಸಿನ ಜೊತೆಗೆ ಮನ ಬಿಚ್ಚಿ ಆಡುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ತಾಯಿಯು ತನ್ನ ಈ ಪುಟ್ಟ ಬೇಬಿ ಜೊತೆಗೆ ಸಂಭಾಷಣೆ ಮಾಡುತ್ತಿದ್ದಾಳೆ. ಈ ಸಂಭಾಷಣೆ ಮಾಡುವಾಗ ಎಲ್ಲರ ಪ್ರೀತಿಯ ಶಬ್ದವಾದ “ಐ ಲವ್ ಯು” ಎಂದು ಮಗುವಿಗೆ ಎನ್ನುತ್ತಾಳೆ. ಮಗು ಅದನ್ನು ಕೇಳಿ ತಾಯಿಯ ಹಾಗೆ ತನ್ನ ಭಾಷೆಯಲ್ಲಿ ರಿಪ್ಲೈ ನೀಡಲು ಪ್ರಯತ್ನಿಸುತ್ತದೆ. ಮೇಲಿಂದ ಮೇಲೆ ಈ ಪ್ರಯತ್ನವನ್ನು ಮಾಡಿ ಕೊನೆಗೆ ಇದರಲ್ಲಿ ಹೆಚ್ಚು ಕಡಿಮೆ ಈ ಮಗು ಯಶಸ್ಸು ಆಗಿದೆ. ನಿಮಗೆ ಒಂದು ವೇಳೆ ನಂಬಿಕೆ ಬರೆದಿದ್ದರೆ ಈ ಕೆಳಗೆ ನೀಡಿದ ವಿಡಿಯೋವನ್ನು ನೋಡಿ..

ಈ ವಿಡಿಯೋ instagram ನಲ್ಲಿ ಶೇರ್ ಮಾಡಲಾಗಿದ್ದು ಸಾಕಷ್ಟು ಇಂಟರ್ನೆಟ್ ಯೂಸರ್ ಗಳ ಮನವನ್ನು ಸಹಜವಾಗಿ ಗೆದ್ದಿದೆ. ಪ್ರಸ್ತುತ ವಿಡಿಯೋ manish0025tyagi ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 12.1 ಮಿಲಿಯನ್ ವೀಕ್ಷಣೆ ಪಡೆದಿದ್ದು 9 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಪಡೆದಿದೆ.