ಮದುವೆ ಮಂಟಪದ ಮುಂದಿದ್ದ ಸುಂದರವಾದ ಮಹಿಳೆಯ ಪ್ರತಿಕೃತಿ(ಸ್ಟ್ಯಾಚು) ಕಂಡು ಈ ವ್ಯಕ್ತಿ ಅದರೊಂದಿಗೆ ಮಾಡಿದ್ದೇನು ವೀಡಿಯೋದಲ್ಲಿ ನೋಡಿ!!
ಮದುವೆಯ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿರುತ್ತಾರೆ. ಇತ್ತೀಚೆಗಂತೂ ಮದುವೆಯ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುವದು ಒಂದು ಪ್ಯಾಶನ್ ಮತ್ತು ವಾಡಿಕೆಯಾಗಿ ಬಿಟ್ಟಿದೆ.
ಮೊದಮೊದಲಂತೂ ಮದುಮಕ್ಕಳಿಗೆ ಬಿಟ್ಟು ಎಲ್ಲರೂ ಕುಣಿಯುತ್ತಿದ್ದರು. ಆದರೆ ಈಗ ಹೊಸ ಟ್ರೆಂಡ್ ಪ್ರಕಾರ ಮದುಮಕ್ಕಳೇ ತಮ್ಮ ಮದುವೆಯಲ್ಲಿ ಮೊದಲು ಡ್ಯಾನ್ಸ್ ಮಾಡಲು ತಯಾರಾಗುತ್ತಾರೆ. ಈಗ ಮದುವೆಯ ಮೊದಲು ನಡೆಯುವ ಮುಖ್ಯವಾದ ಕಾರ್ಯಕ್ರಮ ಅರಿಶಿಣ ಶಾಸ್ತ್ರ. ಈ ಅರಿಶಿಣ ಶಾಸ್ತ್ರದಲ್ಲಿ ಮದುಮಗಳು ಕುಣಿದ ವಿಡಿಯೋ ಹಾಗೂ ಮದುವೆಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮದುಮಗ ಮದುಮಗಳು ಕುಣಿದ ಅನೇಕ ವೀಡಿಯೋಗಳು ನಾವು ಸೋಶಿಯಲ್ ಮಿಡಿಯಾದಲ್ಲಿ ನೋಡಿದ್ದೇವೆ. ಆದರೆ ಸದ್ಯಕ್ಕೆ ಒಂದು ಮದುವೆಯಲ್ಲಿ ನಡೆದ ವಿಚಿತ್ರವಾದ ಘಟನೆಯ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಮದುವೆಯ ಕಾರ್ಯಕ್ರಮ ವಿರುತ್ತದೆ. ಅದರ ಸಲುವಾಗಿ ಭವ್ಯ ಆಕಾರದ ಮಂಟಪವನ್ನು ನಿಲ್ಲಿಸಲಾಗಿರುತ್ತದೆ. ಮುಂಭಾಗದಲ್ಲಿ ಅಂದರೆ ಮಂಟಪದಲ್ಲಿ ಎಂಟ್ರಿ ಮಾಡುವ ಸ್ಥಳದಲ್ಲಿ ಒಂದು ಬದಿಗೆ ಕೈ ಮುಗಿದು ನಮಸ್ಕಾರ ಮಾಡುವ ಸುಂದರ ಯುವತಿಯ ಪ್ರತಿಕೃತಿಯೊಂದನ್ನು ನಿಲ್ಲಿಸಿರುತ್ತಾರೆ. ಆಗ ಅದೇ ಮದುವೆಯ ಸಲುವಾಗಿ ಒಬ್ಬ ವ್ಯಕ್ತಿ ಬರುತ್ತಿರುತ್ತಾನೆ ಬರುತ್ತಿದ್ದ ಸಮಯದಲ್ಲಿ ತೆರೆ ಇಸ್ಕ್ ಮೇ ನಾಚೆಂಗೆ ಹಾಡು ಸಹ ಚಾಲ್ತಿಯಲ್ಲಿರುತ್ತದೆ. ಇದ್ದಕಿದ್ದಂತೆ ಈ ವ್ಯಕ್ತಿಯ ಗಮನ ಮಂಟಪದ ಮುಂಭಾಗದಲ್ಲಿ ನಿಲ್ಲಿಸಿರುವ ಯುವತಿಯ ಪ್ರತಿಕೃತಿಯ ಕಡೆಗೆ ಹೋಗುತ್ತದೆ, ತದನಂತರ ಈ ವ್ಯಕ್ತಿಯ ಮನಸ್ಸಲ್ಲಿ ಏನಾಯಿತೋ ಎಂಬುದು ಗೊತ್ತಿಲ್ಲ, ಯುವತಿಯನ್ನು ನೋಡುತ್ತಿದ್ದಂತೆಯೇ ಆದರ ಬಳಿ ಹೋಗಿ ಅದನ್ನು ತನ್ನ ಎರಡು ಕೈಯಲ್ಲಿ ಹಿಡಿದುಕೊಂಡು ಅದರ ಜೊತೆಗೆ ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಇದನ್ನು ಕಂಡು ಅಲ್ಲಿದ್ದ ಜನರು ಓಡೋಡಿ ಈತನ ಕಡೆಗೆ ಬರುತ್ತಾರೆ, ಈತನ ಕೈಯಲ್ಲಿದ್ದ ಪ್ರತಿಮೆಯನ್ನು ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರು ಸಹ ಆತ ಬಿಡುವುದೇ ಇಲ್ಲ. ಈ ವೀಡಿಯೋ ನೋಡಿದ ನೆಟ್ಟಿಗರು ‘ಪಾಪ ಆತನಿಗೆ ಈ ಪ್ರತಿಮೆ ಒಬ್ಬ ಸುಂದರವಾದ ಹುಡುಗಿನೆ ಇರಬಹುದು ಎಂದುಕೊಂಡು ಡ್ಯಾನ್ಸ್ ಮಾಡುತ್ತಿದ್ದನು ಅನಿಸುತ್ತೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ.
https://youtube.com/shorts/UwSd40OedmA?feature=share
ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಫನ್ ಟೈಮ್ ಎಂಬ ಹೆಸರಿನ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಬಹಳಷ್ಟು ಜನರು ವೀಕ್ಷಣೆ ಮಾಡಿ ಲೈಕ್ ಸಹ ಮಾಡಿದ್ದಾರೆ.