ತುಂಬಿದ ಮೈದಾನದ ಲ್ಲಿಯೇ ಎಲ್ಲರುದುರೆ ಮುಖಾಮುಖಿಯಾಗಿ ಜಗಳವಾಡಿದ ಅಶ್ವಿನ್ ಮತ್ತು ಜಡೇಜಾ, ವಿವಾದದ ಹಿಂದಿನ ಕಾರಣ ಬಹಿರಂಗ ಪಡಿಸಿದ ರೋಹಿತ್ ಶರ್ಮಾ!!
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದೆ. 4 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಗೆದ್ದುಕೊಂಡಿದೆ. ಅದರಿಂದ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಕೂಡ ಅರ್ಧ ಶತಕ ಬಾರಿಸಿ ಭಾರತ ತಂಡ 400 ರನ್ ಗಳ ಗಡಿ ದಾಟಲು ನೆರವಾದರು. ಮೊದಲ ಪಂದ್ಯದಲ್ಲಿ ಅಶ್ವಿನ್ ಮತ್ತು ಜಡೇಜಾ ಉತ್ತಮ ಪ್ರದರ್ಶನ ನೀಡಿದರು.
ಇದರಲ್ಲಿ ಅಶ್ವಿನ್ ಹಾಗೂ ಜಡೇಜಾ ಜೊತೆಗಿನ ಪಂದ್ಯದಲ್ಲಿ ನಡೆದ ಘಟನೆಯೊಂದನ್ನು ರೋಹಿತ್ ಹೇಳಿದ್ದಾರೆ. ಒಬ್ಬ ನಾಯಕನಾಗಿ ತಂಡವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎನ್ನುವುದು ಪ್ರಸಂಗ ತೋರಿಸುತ್ತದೆ. ಅಶ್ವಿನ್ ಮತ್ತು ಜಡೇಜಾ ಇಬ್ಬರೂ ಒಂದೇ ಸಮಯದಲ್ಲಿ ನನ್ನಿಂದ ಓವರ್ ಕೇಳುತ್ತಿದ್ದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 177 ರನ್ ಗಳಿಸಲಷ್ಟೇ ಶಕ್ತವಾಯಿತು. ಅದರಲ್ಲಿ ಜಡೇಜಾ 5 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಮತ್ತು ಸಿರಾಜ್ ತಲಾ 1 ವಿಕೆಟ್ ಪಡೆದರು. ಆ ಬಳಿಕ ಭಾರತ ಬ್ಯಾಟಿಂಗ್‌ಗೆ ಬಂದು 400 ರನ್ ಗಳಿಸಿತ್ತು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 5 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ಆ ಸಮಯದಲ್ಲಿ ಮೈದಾನದಲ್ಲಿ ಏನಾಯಿತು ಎಂಬುದನ್ನು ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ. ಪಂದ್ಯ ಗೆದ್ದ ಬಳಿಕ ಇರ್ಫಾನ್ ಪಠಾಣ್ ಜತೆ ಮಾತನಾಡುತ್ತಿದ್ದರು.
‘ತಂಡವನ್ನು ಮುನ್ನಡೆಸುವಾಗ ಬಹಳಷ್ಟು ಶ್ರಮವಹಿಸಬೇಕಗುತ್ತದೆ. ಭಾರತದ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಸಿಗುತ್ತದೆ. ಹಾಗಾಗಿ 3 ಸ್ಪಿನ್ನರ್‌ಗಳೊಂದಿಗೆ ಆಡುವುದು ಕಷ್ಟದ ಕೆಲಸ. ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಪಿನ್ನರ್‌ಗಳನ್ನು ನಿರ್ವಹಿಸುವುದು ಸುಲಭ ಆದರೆ ಮೈದಾನದಲ್ಲಿ ಅವರನ್ನು ಹೇಗೆ ನಿರ್ವಹಿಸುವುದು ಎಂಬುದು ಪ್ರಶ್ನೆ ಉಂಟಾಗುತ್ತದೆ’ ಎಂದು ರೋಹಿತ್ ಹೇಳಿದ್ದಾರೆ.
ಮುಂದೆ ರೋಹಿತ್ ಹೇಳಿದ್ದೇನೆಂದರೆ, ‘ ಆಡುತ್ತಿದ್ದಾಗ ಜಡೇಜಾ ನನ್ನ ಬಳಿ ಬಂದು, ನನ್ನ ಕರಿಯರ್ ನಲ್ಲಿ ಇದುವರೆಗೆ 249 ವಿಕೆಟ್ ಗಳು ಪೂರ್ಣವಾಗಿವೆ ಇನ್ನು ಒಂದು ವಿಕೆಟ್ ಪಡೆದುಕೊಂಡು 250 ವಿಕೆಟ್ ಸಂಖ್ಯೆ ಪೂರ್ಣ ಮಾಡಿಕೊಳ್ಳುವದಿದೆ ಅದಕ್ಕಾಗಿ ನನಗೆ ಒಂದು ಓವರ್ ಕೊಡು ಎಂದು ಕೇಳಿದನು. ಅದೇ ಸಮಯದಲ್ಲಿ ಅಶ್ವಿನ್ ಸಹ ನನ್ನ ಬಳಿ ಬಂದು ಈ ಇನ್ನಿಂಗ್ಸ್ ನಲ್ಲಿ ನಾನು ಇದುವರೆಗೆ 4 ವಿಕೆಟ್ ಪಡೆದುಕೊಂಡಿದ್ದೇನೆ ಇನ್ನು ಒಂದು ವಿಕೆಟ್ ಪಡೆದುಕೊಂಡು ಐದು ವಿಕೆಟ್ ಪೂರ್ಣ ಮಾಡುವದಿದೆ ಅದಕ್ಕಾಗಿ ನನಗೆ ಓವರ್ ಕೊಡು ಎಂದು ಕೇಳಿದನು. ಈ ಒಂದು ದೊಡ್ಡ ಸಮಸ್ಯೆಯ ನಡುವೆ ನಾನು ಸಿಲುಕಿ ಕೊಂಡಿದ್ದೆ’ ಎಂದು ರೋಹಿತ್ ಹೇಳಿದ್ದಾರೆ.