ಹುಡುಗಿಯ ಜೊತೆ ಅತೀ ಉತ್ಸಾಹದಲ್ಲಿ ಡ್ಯಾನ್ಸ್ ಮಾಡುತ್ತಿದ್ದ! ಆದರೆ ದುರದೃಷ್ಟ ಹೇಗೆ ಕೈಕೊಟ್ಟಿತು? ನೋಡಿ ಈ ವೈರಲ್ ವಿಡಿಯೋದಲ್ಲಿ….

ಕೊರೋನಾ ಪೇಷಂಟ್ ಗಳು ಕಡಿಮೆಯಾಗುತ್ತಿದ್ದಂತೆ ಮತ್ತು ಸರಕಾರ ಲಾಕ್ಡೌನ್ ಶಿಥಿಲ ಮಾಡುತ್ತಿದ್ದಂತೆ ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಸುಮಾರು ಒಂದೂವರೆಯಿಂದ ಎರಡು ವರ್ಷಗಳನ್ನು ಮನೆಯಲ್ಲಿ ಕಳೆದ ನಂತರ ಸಮಾರಂಭಗಳಿಗೆ ಜನರು ಹೆಚ್ಚು ಹೆಚ್ಚು ಉತ್ಸಾಹದಿಂದ ಉಪಸ್ಥಿತರಿರುತ್ತಿದ್ದಾರೆ. ಇತ್ತೀಚೆಗೆ ಮದುವೆಯಲ್ಲಿ ಎಲ್ಲರೂ ಡ್ಯಾನ್ಸ್ ಮಾಡುವುದು ಪ್ರೆಸ್ಟೀಜ್ ಅಥವಾ ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಕೆಲವರು ಬ್ಯಾಂಡ್ ಬಾಜಾ, ಇನ್ನು ಕೆಲವರು ಡಿಜೆ ಮುಂದೆ ಹಾಗೂ ಇನ್ನೂ ಕೆಲವರು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಾರೆ.

ಸ್ಟೇಜ್ ಮೇಲೆ ಇದೇ ರೀತಿ ಡಾನ್ಸ್ ಮಾಡುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಈ ಮದುವೆ ಸಮಾರಂಭದಲ್ಲಿ ನಡೆದ ಡ್ಯಾನ್ಸ್ ನೋಡಿದವರಿಗೆ ನಗದೇ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ಹುಡುಗ ಹುಡುಗಿಯ ಜೊತೆಗೆ ಡ್ಯಾನ್ಸ್ ಮಾಡುವಾಗ ಆಕೆಯನ್ನೇ ಮೈಮೇಲೆ ಹಾಕಿಕೊಂಡು ಕೆಳಗೆ ಬಿದ್ದಿದ್ದಾನೆ.

ಪ್ರಸ್ತುತ ವಿಡಿಯೋವನ್ನು ಒಬ್ಬ ಯೂಸರ್ ತನ್ನ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಶೇರ್ ಮಾಡಿದ್ದಾನೆ. 28 ಸೆಕೆಂಡುಗಳಲ್ಲಿ ವಿಡಿಯೋದಲ್ಲಿ ಮದುವೆ ಸಮಾರಂಭ ನಡೆದದ್ದು ಕಂಡುಬರುತ್ತದೆ. ಕೆಲವೊಂದು ಕಪಲ್ಸ್ ಗಳು ಡಿಜೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹುಡುಗನೊಬ್ಬ ತನ್ನ ಜೊತೆಗಾರಳನ್ನು ಎತ್ತಿ ಬಹುಶಃ ಬೇರೆ ಸ್ಟೆಪ್ಸ್ ಹಾಕಲು ಯೋಚಿಸಿ ಆಕೆಯನ್ನು ಎತ್ತಲು ಪ್ರಯತ್ನಿಸುತ್ತಾನೆ. ಆದರೆ ಭಾರವಾದ ಹುಡುಗಿಯನ್ನು ಎತ್ತಲು ಹೋದಾಗ ಆತನ ಬ್ಯಾಲೆನ್ಸ್ ತಪ್ಪಿ ಹೋಗಿ ಆಕೆಯನ್ನೇ ತನ್ನ ಮೈಮೇಲೆ ಹಾಕಿಕೊಂಡು ಬೀಳುತ್ತಾನೆ.

ವಿಡಿಯೋ ನೋಡಿ

 
 
 
 
 
View this post on Instagram
 
 
 
 
 
 
 
 
 
 
 

A post shared by GiDDa CoMpAnY (@giedde)

ಕೆಳಗೆ ಬಿದ್ದ ನಂತರ ಹುಡುಗಿಯು ಹೇಗೋ ತನ್ನನ್ನು ತಾನು ಬ್ಯಾಲನ್ಸ್ ಮಾಡಿಕೊಳ್ಳುತ್ತಾಳೆ. ಡ್ಯಾನ್ಸ್ ಮಾಡಲು ಹೋಗಿ ಇಬ್ಬರು ಒಮ್ಮೆಲೆ ಬಿದ್ದದ್ದನ್ನು ನೋಡಿ ಸುತ್ತಿನವರಿಗೆ ನಗು ತಡೆಯುವದಾಗುವುದಿಲ್ಲ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ.