AUS vs ENG ODI: ಸ್ಟೇಡಿಯಂ ನಲ್ಲಿ ಕುಳಿತು ಡೇವಿಡ್ ಮಲಾನ್ ರ ಕ್ಯಾಚ್ ಒಂದೇ ಕೈಯಲ್ಲಿ ಹಿಡಿದ ದರ್ಶಕ ನಂತರ ಮಾಡಿದ್ದೇನು? 🤣

ಆಟದ ಗ್ರೌಂಡ್ ನಲ್ಲಿ ನಡೆಯುವ ಪಂದ್ಯಗಳ ಜೊತೆಗೆ ಸ್ಟೇಡಿಯಂ ನಲ್ಲಿ ಕುಳಿತ ದರ್ಶಕರ ದೃಶ್ಯಗಳೂ ಸಹ ನೋಡುಗರಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ. ಸದ್ಯ ಒಂದು ದೃಶ್ಯ ನಿಮಗಾಗಿ ಇಲ್ಲಿದೆ ನೋಡಿ.

ಟಿ 20 ವಿಶ್ವಕಪ್ ನಂತರ ಪ್ರಾರಂಭವಾದ ಆಸ್ಟ್ರೇಲಿಯಾ ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ ತುಂಬಾ ತಮಾಷೆಯ ದೃಶ್ಯ ಒಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಲು ಇಳಿದ ಇಂಗ್ಲಿಷ್ ತಂಡ ಡೇವಿಡ್ ಮಲಾನ್ ಅವರ ಅದ್ಭುತ (124 ಎಸೆತಗಳಲ್ಲಿ 12 ಫೋರ್ ಮತ್ತು 4 ಸಿಕ್ಸ್ ಸಹಾಯದಿಂದ 134 ರನ್ಸ್) ಬ್ಯಾಟಿಂಗ್ ನೆರವಿನಿಂದ 287 ರನ್ ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಇಲ್ಲಿ ಮಲಾನ್ ಅವರು ಪ್ರೇಕ್ಷಕರಿಗೆ ತಮ್ಮ ಬ್ಯಾಟಿಂಗ್ ನಿಂದ ಫುಲ್ ಮನರಂಜನೆ ನೀಡಿದರು. ಏತನ್ಮಧ್ಯೆ ಒಂದು ಘಟನೆ ನಡೆದು ಹೋಯಿತು. ಅದೇನೆಂದರೆ ಅವರು ಬಾರಿಸಿದ ಬಾನೆತ್ತರದ ಸಿಕ್ಸ್ ಒಂದು ನೇರ ಪ್ರೇಕ್ಷಕರ ಗ್ಯಾಲರಿಯಲ್ಲಿ ಬೀರ್ ಕುಡಿಯುತ್ತ ಕುಳಿತ ಮಹಾಶಯನ ಕಡೆಗೆ ಹೋಗಿದೆ. ಆ ಸ್ಥಿತಿಯಲ್ಲೂ ಆತ ಸ್ವಲ್ಪವೂ ತಪ್ಪದೇ ತುಂಬಾ ಈಸಿಯಾಗಿ ಅದೂ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದಿದ್ದಾನೆ ಅಷ್ಟೇ ಅಲ್ಲ ಅದನ್ನು ಪುನಃ ಗ್ರೌಂಡ್ ಒಗೆಯುತ್ತಲೇ ಮತ್ತೆ ಒಂದು ಸಿಪ್ ಬೀರ್ ಗುಟುಕರಿಸಿದ್ದಾನೆ. ಈ ದೃಶ್ಯ ನೋಡುಗರೆಲ್ಲರಿಗೆ ನಗೆಗಡಲಲ್ಲಿ ತೇಲಿಸಿದೆ

ನೋಡಿ ಈ ವಿಡಿಯೋ…

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನೀಡಿದ 287 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ 86 ಸ್ಟೀವ್ ಸ್ಮಿತ್ 80 ಮತ್ತು ಟ್ರೇವಿಕ್ಸ್ ಹೆಡ್ 69 ರನ್ ಗಳ ಸಹಾಯದಿಂದ ಇನ್ನು 19 ಬಾಲ್ ಗಳು ಬಾಕಿ ಇರುವಾಗಲೇ ವಿಜಯ ಸಾಧಿಸಿತು.