ಈ ವರ್ಷದ ಉತ್ತಮ ನಟನಿಗೆ ಸಿಗುವ ಆಸ್ಕರ್ ಅವಾರ್ಡ್ ಈ ಪುಟ್ಟ ಮರಿ ಹುಡುಗನಿಗೆ… ಯಾಕೆ? ಈ Video ನೋಡಿ ಗೊತ್ತಾಗುತ್ತೆ.
ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರಿಗೂ ಹೃದಯದಿಂದ ಸೆಳೆಯುತ್ತವೆ. ಇವುಗಳನ್ನು ನೋಡುವ ನೆಟ್ಟಿಗರು ಇಂಥ ವಿಡಿಯೋಗಳನ್ನು ಹೃದಯದಿಂದ ಲೈಕ್ ಮಾಡುತ್ತಾರೆ. ಅನೇಕ ವಿಡಿಯೋಗಳು ಮಕ್ಕಳ ಮುಗ್ಧ ನಟನೆಯಿಂದಲೂ ಕೂಡಿವೆ. ಈ ನಟನೆ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಅಷ್ಟೊಂದು ನೈಜವಾಗಿ ನಟಿಸಿದ ಈ ಮಕ್ಕಳು ವಿಡಿಯೋ ನೋಡಿದಾಗ ಅದೆಲ್ಲಿ ಟ್ರೈನಿಂಗ್ ತೆಗೆದುಕೊಂಡು ಬಂದಿದ್ದಾರೆ ಎಂಬ ಪ್ರಶ್ನೆ ಹುಟ್ಟುತ್ತದೆ.
ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಪುಟ್ಟ ಮಗುವಿನ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ಕಂಡುಬರುವ ಪ್ರಕಾರ, ಮೊದಲ ನೋಟದಲ್ಲಿ ಮಗು ತನ್ನ ಪುಟ್ಟ ಹಾಗೂ ಎಳೆಯ ಕೈಯನ್ನು ಬಾಟಲಿಯಲ್ಲಿ ಸಿಲುಕಿಸಿಕೊಂಡಿದ್ದಾನೆಂದು ಒಮ್ಮೆಲೆ ಮನಸ್ಸಿಗೆ ನೋವಾಗುತ್ತದೆ. ಮರುಕ್ಷಣವೇ ಆತನ ತಂದೆಯು ಹುಡುಗ ಬಾಟಲಿಯಲ್ಲಿ ಸಿಲುಕಿದ ಕೈಯನ್ನು ತೆಗೆಯಲು ಮುಂದಾಗುತ್ತಾನೆ. ಆಗ ಹುಡುಗನ ಆಕ್ಟಿಂಗ್ ನೋಡಿ ಯಾರಾದರೂ ಮೂರ್ಚೆ ಹೋಗಬಹುದು. ಅಷ್ಟೊಂದು ಲೀಲಾಜಾಲವಾಗಿ ಈ ಹುಡುಗ ತನ್ನ ಕಲೆಯನ್ನು ಈಗಲೇ ತೋರಿಸಿದ್ದಾನೆ.
ನೋಡಿ ಹುಡುಗನ ಈ ಸುಂದರ ವಿಡಿಯೋ…
View this post on Instagram
ಮುಗ್ಧ ಮಗುವಿನ ಮನಸೆಳೆಯುವ ಈ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶ್ರೀನಿವಾಸ ಸುಡಿಕೊಂಡ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 1.2 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ ಈ ವಿಡಿಯೋ ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಹೊಂದಿದೆ.