VIDEO : ಕೊರೋನದಿಂದ ರಕ್ಷಣೆ ಪಡೆಯಲು ಆಯುರ್ವೇದಿಕ್ ಸ್ಟೀಮ್ ಸಿಸ್ಟಂ ಅಳವಡಿಸಿಕೊಂಡಿರುವ ಗುಂಡ್ಲುಪೇಟೆ ಪೊಲೀಸರು

ಕೊರೋನ ನಿಯಂತ್ರಣಕ್ಕೆ ದೇಶಾದ್ಯಂತ ಹತ್ತಾರು ಬಗೆಯ ವೈದ್ಯಕೀಯ ಪದ್ದತಿ ಬಳಸಲಾಗುತ್ತಿದೆ. ಕಷಾಯ ಕುಡಿಯೋದ್ರಿಂದ ಹಿಡಿದು ಮೂಗಿನಲ್ಲಿ ನಿಂಬೆ ಹಣ್ಣಿನ ರಸ ಬಿಟ್ಕೊಳೋವರೆಗೆ ಹಲವಾರು ರೀತಿ ಔಷಧಿಗಳನ್ನು ಜನ ಕೊರೋನಕ್ಕೆ ಬಳಸುತ್ತಿದ್ದಾರೆ. ಅದರಲ್ಲಿ ಸ್ಟೀಮ್ ಇನ್ಹೇಲರ್ ಕೂಡ ಒಂದು.

ಬಿಸಿ ಉಗಿ ತಗೆದುಕೊಳ್ಳುವುದರಿಂದ ಮೂಗು – ಗಂಟಲಿನ ಭಾಗದಲ್ಲಿರುವ ವೈರಸ್ ನಾಶವಾಗುತ್ತವೆ ಎಂಬುದು ನಿಜ ಕೂಡ ಹೌದು. ಕೊರೋನ ಬರುವ ಮೊದಲು ಇದು ಒಳ್ಳೆ ಮುನ್ನೆಚ್ಚರಿಕೆ ಅನ್ನಬಹುದು. ಈಗ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ತಮ್ಮ ಸಿಬ್ಬಂದಿಗಾಗಿ ಆಯುರ್ವೇದಿಕ್ ಸ್ಟೀಮ್ ಸಿಸ್ಟಂ ಅಳವಡಿಸಲಾಗಿದೆ.

ಇವರು ಬರೀ ಸ್ಟೀಮ್ ಬದಲಿಗೆ ಅರಿಶಿಣ, ಮೆಣಸು, ಜೀರಿಗೆ ಬಳಸಿ ಆಯುರ್ವೇದಿಕ ರೀತಿ ಸ್ಟೀಂ ಪಡೆಯುತ್ತಿದ್ದಾರೆ. ಒಂದು ಕುಕ್ಕರ್ ನಲ್ಲಿ ಮೆಣಸು, ಜೀರಿಗೆ, ಅರಿಶಿಣ ಪುಡಿ ಹಾಕಿ ಅದನ್ನು ಕುದಿಸಿ, ವಿಸಲ್ ಹಾಕುವ ಜಾಗದಲ್ಲಿ ಪೈಪ್ ಅಳವಡಿಸಿ ಅಲ್ಲಿಂದ ಬರುವ ಸ್ಟೀಂ ತಗೆದುಕೊಳ್ಳುವ ಯೋಜನೆ ಇವರದು.

ಒಂದು ಸಲಕ್ಕೆ ನಾಲ್ಕು ಜನ ಸಿಬ್ಬಂದಿ ಸ್ಟೀಂ ತಗೆದುಕೊಳ್ಳುವ ಹಾಗೆ ವ್ಯವಸ್ಥೆ ಮಾಡಲಾಗಿದ್ದು, ಇದು ಎಲ್ಲರಿಗೂ ಮೆಚ್ಚುಗೆಯಾಗಿದೆ. ಎಲ್ಲ ಸಿಬ್ಬಂದಿ ಡ್ಯೂಟಿಗೆ ಹೋಗುವ ಮೊದಲು ಹಾಗೂ ಡ್ಯೂಟಿಯಿಂದ ಮರಳಿದ ಮೇಲೆ ಠಾಣೆಯಲ್ಲಿ ಹೀಗೆ ಸ್ಟೀಂ ತಗೆದುಕೊಂಡೇ ಮನೆಗೆ ಹೋಗುತ್ತಾರೆ.

ಸದಾಕಾಲ ಹೊರಪ್ರದೇಶದಲ್ಲಿ ಇದ್ದು ವಾಹನ, ಜನರನ್ನು ನಿಂತ್ರಿಸುವ ಪೊಲೀಸರಿಗೆ ಕೊರೋನ ತಗುಲುವ ಅಪಾಯ ಹೆಚ್ಚು, ಹೀಗಾಗಿ ಈ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದೆ. ಗುಂಡ್ಲುಪೇಟೆ ಠಾಣೆಯ ಎಸೈ ರಾಜೇಂದ್ರ ಹಾಗೂ ಹೆಡ್ ಕಾನ್ಸಟೇಬಲ್ ಸುರೇಶ್ ಎಂಬುವವರ ಯೋಜನೆ ಇದು. ಇವರ ಈ ವ್ಯವಸ್ಥೆಗೆ ಇಲಾಖೆಯಲ್ಲಷ್ಟೇ ಹೊರಗೂ ಪ್ರಸಂಶೆ ವ್ಯಕ್ತವಾಗಿದೆ.
-Team Infotrend