ಸಾವಿಗೆ ಮುತ್ತಿಟ್ಟು ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಪಾರಾದ ಯುವಕ…! ಮೈ ಜುಮ್ ಎನ್ನುವ ವಿಡಿಯೋ ವೈರಲ್.
ಮಳೆಯ ಕಾರಣದಿಂದಾಗಿ ಬೈಕ್ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಮಳೆಯಲ್ಲಿ ಸ್ವಲ್ಪವೇ ಬ್ಯಾಲೆನ್ಸ್ ಏರುಪೇರಾದರೂ ಕಥೆ ಮುಗಿದಂತೆಯೇ ಸರಿ. ಬೈಕ್ ಸವಾರ ನೆಲಕ್ಕೆ ಉರುಳುವದು ಗ್ಯಾರಂಟಿ. ಇದೇ ರೀತಿ ಮಳೆಯಲ್ಲಿ ಬೈಕ್ ಸವಾರ ಚಲಿಸುವಾಗಲೇ ಹಠಾತ್ ಬ್ಯಾಲೆನ್ಸ್ ಕಳೆದುಕೊಂಡು ನೆಲಕ್ಕೆ ಉರುಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನದು ನೋಡಿ.
ಪ್ರಸ್ತುತ ವಿಡಿಯೋ ಒಂದು ಕಾರಿನ ಕ್ಯಾಮೆರಾದಲ್ಲಿ ಶೂಟ್ ಆಗಿದೆ. ಅಲ್ಲಿ ಕಾಣುವ ದೃಶ್ಯದ ಪ್ರಕಾರ, ರೋಡ್ ಒಂದು ಮುಖ್ಯ ಹೈವೇ ರಸ್ತೆ ಇರುವ ಹಾಗೆ ಕಂಡು ಬರುತ್ತಿದೆ. ಅಲ್ಲಿ ಬೈಕ್ ಸವಾರನೊಬ್ಬ ವೇಗದಲ್ಲಿ ಬಂದದ್ದೇ ತಡ ಬೈಕ್ ಸ್ಲಿಪ್ ಆಗಿ ನೆಲಕ್ಕೆ ಉರುಳುತ್ತಾನೆ. ಯುವಕ ಬಿದ್ದ ನಂತರ ಸಹಜವಾಗಿ ಹಿಂದೆ ನೋಡಲು ಹಿಂದಿನಿಂದ ಟ್ರಕ್ ಒಂದು ಯಮನ ರೂಪದಲ್ಲಿ ಕೊಚ್ಚಿ ಹಾಕಲು ಬರುಟ್ಟಿರುವದನ್ನು ಕಂಡಿದ್ದಾನೆ. ಅದನ್ನು ನೋಡಿದ ಯುವಕ ಒಂದೇ ಒಂದು ಕ್ಷಣವೂ ವೆಸ್ಟ್ ಮಾಡದೇ ತಕ್ಷಣ ಮಿಂಚಿನ ವೇಗದಲ್ಲಿ ಅಲ್ಲಿಂದ ಪುಟಿದು ಎಡಕ್ಕೆ ಸರಿದಿದ್ದಾನೆ. ಮತ್ತು ಟ್ರಕ್ ನ ಕೆಳಗಡೆ ಕೊಚ್ಚಿ ಹೋಗುವುದರಿಂದ ಅದೃಷ್ಟವಶಾತ್ ಬದುಕಿ ಉಳಿದಿದ್ದಾನೆ. ಈ ಎಲ್ಲ ಘಟನೆಯಲ್ಲಿ ಯುವಕ ಮಾತ್ರ ಸಾವಿನ ಸಮೀಪ ಹೋಗಿ ಅದನ್ನು ಮುತ್ತಿಕ್ಕಿ ಬಂದಿದ್ದಾನೆ ಎಂದರೆ ತಪ್ಪಾಗಲಾರದು ಅಲ್ವಾ?
ನೋಡಿ ಈ ಮೈ ಜುಮ್ ಎನ್ನಿಸುವ ವಿಡಿಯೋ…
मौत को मात देने वाला शख़्स….
— LP Pant (@pantlp) July 16, 2022
ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ @pantlp ಹೆಸರಿನ ಅಕೌಂಟ್ ನಿಂದ ನಿನ್ನೆಯೇ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋ ಸುಮಾರು 9 ಲಕ್ಷಗಳ ವರೆಗೆ ವೀಕ್ಷಣೆಯನ್ನು ಪಡೆದಿದೆ.