Video: Bangkok ಏರ್ಪೋರ್ಟ್ ನಲ್ಲಿಯ ಸಮುದ್ರ ಮಂಥನದ ಅದ್ಭುತವಾದ ಕಲಾಕೃತಿ ಒಮ್ಮೆ ನೋಡಿ!!!

ನಮ್ಮ ಸಂಸ್ಕೃತಿ ಎಂದರೆ ನಮ್ಮ ಜೀವಾಳ. ಇಡೀ ಜಗತ್ತಿನಾದ್ಯಂತ ಭಾರತದ ಸಂಸ್ಕೃತಿಯನ್ನು ಹಾಡಿ ಹೊಲಗಳುತ್ತಾರೆ. ಪ್ರತಿಯೊಂದು ದೇಶ ನಮ್ಮ ಪರಂಪರೆಯನ್ನು ಕಂಡು ತಾವು ಅಳವಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಹಿಂದಿನ ಕಾಲದಿಂದಲೂ ಭಾರತ ಇದೊಂದು ದೈವ, ಮಹಾನ್ ಜ್ಞಾನಿ, ಮಹಾನ್ ವ್ಯಕ್ತಿಗಳು ವಾಸಿಸಿದ ದೇಶ ವಾಗಿದೆ. ನಮ್ಮ ದೇಶದಲ್ಲಿ ಅನೇಕ ಪುರಾಣ , ಗ್ರಂಥ, ಕಾವ್ಯ , ಮಹಾಕಾವ್ಯಗಳ ರಚನೆ ಮಾಡಲಾಗಿದೆ. ಇಡೀ ಜಗತ್ತಿಗೆ ಬದುಕುವದೆ ಹೇಗೆ ಎಂಬುದು ಗೊತ್ತೇ ಇರದ ಕಾಲದಲ್ಲಿ ನಮ್ಮ ದೇಶದ ಜನರು ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರು.

ನಮ್ಮ ದೇಶದಲ್ಲಿ ಹೆಚ್ಚಾಗಿ ದೇವರನ್ನು ಪೂಜಿಸುತ್ತಾರೆ. ಅಲ್ಲದೆ ಪ್ರತಿ ಧರ್ಮದ ಜನರು ಅವರವರ ದೇವರನ್ನು ಪೂಜೆ ಮಾಡುತ್ತಾರೆ. ಭಾರತ ಅನೇಕ ಧರ್ಮಗಳು ಒಳಗೊಂಡ ಒಂದು ಬೃಹದಾಕಾರದ ದೇಶವಾಗಿದೆ. ನಮ್ಮ ದೇಶದ ಸಂಸ್ಕೃತಿ ಹಾಗೂ ಕೆಲವು ಪುರಾಣಗಳನ್ನು ಅನೇಕ ದೇಶದ ಜನರು ಅಳವಡಿಸಿ ಕೊಂಡಿದ್ದಾರೆ. ಇದಕ್ಕೆ ಈ ವಿಡಿಯೋನೆ ಸಾಕ್ಷಿ. ಪ್ರಸ್ತುತ ವಿಡಿಯೋ ನೋಡಿದ ಮೇಲೆ ವ್ಹಾ ನಮ್ಮ ದೇಶದ ಪ್ರತೀಕ ಎಂದು ನೀವು ಹೇಳುವಿರಿ.

ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಬಾಂಗ್ಕೊಕ್ ಏರ್ ಪೋರ್ಟ್ ನಲ್ಲಿ ವಿಷ್ಣು ಪುರಾಣ ದಲ್ಲಿಯ ನಡೆದ ಸಮುದ್ರ ಮಂಥನದ ಅದ್ಭುತ ಕಲಾಕೃತಿಯನ್ನು ನಿರ್ಮಾಣ ಮಾಡಿದ್ದಾರೆ. ಸಮುದ್ರ ಮಂಥನ ದೇವತೆಗಳು ಮತ್ತು ಅಸೂರರ ನಡುವೆ ನಡೆದ ಒಂದು ದೊಡ್ಡ ಯುದ್ಧವೇ ಆಗಿದೆ. ಹಿಂದೂ ಧರ್ಮದಲ್ಲಿ, ಸಮುದ್ರಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆದ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ ಕುಂಭ ಮೇಳ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ. ಈ ಪ್ರಸಂಗವನ್ನು ಬಾಂಗ್ಕೊಕ್ ವಿಮಾನ ನಿಲ್ದಾಣದಲ್ಲಿ ರಚನೆ ಮಾಡಲಾಗಿದೆ. ಇದನ್ನು ನೋಡಿದರೆ ನಿಜವಾಗಿಯೂ ಇಲ್ಲಿ ಸಮುದ್ರ ಮಂಥನ ನಡೆಯುತ್ತಿದ್ದೆ ಎನಿಸುತ್ತೆ.

ವೀಡಿಯೋ ನೋಡಿ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ hindupariwar.in ಎಂಬ ಹೆಸರಿನ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