ಲಾಕ್ ಡೌನ್ ನಿಂದ ಬಿಗ್ ಬಾಸ್ ಬಂದ್ ಆಗುವ ಸುದ್ದಿ ಕೇಳಿ ಗಳ ಗಳ ಅತ್ತ ಸ್ಪರ್ದಿಗಳು!
ಸುಮಾರು ಎರಡೂವರೆ ತಿಂಗಳ ಕಾಲ ಹೊರಪ್ರಪಂಚದ ಅರಿವೇ ಇಲ್ಲದೇ ಬಿಗ್ ಮನೆಯಲ್ಲಿ ಇದ್ದ ಸ್ಪರ್ದಿಗಳಿಗೆ ನಿನ್ನೆ ಶಾಕ್ ಕಾದಿತ್ತು. ರಾಜ್ಯದಲ್ಲಿ ಕೊರೋನ ಹೆಚ್ಚಿರುವ ಹಾಗೂ ಅದಕ್ಕಾಗಿ ಲಾಕ್ ಡೌನ್ ಘೋಷಿಸಿರುವ ಸುದ್ದಿ ಅವರಿಗೆ ಗೊತ್ತೇ ಇರಲಿಲ್ಲ. ಅದನ್ನು ಬಿಗ್ ಬಾಸ್ ಮನೆಯಲ್ಲಿ ಪ್ರಕಟಿಸಿದಾಗ ಎಲ್ಲರೂ ಶಾಕ್ ಆದರು.
ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಹೊಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿ ನಂತರ ಬಿಗ್ ಬಾಸ್ ಮನೆಗೆ ಹೋಗಿದ್ದ ಸ್ಪರ್ದಿಗಳನ್ನು ಸಂಪೂರ್ಣವಾಗಿ ಹೊರಪ್ರಪಂಚದಿಂದ ಕಡಿತಗೊಳಿಸಲಾಗುತ್ತದೆ. ಸಾಮಾಜಿಕ ಜಾಲತಾಣ ಅಥವಾ ಮೊಬೈಲ್ ಬಳಸುವ ಅವಕಾಶ ಇರುವುದಿಲ್ಲ. ಹೀಗಿರುವಾಗ ಅವರಿಗೆ ರಾಜ್ಯದಲ್ಲಿ ನಡೆದಿರುವ ಕೊರೋನ ಅರ್ಭಟ ಗೊತ್ತೇ ಇರಲಿಲ್ಲ.
71 ದಿನದ ಬಳಿಕ ಮನೆಯಲ್ಲಿರುವ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ತೋರಿಸಲಾಗುತ್ತದೆ. ಕೊರೋನ ವೈರಸ್ ಹರಡಿರುವ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಲಾಕ್ ಡೌನ್ ಮಾಡಿರುವ ಸುದ್ದಿ ಪ್ರಸಾರವಾಗುತ್ತದೆ. ಆಗ ಸುದ್ದಿ ಕೇಳಿ ಎಲ್ಲರೂ ಶಾಕ್ ಆದರು. ಪ್ರಶಾಂತ ಸಂಬರಗಿ, ಶುಭಾ ಪೂಂಜಾ ಸೇರಿಂತೆ ಸ್ಪರ್ದಿಗಳು ಬಿಕ್ಕಿ ಬಿಕ್ಕಿ ಅತ್ತರು.
ಕೊರೋನ ಬಿಸಿ ಬಿಗ್ ಬಾಸ್ ಗೆ ಇದೇ ಮೊದಲ ಬಾರಿಗೆ ತಟ್ಟಿದೆ. ಸ್ಪರ್ದಿಗಳೇನೋ ಒಳಗೆ ಸೇಫಾಗಿ ಇದ್ದರು, ಆದರೆ ಕಾರ್ಯಕ್ರಮಕ್ಕೆ ಕೆಲಸ ಮಾಡುವ ನೂರಾಋಉ ಜನರ ಪರಸ್ಥಿತಿ ಹಾಘಿರಲಿಲ್ಲ. ಮೂರೂ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿರುವ ಅವರಲ್ಲಿ ಕೆಲವರಿಗೆ ಸೋಂಕು ತಗುಲಿರುವ ಬಗ್ಗೆ ಸುದ್ದಿಯಿದೆ. ಆದರೆ ಇದನ್ನು ಬಿಗ್ ಬಾಸ್ ಟೀಮ್ ಖಚಿತ ಮಾಡಿಲ್ಲ.
ಮೇ ಎಂಟರಂದೇ ಕಲರ್ಸ್ ಕನ್ನಡ ಬಿಜಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಈ ರಿಯಾಲಿಟಿ ಶೋ ನಿಲ್ಲಿಸುವುದಾಗಿ ಹೇಳಿದ್ದರು. ನೂರಾರು ಜನರ ಶ್ರಮ ಅರ್ದಕ್ಕೇ ನಿಂತಿತು. ತೆರೆಯ ಹಿಂದೆ ಕೆಲಸ ಮಾಡಿದ್ದ ಅನೇಕರ ಕನಸು ಪೂರ್ತಿಯಾಗಲೇ ಇಲ್ಲ. ಬಿಗ್ ಬಾಸ್ ಅರ್ದಕ್ಕೇ ನಿಂತಿತು.
-Team Infotrend