ರಾಮನಗರದ ರೈತನೊಬ್ಬ ಪೊಲೀಸರಿಗೆ ಬೆವರಿಳಿಸಿದ ಬೆನ್ನಲ್ಲೇ ಮಂಡ್ಯದ ಗಂಡೊಬ್ಬ ಪೊಲೀಸರಿಗೆ ಆ’ವಾಜ್ ಹಾಕಿ ಅವರ ಅತಿಥಿಯಾದ ವಿಡಿಯೊ!
ಬರಬರುತ್ತಾ ಪೊಲೀಸರ ಜೊತೆ ವಾಗ್ವಾದಕ್ಕಿಳಿಯುವವರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರೇನು ತಮ್ಮ ಒಳ್ಳೆಯದಕ್ಕೆ ಕೆಲಸ ಮಾಡುತ್ತಿಲ್ಲ, ನಮ್ಮ ಹಿತರಕ್ಷಣೆಗಾಗಿ ನಡುರಸ್ತೆಯಲ್ಲೊ ಕೆಲಸ ಮಾಡುತ್ತಿರುತ್ತಾರೆ. ಅವರಿಂದ ಅತಿರೇಕಗಳಾದಾಗ ಖಂಡಿಸೋಣ, ಅದು ಬಿಟ್ಟು ಲಾಕ್ ಡೌನ್ ನಲ್ಲಿ ಬೇಕಾಬಿಟ್ಟಿ ತಿರುಗಾಡಿ ಪ್ರಶ್ನಿಸಿದ ಅವರ ಮೇಲೆಯೇ ಎಗರಾಡುವುದು ಸರಿ ಅಲ್ಲ.
ಬೆಳಿಗ್ಗೆ ನಾವು ಹಾಕಿದ ವಿಡಿಯೊದಲ್ಲಿ ಸ್ಪಷ್ಟವಾಗಿ ಪೊಲೀಸರ ತಪ್ಪಿತ್ತು, ಆದರೆ ಇಲ್ಲಿ ಆ ವ್ಯಕ್ತಿಯೇ ಒರಟಾಗಿ ನಡೆದುಕೊಂಡಿದ್ದಾನೆ. ಈ ಘಟನೆ ನಡೆದಿರುವುದು ಮಂಡ್ಯದ ಹಂಡ್ರೆಡ್ ಫೀಟ್ ರೋಡ್ ನಲ್ಲಿ. ಸಡಿಲಿಕೆ ಅವಧಿ ಮುಗುದಿದ್ದರೂ ಬೇಕಾಬಿಟ್ಟಿ ನಿಂತಿದ್ದ ಬೈಕ್ ಕೀ ತಗೆದುಕೊಂಡ ಪೊಲೀಸರಿಗೆ ಅಲ್ಲಿದ್ದ ಆ ವ್ಯಕ್ತಿ ಆ’ವಾಜ್ ಹಾಕತೊಡಗಿದ.
ಕೀ ಯಾಕ್ರಿ ತಕ್ಕೊತಿರಿ, ಬೈಕ್ ತಗೊಳೋಕೆ ನೀವ್ ಬಂಡವಾಳ ಕೊಟ್ಟಿದಿರಾ? ಅನ್ನೋದು ಆತನ ಪ್ರಶ್ನೆ. ಅಂದರೆ ಆತನ ಪ್ರಕಾರ ತಾನು ದುಡ್ಡು ಕೊಟ್ಟು ಬೈಕ್ ಕೊಂಡಾಕ್ಷಣ ಹೇಗೆ ಬೇಕಿದ್ದರೂ ಓಡಿಸಬಹುದು, ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಅಡ್ಡಾಡಬಹುದು ಅಂತಾಯ್ತು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅಲ್ಲಿದ್ದ ಪೊಲೀಸರು, ಬಾರಯ್ಯ ಇಲ್ಲಿ ನಿಂತ್ಕೊಂಡು ಡ್ಯೂಟಿ ಮಾಡ್ಬಾ ಎಂದು ಕರೆದಿದ್ದಾರೆ. ಆದರೂ ಆತನ ಮತ್ತಷ್ಟು ಮುಂದೆ ಬಂದು ಏರುದ್ವನಿಯಲ್ಲಿಯೇ ಒದರಾಡತೊಡಗಿದ. ಆಗ ಅಲ್ಲಿಗೆ ಮಂಡ್ಯ ಪಶ್ಚಿಮ ಠಾಣೆಯ ಎಸೈ ವೆಂಕಟೇಶ್ ಬಂದರು.
ಅವರೂ ಆತನನ್ನು ಅಲ್ಲಿ ನಿಂತಿರುವುದಕ್ಕೆ ಪ್ರಶ್ನಿಸುತ್ತಾರೆ, ಆದರೆ ಆತ ತನ್ನ ವಾದ ಮುಂದುವರೆಸೇ ಇರುತ್ತಾನೆ. ಆಯ್ತು ಬಾಪ್ಪಾ ಎಂದು ಮೊದಲು ಸೂಕ್ಷ್ಮವಾಗಿ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಹೊರಟರು. ಆತ ಕೊಸರಾಡತೊಡಗಿದಾಗ ಶರ್ಟ್ ಹಿಡಿದು ಎಳೆದು ತಗೆದುಕೊಂಡು ಹೋಗಿ ಜೀಪಿಗೆ ಹಾಕಿದರು. ಅಲ್ಲಿಂದ ಠಾಣೆಗೆ ಕರೆದೊಯ್ದರು.
Arguments between the public and the police pic.twitter.com/7QAiNzDBoF
— Crazy Creator (@CrazyCreator13) May 8, 2021
ಇವೆಲ್ಲ ಬೇಕಿತ್ತಾ ಆತನಿಗೆ. ರೂಲ್ಸ್ ಪ್ರಕಾರ ಅಂಗಡಿ ತೆರೆಯಲು ಇದ್ದ ಸಮಯ ಮುಗಿದ ಮೇಲೆ ಅಲ್ಲಿಂದ ಹೋಗಿಬಿಡಬೇಕು, ಅದು ಬಿಟ್ಟು ಕೇಳಿದವರಿಗೆಲ್ಲ ಧಮ್ಕಿ ಹಾಕುತ್ತಾ ಕೂತರೆ ಸುಮ್ಮನೆ ಬಿಡುತ್ತಾರಾ? ಇಷ್ಟಕ್ಕೂ ಅವರು ಮಾಡುತ್ತಿರುವುದು ನಮ್ಮ ರಕ್ಷಣೆಗಾಗಿ ಎಂಬುದು ತಿಳಿದಿರಲಿ.
-Team Infotrend