ಭಪ್ಪರೆ ಮಗನ! ಒಂದೇ ಕಲ್ಯಾಣ ಮಂಟಪದಲ್ಲಿ ಅವಳಿ IT ಇಂಜಿನಿಯರ್ ಜೊತೆಗೆ ಮದುವೆಯಾದ ಟ್ಯಾಕ್ಸಿ ಡ್ರೈವರ್!
ವಿಶೇಷ ಮದುವೆಗಳ ಚರ್ಚೆ ಊರಲ್ಲಿ ಅಥವಾ ಮಿತ್ರ ವರ್ಗದಲ್ಲಿ ಯಾವತ್ತು ನಡೆಯುತ್ತಿರುತ್ತದೆ. ಮದುವೆಗಳಲ್ಲಿ ನಡೆದ ವಿಶೇಷ ಘಟನೆಗಳು ನೀಡಿದ ಊಟ, ತಿಂಡಿ, ಮೆರವಣಿಗೆ, ತೊಟ್ಟುಕೊಂಡ ಡ್ರೆಸ್, ಅಲ್ಲಿ ನಡೆದ ವಾದ ವಿವಾದಗಳು, ಡಾನ್ಸ್ ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಮದುವೆಯ ಚರ್ಚೆಯೊಂದು ತುಂಬಾ ಜೋರಾಗಿ ನಡೆಯುತ್ತಿದೆ.
ಈ ಮದುವೆ ಕರ್ನಾಟಕದ ನೆರೆಯ ರಾಜ್ಯವಾದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಳಸಿರಸ್ ತಾಲೂಕಿನಲ್ಲಿ ನಡೆದಿದೆ. ಈ ಮದುವೆಯ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಲು ಮುಖ್ಯ ಕಾರಣವೇನೆಂದರೆ, ಮುಂಬಯಿಯ ಉಪನಗರವಾದ ಕಾಂದಿವಲಿಯಲ್ಲಿ ವಾಸಿಸುವ ಹಾಯ್ ಎಜುಕೇಟೆಡ್ ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಇಬ್ಬರೂ ಕೂಡಿ ಒಬ್ಬನೇ ವರನ ಜೊತೆಗೆ ಮದುವೆ ಮಾಡಿಕೊಂಡಿದ್ದಾರೆ.
ಇವರಿಬ್ಬರ ಬಗ್ಗೆ ಹೇಳುವುದಾದರೆ, ಈ ಇಬ್ಬರು ಅವಳಿ ಸಹೋದರಿಯರು ಚಿಕ್ಕಂದಿನಿಂದಲೂ ಒಟ್ಟಿಗೆ ಕೂಡಿಕೊಂಡೇ ಇರುತ್ತಿದ್ದರು. ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟಿರುವುದಿಲ್ಲವಂತೆ. ಈ ಒಂದೇ ಕಾರಣದಿಂದಾಗಿ ಇಬ್ಬರೂ ಅವಳಿ ಸಹೋದರಿಯರು ಒಂದೇ ಹುಡುಗನ ಜೊತೆಗೆ ಮದುವೆಯಾಗಲು ನಿರ್ಧರಿಸಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ.

ಇದರ ಹಿಂದಿನ ಇನ್ನೊಂದು ಮುಖ್ಯ ಕಾರಣ ಏನೆಂದರೆ, ಕೆಲವೇ ದಿನಗಳ ಹಿಂದೆ ಈ ಅವಳಿ ಸಹೋದರಿಯರ ತಂದೆಯ ನಿಧನವಾಯಿತು. ಅದಾದ ಕೆಲವೇ ದಿನಗಳ ನಂತರ ಈ ಇಬ್ಬರೂ ಸಹೋದರಿಯರ ಜೊತೆಗೆ ತಾಯಿಯ ಆರೋಗ್ಯವು ತುಂಬಾ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ಈಗ ಇವರಿಬ್ಬರ ವರನಾದ ಅತುಲ್ ತನ್ನದೇ ಟ್ಯಾಕ್ಸಿ ಮುಖಾಂತರ ಮೂವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ತುಂಬಾ ಪ್ರಾಮಾಣಿಕತೆಯಿಂದ ಕಾಳಜಿ ತೆಗೆದುಕೊಂಡಿದ್ದಾನೆ. ಆತನು ಸಹೃದಯದಿಂದ ತೆಗೆದುಕೊಂಡ ಕಾಳಜಿ ಮತ್ತು ಉಪಚಾರದಿಂದಾಗಿ ಪಿಂಕಿಗೆ ಅತುಲ್ ಇಷ್ಟವಾದನು. ಅದರಲ್ಲೂ ಈ ಇಬ್ಬರೂ ಸಹೋದರಿಯರು ಬೆಳೆದು ಇಷ್ಟು ದೊಡ್ಡವರಾದರು ಒಬ್ಬರನ್ನೊಬ್ಬರು ಬಿಟ್ಟು ಇಲ್ಲಿಯವರೆಗೆ ಇದ್ದೇ ಇಲ್ಲ. ಹೀಗಾಗಿ ತಾಯಿಯ ಮತ್ತು ಕುಟುಂಬದವರ ಸಮ್ಮತಿಯಿಂದ ಈ ಇಬ್ಬರೂ ಅವಳಿ ಸಹೋದರಿಯರು ಅತುಲ್ ಜೊತೆಗೆ ಮದುವೆಯಾಗಲು ನಿಶ್ಚಯಿಸಿದರು.
ವೀಡಿಯೋ ನೋಡಿ
ಪಿಂಕಿ ಮತ್ತು ರಿಂಕಿ ಈ ಇಬ್ಬರೂ ಅವಳಿ ಸಹೋದರಿಯರ ಬಗ್ಗೆ ಹೇಳುವುದಾದರೆ, ಇವರು ಹಾಯ್ ಎಜುಕೇಟೆಡ್ ಆಗಿದ್ದು ಜೊತೆ ಜೊತೆಯಾಗಿ ಶಿಕ್ಷಣವನ್ನು ತೆಗೆದುಕೊಂಡಿದ್ದಾರೆ. ಸದ್ಯ ಇಬ್ಬರೂ ಕೂಡಿ ಒಂದೇ IT ಕಂಪನಿಯಲ್ಲಿ ಜಾಬ್ ಮಾಡುತ್ತಿದ್ದಾರೆ. ಸದಾ ಕಾಲ ಕೂಡಿರುವುದರಿಂದ ತಮ್ಮ ಬಾಳ ಸಂಗಾತಿಯನ್ನು ಸಹ ಒಬ್ಬನನ್ನೇ ಆಯ್ಕೆ ಮಾಡಿ ಆತನ ಜೊತೆಗೆ ಮದುವೆ ಮಾಡಿಕೊಂಡು ಜೀವನ ನಡೆಸುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಈ ಅಪರೂಪದ ಮದುವೆಯ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜೋರಾಗಿ ನಡೆದಿದೆ.