ನೀವೂ ನಿರುದ್ಯೋಗಿ ಆಗ್ಬಿಟ್ರಾ ಸಾರ್? ಎಂದು ವ್ಯಕ್ತಿಯೊಬ್ಬ ಶಾರುಖ್ ಗೆ ಪ್ರಶ್ನೆ ಕೇಳಿದಾಗ ಆತನ ಫ್ಯಾನ್ಸ್ ಕೊಟ್ಟ ಉತ್ತರಗಳು ಹೇಗಿವೆ ನೋಡಿ!

ಕಿಂಗ್ ಖಾನ್ ಆವಾಗಾವಾಗ ಟ್ವಿಟರ್ ಹ್ಯಾಂಡಲ್ ನಿಂದ ಅಭಿಮಾನಿಗಳ ಜೊತೆ ಮಾತಾಡ್ತಾ ಇರ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. #AskSrk ಬಳಸಿಕೊಂಡು ಯಾರಾದರೂ ಶಾರುಖ್ ಗೆ ಏನಾದರೂ ಪ್ರಶ್ನೆ ಕೇಳಬಹುದು. ತಮಗನಿಸಿದ್ದನ್ನು ಇಲ್ಲಿ ನೇರವಾಗಿ ಹೇಳಬಹುದು, ಇದಕ್ಕೇ ಶಾರುಖ್ ಖಾನ್ ಸ್ವತಃ ಕಲ್ಪಸಿ ಕೊಟ್ಟಿದ್ದಾರೆ. ಅಲ್ಲಿ ಬರುವ ಚಿತ್ರ ವಿಚಿತ್ರ ಪ್ರಶ್ನೆಗಳಿಗೆ ಸಾಧ್ಯವಾದಾಗೆಲ್ಲ ಸ್ವತಃ ಶಾರುಖ್ ಉತ್ತರಿಸುತ್ತಾರೆ, ಇಲ್ಲವಾದರೆ ಆತನ ಅಭಿಮಾನಿಗಳು ಉತ್ತರಿಸುತ್ತಾರೆ.

ಆದರೆ ಇಲ್ಲಿ ಒಂದು ಪ್ರಶ್ನೆಗೆ ಆತನಿಗಿಂತ ಅಭಿಮಾನಿಗಳಿಗೇ ಉರ್ದೋಗಿಬಿಟ್ಟಿದೆ. “ನೀವೂ ನಿರುದ್ಯೋಗಿ ಆಗ್ಬಿಟ್ರಾ ಸಾರ್, ನಮ್ ಥರ?” ಅಂತ ಅಭಿಮಾನಿಯೊಬ್ಬ ಸಹಜವಾಗಿ ಕೇಳಿದ ಪ್ರಶ್ನೆಗೆ ಶಾರುಖ್ ತೀರ ಖಡಕ್ಕಾಗಿ ಉತ್ತರಿಸಲಿಲ್ಲವಾದರೂ ಆತನ ಫ್ಯಾನ್ಸ್ ಗೆ ಇದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ತಲೆಗೊಬ್ಬೊಬ್ಬರು ಉತ್ತರ ಕೊಟ್ಟರು. ಒಬ್ಬರಿಗಿಂತ ಒಬ್ಬರು ಕೆಳಗಿಳಿದು ಮಾತಾಡಿದರು.

Nitin Chaudhary ಎಂಬ ಟ್ವಿಟರ್ ಬಳಕೆದಾರರು ಈ ಪ್ರಶ್ನೆ ಕೇಳಿದ್ದು ಅದಕ್ಕೆ ಶಾರುಖ್, Jo kuch nahi karte…. woh… ಎಂದಷ್ಟೇ ರಿಪ್ಲೆ ಮಾಡಿದ್ದಾರೆ. ಖುದ್ದು ಶಾರುಖ್ ರಿಪ್ಲೆ ಮಾಡಿದ್ದಕ್ಕೆ ಆ ವ್ಯಕ್ತಿ ಖುಷಿಪಡುವಷ್ಟರಲ್ಲಿ ಆತನ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ತಮಗೆ ರಿಪ್ಲೆ ಮಾಡಲ್ವಲ್ಲಾ ಎಂಬ ಸಂಕಟ ಜೊತೆಗೆ ಇವರು ನಿರುದ್ಯೋಗಿ ಅಂತ ಕರೆದುಬಿಟ್ಟರಲ್ಲಾ ಎಂಬ ಸಿಟ್ಟಿಗೆ ನಿತಿನ್ ಚೌಧರಿ ಮೇಲೆ ಎಗರಾಡಿದ್ದಾರೆ. ಅವರ ಕೆಲವು ಉತ್ತರಗಳು ಕೆಳಗಿವೆ ನೋಡಿ…

