ಬಾಳೆಹಣ್ಣಲ್ಲ ಇದು, ಹಾವಿದೆ! ನಂಬುವುದು ಕಷ್ಟ; VIDEO ನೋಡಿದ ಮೇಲೆ ಗೊತ್ತಾಗುತ್ತದೆ.
ನಿಸರ್ಗ ತನ್ನೊಳಗೆ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಈ ರಹಸ್ಯಗಳು ಕೆಲವರಿಗೆ ಗೊತ್ತಿದ್ದಾರೆ ಜಾಸ್ತಿ ಜನರಿಗೆ ಇವುಗಳ ಬಗ್ಗೆ ಗೊತ್ತೇ ಇಲ್ಲ. ಜಗತ್ತಿನಲ್ಲಿ ಅಸಂಖ್ಯೆ ರೀತಿಯ ಜೀವ ಜಂತುಗಳನ್ನು ನೋಡಿದಾಗ ಮನುಷ್ಯನಿಗೆ ಆಶ್ಚರ್ಯ ಉಂಟಾಗುತ್ತದೆ. ಸದ್ಯ ಇದೇ ರೀತಿಯ ಒಂದು ಹಾವು ನೋಡಿದಾಗ ಮನುಷ್ಯ ನಿಜವಾಗಿಯೂ ಬೆಚ್ಚಿ ಬೀಳುವಂತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಾವಿನ ವಿಡಿಯೋ ಒಂದು ತುಂಬಾ ವಿಶೇಷವಾಗಿದೆ. ಈ ವಿಡಿಯೋದಲ್ಲಿ ಕಂಡು ಬರುವ ಹಾವು ಸೇಮ್ ಟು ಸೇಮ್ ಬಾಳೆಹಣ್ಣಿನ ತರ ಕಂಡು ಬರುತ್ತಿದೆ. ಹಾವು ಮತ್ತು ಬಾಳೆಹಣ್ಣಿನಲ್ಲಿ ಸ್ವಲ್ಪವೂ ವ್ಯತ್ಯಾಸ ಕಂಡು ಬರುತ್ತಿಲ್ಲ.
ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಟೇಬಲ್ ಮೇಲೆ ಒಂದು ಬಾಳೆಹಣ್ಣು ಮತ್ತು ಅದರ ಹಾಗೆ ಕಾಣುವ ಹಾವು ಕಂಡು ಬರುತ್ತಿದೆ. ಮೊದಲ ಕ್ಷಣದಲ್ಲಿ ನೋಡಿದಾಗ ಕಣ್ಣುಗಳು ಮೋಸ ಹೋಗುತ್ತವೆ ನಿಶ್ಚಿತ. ಎರಡರಲ್ಲಿ ಹೆಚ್ಚಿನ ಯಾವುದೇ ವಿಶೇಷ ವ್ಯತ್ಯಾಸಗಳೇ ಕಂಡು ಬರುತ್ತಿಲ್ಲ. ಈ ಹಾವಿಗೆ ಬನಾನಾ ಪೈಥಾನ್ ಎಂದು ಕರೆಯಲಾಗುತ್ತದೆ. ಬಾಳೆ ಹಣ್ಣಿನ ಹಾಗೆ ಕಾಣುತ್ತದೆ ಎಂಬ ಕಾರಣಕ್ಕೆ ಈ ಹೆಸರು ಬಿದ್ದಿದೆ.
ವಿಡಿಯೋ ನೋಡಿ
View this post on Instagram
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಲಾಗಿದೆ. ವಿಡಿಯೋದಲ್ಲಿಯ ಈ ಹಾವನ್ನು ನೋಡಿ ಜನರು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.