Video; ಭಕ್ತ ಪಾಪಗಳಿಂದ ಮುಕ್ತಗೊಂಡು ಪವಿತ್ರವಾಗಲು ಭಕ್ತಿಯಿಂದ ಯಮುನೆಯಲ್ಲಿ ಹೊಡೆದನು ಜಿಗಿತ! ಪಾಪ….!
ಸಾಮಾಜಿಕ ಜಾಲತಾಣ ಎಂದರೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಇದನ್ನು ಹೊರತು ಪಡಿಸಿ ನಾವು ಒಂದೇ ಒಂದು ದಿನವನ್ನೂ ಕಳೆಯಲು ಸಾಧ್ಯವಿಲ್ಲ. ದಿನನಿತ್ಯ ಇಲ್ಲಿ ಏನಾದರೂ ಸಖತ್ ಮಸಾಲೆ ಸಿಕ್ಕೇ ಸಿಗುತ್ತದೆ. ಇದನ್ನು ನೋಡುತ್ತಾ ನೋಡುತ್ತಾ ಸಮಯ ಕಳೆದಿದ್ದೆ ಗೊತ್ತಾಗುವುದಿಲ್ಲ. ಈಗಿನ ಯುವಕರಂತೂ ಒಂದು ಕ್ಷಣ ಮೊಬೈಲ್ ಬಿಟ್ಟು ಇರುವುದೇ ಇಲ್ಲ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ತಮಾಷೆಯ ವಿಡಿಯೋ ಒಂದನ್ನು ನಿಮಗಾಗಿ ಆಯ್ದು ತಂದಿದ್ದೇವೆ. ಈ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗಲಿಲ್ಲವೆಂದರೆ ಹೇಳಿ. ಅಂತಹ ಹಾಸ್ಯ ಪ್ರಸಂಗದಿಂದ ಕೂಡಿದೆ ಈ ವಿಡಿಯೋ.
ಪ್ರಸ್ತುತ ವಿಡಿಯೋದಲ್ಲಿ ಯುವಕನೊಬ್ಬ ತುಂಬಾ ಜೋಶ್ ನಲ್ಲಿ ಒಂದು ಕೆಲಸ ಮಾಡಿ ಹಾಸ್ಯಕ್ಕೆ ಚೆನ್ನಾಗಿಯೇ ಗುರಿಯಾಗಿದ್ದಾನೆ. ಅದಕ್ಕೆ ಹಿರಿಯರು ಯಾವತ್ತೂ ಹೇಳುತ್ತಾ ಬಂದಿದ್ದಾರೆ ಆವೇಶದಲ್ಲಿದ್ದಾಗ ಹೋಷ್ ಕಳೆದುಕೊಳ್ಳಬೇಡಿ ಎಂದು. ಇಲ್ಲಿಯ ದೃಶ್ಯ ಸೇಮ್ ಟು ಸೇಮ್ ಅದೇ ರೀತಿ ಕಂಡುಬರುತ್ತದೆ.
ಯುವಕ ತುಂಬಾ ಜೋಶ್ ನಲ್ಲಿದ್ದಾನೆ. ಈ ಜೋಶ್ ನಲ್ಲಿ ಆತ ಮಾಡಿದ ಕೆಲಸ ನೋಡಿದರೆ ಬಿದ್ದು ಬಿದ್ದು ನಗುತ್ತಿರಿ. ಯುವಕ ಚಿಕ್ಕ ಬೋಟ್ನಲ್ಲಿ ಯಮುನಾ ನದಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಏತನ್ಮಧ್ಯೆ ಯಮುನಾ ನದಿಯಲ್ಲಿ ಜಿಗಿದು ತನ್ನ ಪಾಪಗಳಿಂದ ಮುಕ್ತನಾಗಿ ಪರಿಶುದ್ಧವಾಗುವ ಸಂಕಲ್ಪ ತೊಟ್ಟು ಓಂ ಶ್ರೀ ಯಮುನಾಯನಮಃ ಎಂದು ಘೇ ಹೊಡೆಯುತ್ತಾ ಉತ್ಸಾಹದಲ್ಲಿ ಜಿಗಿದೇ ಬಿಡುತ್ತಾನೆ. ಆದರೆ ಯಮುನೆಯಲ್ಲಿ ನೀರು ಮಾತ್ರ ಮೊಳಕಾಲಿಗಿಂತಲೂ ಕಡಿಮೆ ಇದ್ದದ್ದು ಜಿಗಿದ ನಂತರ ಗೊತ್ತಾಗುತ್ತದೆ. ಆಗ ಯುವಕ ತುಂಬಾ ಸಮಾಧಾನದಿಂದ ಅಂಬಿಗನಿಗೆ “ಏನಣ್ಣ ಇಲ್ಲಿ ನೀರೇ ಇಲ್ಲ, ನೀನು ನನಗೆ ಪೆದ್ದನನ್ನಾಗಿಸಿ ಬಿಟ್ಟೆ” ಎನ್ನುತ್ತಾನೆ.
ನೋಡಿ ನೀವು ಈ ವಿಡಿಯೋ.
View this post on Instagram
ತಮಾಷೆಯ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಮಿರೋಮಥುರಸ್ಟೋರ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು, ಈ ವಿಡಿಯೋ ಇಲ್ಲಿಯವರೆಗೆ 3.4 ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದ್ದು ಎರಡು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.