“ಅಪ್ಪಾ, ಕ್ಯಾಲ್ಕುಲೆಟರ್ ಇರುವಾಗ ಮಗ್ಗಿ ನೆನೆಪಿಟ್ಟುಕೊಳ್ಳುವ ಅವಶ್ಯಕತೆ ಏನಿದೆ?” ಎಂದ ಮಗನಿಗೆ ಮುಖೇಶ್ ಅಂಬಾನಿ ಕೊಟ್ಟ ಉತ್ತರ ಹೀಗಿತ್ತು..

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ? ದೇಶದ ಅತಿದೊಡ್ಡ ಶ್ರೀಮಂತ ಮಾತ್ರವೇ ಅಲ್ಲದೇ ಏಷ್ಯಾ ಖಂಡದಲ್ಲೇ ಅತಿದೊಡ್ಡ ಶ್ರೀಮಂತ ಹಾಗೂ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಎನ್ನುವ ಹೆಗ್ಗಳಿಕೆ ಮುಖೇಶ್ ಅಂಬಾನಿ ಅವರದ್ದಾದರೆ, ನೀತಾ ಅಂಬಾನಿ ಕೂಡಾ ತಮ್ಮ ಸಾಮಾಜಿಕ ಕಾರ್ಯಗಳಿಂದ ಹಾಗೂ ಜೀವನ ಶೈಲಿಯ ವಿಚಾರಗಳಿಂದ ಸುದ್ದಿಯಲ್ಲಿ ಇರುತ್ತಾರೆ‌. ಮುಖೇಶ್ ಮತ್ತು ನೀತಾ ದಂಪತಿಯು ಕೇವಲ ತಮ್ಮ ಶ್ರೀಮಂತಿಕೆ, ತಮ್ಮ ವ್ಯವಹಾರ ಹಾಗೂ ಜೀವನ ಶೈಲಿ ಮಾತ್ರವಲ್ಲ ಬದಲಿಗೆ ಅವರು ಪೋಷಕರಾಗಿ ತಮ್ಮ ಮಕ್ಕಳ ಜೀವನ ರೂಪಿಸುವಲ್ಲಿ ಏನೆಲ್ಲಾ ಪಾತ್ರ ವಹಿಸುತ್ತಾರೆ ಎನ್ನುವ ವಿಷಯವಾಗಿ ಕೂಡಾ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತಾರೆ.

ಮುಖೇಶ್ ಮತ್ತು ನೀತಾ ಅಂಬಾನಿ ತಮ್ಮ ಮೂವರು ಮಕ್ಕಳಿಗೂ ಕೂಡಾ ತಮ್ಮಲ್ಲಿ ಇರುವ ಹಣ ಹಾಗೂ ಸಂಪತ್ತಿನ ಬಗ್ಗೆ ಗರ್ವ ಪಡಲು ಅವಕಾಶವನ್ನು ನೀಡುವುದಿಲ್ಲವಂತೆ. ಹಲವು ಟಿವಿ ಶೋ ಗಳಲ್ಲಿ ಈ ವಿಚಾರವನ್ನು ಅಂಬಾನಿ ದಂಪತಿ ಸ್ವತಃ ತಾವೇ ಹೇಳಿಕೊಂಡಿರುವುದು ಕೂಡಾ ನಿಜ. ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಮುಖೇಶ್ ಅಂಬಾನಿ ಅವರ ವಿಚಾರಗಳೇನು ಎನ್ನುವುದನ್ನು ನಾವು ಕೂಡಾ ತಿಳಿಯೋಣ ಬನ್ನಿ. ಮುಖೇಶ್ ಅಂಬಾನಿ ಅವರು ಹಿಂದೂಸ್ತಾನ್ ಟೈನ್ಸ್ ನಲ್ಲಿ ಸಂದರ್ಶನ ನೀಡುವ ವೇಳೆ ಮಕ್ಕಳಲ್ಲಿ ಸ್ವಲ್ಪ ಹೆಚ್ಚುವರಿಯಾಗಿ ಏನಾದರೂ ಇರಲೇಬೇಕು, ಆದರೆ ಅದು ಶಿಕ್ಷಣದ ಆಧಾರದಲ್ಲಿ ಅಂದರೆ ಶಿಕ್ಷಣದ ವಿಚಾರದಲ್ಲಿ ಅಂತಹ ಹೆಚ್ಚುವರಿ ಎನ್ನುವುದು ಬೇಕಿಲ್ಲ ಎಂದಿದ್ದಾರೆ.

