ನಮ್ಮ ಸುರಕ್ಷತೆಗಾಗಿ ಶೋ ಎಂಡ್ ಮಾಡಿದ್ದೀರಿ, ನಿಮಗೆ ಸಾಷ್ಟಾಂಗ ನಮಸ್ಕಾರಗಳು! -ಬಿಗ್ ಬಾಸ್ ಸ್ಪರ್ದಿಗಳು

ಮೇ ಎಂಟರಂದು ಘೋಷಿಸಿದಂತೆ ಬಿಗ್ ಬಾಸ್ ಶೋ ಮುಕ್ತಾಯಗೊಂಡಿದೆ, ಅಂದರೆ ಅರ್ದಕ್ಕೇ ನಿಲ್ಲಿಸಲಾಗಿದೆ. ಇದಕ್ಕೆ ಕಾರಣ ಕೊರೋನ ಎರಡನೇ ಅಲೆ. ಗರಿಷ್ಟ ಪ್ರಮಾಣದ ಮುಂಜಾಗ್ರತೆಯೊಂದಿಗೆ ಶೋ ಆರಂಭಿಸಲಾಗಿತ್ತು. ಶೋ ಆರಂಭಕ್ಕೂ ಮೊದಲೇ ಎಲ್ಲ ಸ್ಪರ್ದಿಗಳನ್ನು ಹೊಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿ ಮೂರು ಮೂರು ಸಲ ಕೊರೋನ ಟೆಸ್ಟ್ ಮಾಡಿಸಿ ಒಳಬಿಡಲಾಗಿತ್ತು. ಅದರಂತೆ ಒಳಗೆ ಅವರೆಲ್ಲ ಸೇಫಾಗೇ ಇದ್ದರು. ಆದರೆ ಹೊರಗಿನ ವಾತಾವರಣ ಹದಗೆಟ್ಟಿತ್ತು.

ರಾಜ್ಯದಲ್ಲಿ ಯಮವೇಗದಲ್ಲಿ ವೈರಸ್ ಹರಡುತ್ತಿದ್ದುದ್ದರಿಂದ ಸರ್ಕಾರ ಅನಿವಾರ್ಯವಾಗಿ ಲಾಕ್ ಡೌನ್ ಘೋಷಿಸಬೇಕಾಯಿತು. ಲಾಕ್ ಡೌನ್ ಅಂದ ಮೇಲೆ ಎಲ್ಲ ಬಂದ್ ಆಗಲೇಬೇಕು, ಅದರಂತೆ ಸಿನೆಮಾ – ದಾರಾವಾಹಿಗಳ ಚಿತ್ರೀಕರಣ ಕೂಡ ನಿಂತವು. ಹೀಗಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಅರ್ದಕ್ಕೇ ನಿಲ್ಲಬೇಕಾಯಿತು.

ಶೋ ಈಗಾಗಲೆ ಎಂಡ್ ಆಗಿದೆಯಾದರೂ ಅವರನ್ನು ಕಳಿಸಿಕೊಡುವ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಚಾನೆಲ್ ನವರ ಪ್ರಕಾರ ಎರಡು ಎಪಿಸೋಡ್ ಸೋಮವಾರ ಅಂದರೆ ಇವತ್ತು ಹಾಗೂ ನಾಳೆ ರಾತ್ರಿ ಪ್ರಸಾರವಾಗಲಿವೆ. ಶೋ ಎಂಡ್ ಮಾಡಿದ ಸುದ್ದಿ ಸಿಕ್ಕ ಮೇಲೆ ಸ್ಪರ್ದಿಗಳಲ್ಲಿ ಹಲವರು ಬಿಗ್ ಬಾಸ್ ಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಶಾಂತ ಸಂಬರಗಿಯವರು “ನಮ್ಮ ಸುರಕ್ಷತೆಗಾಗಿ ಶೋ ಎಂಡ್ ಮಾಡಿದ್ದೀರಿ, ನಿಮಗೆ ಸಾಷ್ಟಾಂಗ ನಮಸ್ಕಾರಗಳು” ಎಂದರು. ಎಲ್ಲ ಸ್ಪರ್ದಿಗಳು ಉದ್ದಕ್ಕೆ ಬಿದ್ದು ಶಿರಸಾಷ್ಟಾಂಗ ನಮಸ್ಕಾರ ಕೂಡ ಮಾಡಿದರು. ವ್ಯವಸ್ಥೆಯಲ್ಲಿ ದೊಡ್ಡ ಪ್ರಾಬ್ಲಂ ಆಗಿದೆ ಅಂತ ನಾ ಹೇಳಿರಲಿಲ್ವಾ ಎಂದು ಚಂದ್ರಚೂಡ್ ಹೇಳಿದರೆ, ಬಿಗ್ ಬಾಸ್ ಮನೆಗೆ ಹೊರಗಿನಿಂದ ತಂದ ಪ್ರಾಪರ್ಟಿ ಮುಟ್ಟಬೇಡಿ ಎಂದು ಯಾಕೆ ಹೇಳಿದ್ದರು ಅಂತ ನೆನಪಿಸಿಕೊಂಡರು.

ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ಶಮಂತ್, ರಘು ಗೌಡ ಮುಂತಾದವರು ಅಕ್ಷರಶಃ ಕಣ್ಣೀರು ಹಾಕಿದರು. ಸದ್ಯಕ್ಕಂತೂ ಬಿಗ್ ಬಾಸ್ ಮುಗಿದಿದ್ದು, 71 ದಿನಗಳ ಕಾರ್ಯಕ್ರಮ ಆಗಿದೆ. ಉಳಿದ ದಿನಗಳನ್ನು ಮತ್ತೆ ನಡೆಸುತ್ತಾರಾ ಅಥವಾ ನೇರವಾಗಿ ಸೀಜನ್ 9 ಸುರು ಮಾಡುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
-Team Infotrend