ಅವರ ಹತ್ರ ಅವರ ಶೂ ಪಾಲಿಶ್ ಮಾಡ್ಕೊಳುವಷ್ಟೂ ಟೈಂ ಇಲ್ಲ, ನೀವಿದಿರೆಲ್ಲ ಅವರ ಶೂ ಕ್ಲೀನ್ ಮಾಡೋಕೆ.
-ತೌಸಿಫ್ ಶೇಖ್
ಬೇರೋಜಗಾರ್ ಸಿನೆಮಾದಲ್ಲಿ ನಿನಗೊಂದು ಕೆಲಸ ಕೊಡುತ್ತೇವೆ, ಅಲ್ಲಿವರೆಗೆ ರೈಯಿಸ್ ಮೂವಿ ನೋಡ್ತಾ ಇರು.
-ಸೈಯ್ಯದ್ ಶಹಾಬುದ್ದೀನ್
ಕಂಗ್ರಾಜುಲೆಶನ್ ಚೂತಿಯೇ
-ಇಸ್ಮಾಯಿಲ್ ಖಾನ್
ನಿನ್ನ ಮುಂದಿನ ನೂರು ಪೀಳಿಗೆ ದುಡಿದರೂ ಶಾರುಖ್ ತಮ್ಮ ಮಕ್ಕಳಿಗೆ ಖರ್ಚು ಮಾಡುವಷ್ಟು ಕೂಡ ದುಡಿಯಲಾರರು.
-ಸಿದ್ಧೀಖ್
ನಿನ್ನ ಯೋಗ್ಯತೆಗೆ ಹೊಂದದ ಟ್ವೀಟ್ ಮಾಡಬೇಡ.
-ಜುನೈದ್ ಖಾನ್
ಲೇ ಗಾಂ’ ಡು, ಹಿಂದೂಸ್ಥಾನದ ದೊಡ್ಡ ದೊಡ್ಡ ನಿರ್ದೇಶಕರುಗಳು ಕ್ಯೂ ನಿಂತಿದಾರೆ, ಅದೆಂಗೆ ಅವರು ನಿರುದ್ಯೋಗಿಯೋ?
-ಖಲಂದರ್ ಖಾನ್
ನಿರುದ್ಯೋಗದ ಪರಿಣಾಮ ಕಾಣಸ್ತಿದೆ, ಹೋಗಿ ಯಾವ್ದರ ಕೆಲಸ ನೋಡ್ಕೊ.
-ಆಹೇಲ್

ಇವು ಬರಿ ಸ್ಯಾಂಪಲ್, ಇಂಥ ನೂರಾರು ತೀರ ಬರೆಯಲೂ ಆಗದಷ್ಟು ಹೊಲಸು ರಿಪ್ಲೆ ಆತನ ಫ್ಯಾನ್ಸ್ ನಿಂದ ಬಂದಿವೆ. ನಿತಿನ್ ತಮಾಷೆಗೆ ಕೇಳಿದನೋ ಅಥವಾ ಏನ್ ಬೇಕಾದ್ರು ಕೇಳಬಹುದು ಎಂಬ ಕಾರಣಕ್ಕೆ ಕೇಳಿದನೋ ಆದರೆ ಶಾರುಖ್ ಗಿಂತ ಜಾಸ್ತಿ ಆತನ ಅಭಿಮಾನಿಗಳಿಗೇ ಉರಿದುಬಿಟ್ಟಿದೆ!