ತಂದೆಯ ಈ ಮಾತನ್ನು ಅಥವಾ ಆಲೋಚನೆಯನ್ನು ಅರಿತವರಂತೆ ಅವರ ಮೂವರು ಮಕ್ಕಳು ಕೂಡಾ ಶಿಕ್ಷಣದಲ್ಲಿ ಎಂದೂ ಟಾಪರ್ ಗಳಾದವರಲ್ಲ, ಬದಲಿಗೆ ಅವರು ಫಂಡಮೆಂಟಲ್ಸ್ ನಲ್ಲಿ ಎಂದಿಗೂ ಕೂಡಾ ಹಿಂದೆ ಉಳಿಯದೆ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದರು. ಒಮ್ಮೆ ಮುಖೇಶ್ ಅಂಬಾನಿ ಅವರ ಹಿರಿಯ ಮಗ ಅವರ ತಂದೆಯ ಬಳಿ ಅಪ್ಪಾ ಕ್ಯಾಲ್ಕುಲೇಟರ್ ಇರುವಾಗ ನಾವು ಮಗ್ಗಿಯನ್ನು ನೆನಪಿಟ್ಟುಕೊಳ್ಳುವುದು ಏಕೆ? ಎನ್ನುವ ಪ್ರಶ್ನೆಯನ್ನು ಕೇಳಿದರಂತೆ. ಈ ಸಂದರ್ಭದ ಕುರಿತಾಗಿ ಮುಖೇಶ್ ಅಂಬಾನಿ ಅವರು ಒಮ್ಮೆ ಪ್ರಸ್ತಾಪಿಸಿ ಅದರ ಬಗ್ಗೆ ವಿವರಣೆ ಯನ್ನು ನೀಡಿದ್ದರು‌. ಅವರು ಮಗನಿಗೆ ಅಂದು ಕೊಟ್ಟ ಉತ್ತರ ಏನಾಗಿತ್ತು ಎಂದು ತಿಳಿಯೋಣ ಬನ್ನಿ.

ಮಗ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮುಖೇಶ್ ಅಂಬಾನಿ ಅವರು ನಾವು ಅವುಗಳನ್ನು ಶಾಶ್ವತವಾಗಿ ನಮ್ಮ ಮೆದುಳಿನಲ್ಲಿ ಸಂಗ್ರಹಿಸಲು ಅವುಗಳನ್ನು ನೆನಪಿಡಬೇಕು, ಅಭ್ಯಾಸ ಮಾಡಬೇಕು ಎಂದು ಹೇಳಿದರಂತೆ. ಅವರು ಮಾತುಗಳು ಆಕಾಶ್ ಅಂಬಾನಿಯ ಮೇಲೆ ಯಾವ ಮಟ್ಟದ ಪ್ರಭಾವವನ್ನು ಬೀರಿತ್ತು ಎಂದರೆ ಅಂದಿನಿಂದ ಆಕಾಶ್ ಅಂಬಾನಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಎಲ್ಲಾ ಮಗ್ಗಿಯನ್ನು, ಗುಣಾಕಾರ ಮತ್ತು ಭಾಗಾಕಾರ ದ ವಿಷಯಗಳನ್ನು ನೆನಪಿಸಿಕೊಂಡು ಅನಂತರವೇ ನಿದ್ದೆ ಮಾಡಲು ಹೋಗುತ್ತಿದ್ದ ಎಂದು ಮುಖೇಶ್ ಅಂಬಾನಿಯವರು ಹೇಳಿದ್ದಾರೆ.

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಒಮ್ಮೆ ತಾವು ಮಕ್ಕಳಿಗೆ ಓದಿನ ಮಹತ್ವ ಏನೆಂಬುದರ ಅರಿವನ್ನು ಮೂಡಿಸುವ ಸಲುವಾಗಿ ಅವರೊಟ್ಟಿಗೆ ನಾವು ಕೂಡಾ ಓದುತ್ತಿದ್ದೆವು ಎಂದು ಹೇಳಿದ್ದಾರೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ತಮ್ಮ ಮಕ್ಕಳ ಪೋಷಕರಾಗಿ, ಅವರಿಗೆ ಜೀವನದ ಮೌಲ್ಯ ಗಳನ್ನು ಅರಿವು ಮೂಡಿಸುವಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ, ಸೂಕ್ತವಾದ ಗಮನ ನೀಡಿ ಅವರ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದು, ಅವರು ಪೋಷಕರಾಗಿ ಕೂಡಾ ಜೀವನದಲ್ಲಿ ಯಶಸ್ಸನ್ನು ಪಡೆದಿದ್ದಾರೆ.