ವಿಡಿಯೊ : ನಾನ್ಯಾವತ್ತೂ 50 ಲಕ್ಷ ನೋಡೇ ಇರಲಿಲ್ಲ, ಬಿಗ್ ಬಾಸ್ ಗೆಲ್ಲುವುದು ನನಗೆ ತುಂಬಾ ಮುಖ್ಯವಾಗಿತ್ತು -ಪಾವಗಡ ಮಂಜು

ಕೊರೋನ ಎರಡನೇ ಅಲೆ ಹೊಡೆತಕ್ಕೆ ಸಿಲುಕಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಿಂತು ಹೋಗಿದ್ದು ನಿಮಗೆ ಗೊತ್ತೇ ಇದೆ. ನೂರೆಂಟು ಕನಸು ಕಟ್ಟಿಕೊಂಡು ಇಲ್ಲಿಗೆ ಹೋಗಿದ್ದ ಹಲವರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ‌. ಮೇಲಿನ ಮಾತಿಗೆ ನಮ್ಮೆಲ್ಲರ ಸುರಕ್ಷತೆ ದೃಷ್ಟಿಯಿಂದ ಕಾರ್ಯಕ್ರಮ ನಿಲ್ಲಿಸಿದ್ದು ಒಳ್ಳೆಯದು ಎಂದು ಎಲ್ಲರೂ ಅಂದರಾದರೂ ಕಾರ್ಯಕ್ರಮ ನಿಂತಿದ್ದು ಅಲ್ಲಿದ್ದ ಎಲ್ಲರಿಗೂ ಬೇಸರ ಉಂಟು ಮಾಡಿತ್ತು. ಅದೂ ಈಗ ಒಬ್ಬೊಬ್ಬರಿಂದ ಹೊರಬರುತ್ತಿದೆ.

ಅಲ್ಲಿ ಇರುವವರಲ್ಲಿ ಸಾಕಷ್ಟು ಪ್ರತಿಭಾವಂತರಾಗಿದ್ದವರು, ಜನರನ್ನು ರಂಜಿಸುತ್ತಿದ್ದವರಲ್ಲಿ ಪಾವಗಡ ಮಂಜು ಪ್ರಮುಖರು. ಟಾಪ್ ಫೈವ್ ಮಾತ್ರವಲ್ಲ, ಬಿಗ್ ಬಾಸ್ ಗೆಲ್ಲುವ ಸಾಮರ್ಥ್ಯ ಕೂಡ ಅವರಿಗಿತ್ತು. ಆದರೆ ಕಾರ್ಯಕ್ರಮ ನಿಂತಿದ್ದು ಅವರಿಗೆ ನಿಜಕ್ಕೂ ದೊಡ್ಡ ನಿರಾಸೆ ತಂದಿದೆ. ಉಳಿದವರಿಗಿಂತ ಸ್ಚಲ್ಪ ಹೆಚ್ಚೇ ಕನಸು ಕಟ್ಟಿಕೊಂಡು ಬಿಗ್ ಬಾಸ್ ಗೆ ಎಂಟ್ರಿಯಾಗಿದ್ದ ಮಂಜು ಶೋ ದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

ಇದರಿಂದ ತಮ್ಮ ಬದುಕೇ ಬದಲಾಗುತ್ತದೆ ಎಂದುಕೊಂಡಿದ್ದರು. ತಾನೇನು, ತನ್ನ ಪ್ರತಿಭೆ ಎಂಥದು ಎಂದು ಜನರಿಗೆ ತೋರಿಸಿ ಆ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುವ ಆಸೆ ಮಂಜು ಅವರಿಗಿತ್ತು. ಆದರೆ ಕೊರೋನ ಅದೆಲ್ಲವನ್ನು ನುಂಗಿ ಹಾಕಿತು. ಅಲ್ಲಿ ಸಿಗುತ್ತಿದ್ದ ಕ್ಯಾಶ್ ಫ್ರೈಜ್ ಅವರಿಗೆ ತುಂಬಾ ಅವಶ್ಯಕತೆ ಇತ್ತಂತೆ.

ನಾನ್ಯಾವತ್ತು ಐವತ್ತು ಲಕ್ಷ ರೂ.ಗಳನ್ನು ನೋಡಿಯೇ ಇರಲಿಲ್ಲ. ನಿಜಕ್ಕೂ ಆ ಹಣ ನನಗೆ, ನನ್ನ ಸಂಸಾರಕ್ಕೆ, ಭವಿಷ್ಯಕ್ಕೆ ಅತ್ಯಂತ ಅವಶ್ಯವಿತ್ತು ಎನ್ನುತ್ತಾರೆ ಮಂಜು. ಕಡುಬಡತನದಿಂದ ಬಂದಿದ್ದ ಅಪ್ಪಟ ಪ್ರತಿಭೆ ಮಂಜುಗೆ ನಿಜಕ್ಕೂ ದುಡ್ಡು ಅವಶ್ಯವಿತ್ತು. ಅದರಂತೆಯೇ ಬಿಗ್ ಬಾಸ್ ಗೆದ್ದು ಆ ಮೂಲಕ ಹೆಸರು ಮಾಡಿ ಅವಕಾಶ ಪಡೆದುಕೊಳ್ಳುವುದು ಅವರ ಮುಖ್ಯ ಆಸೆಯಾಗಿತ್ತು.

ಆದರೆ ತೆರೆಯ ಹಿಂದೆ ಕೆಲಸ ಮಾಡುವ ನೂರಕ್ಕೂ ಹೆಚ್ಚು ಜನರ ಸುರಕ್ಷತೆ ದೃಷ್ಟಿಯಿಂದ ಬಿಗ್ ಬಾಸ್ ನಿಂತಿತು, ಮಂಜು ಆಸೆ ಹಾಗೇ ಉಳಿಯಿತು. ಮುಂದೆ ಇದೆ ಕಾರ್ಯಕ್ರಮ ಇಲ್ಲಿಂದಲೇ ಮುಂದುವರೆಯುವ ನಿರೀಕ್ಷೆ ಇದೆ. ಹಾಗಾಗಲಿ – ಮಂಜು ಆಸೆ ಈಡೇರಲಿ.
-Team Infotrend