ಸಂಚಾರಿ ವಿಜಯ್ ಸಾವಿಗೆ ಕಾರಣವಾದ ಬ್ರೇನ್ ಸ್ಟೆಮ್ ಫೆಲ್ಯೂರ್ ಅಂದ್ರೇನು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಮ್ಮನ್ನಗಲಿದ್ದಾರೆ. ಮೊನ್ನೆ ರಸ್ತೆ ಅ’ಪ’ಘಾ’ತ’ದಲ್ಲಿ ಗಂಭೀರ ಗಾಯಗೊಂಡಿದ್ದ ಅವರು ಇವತ್ತು ಕೆಲಗಂಟೆಗಳ ಮೊದಲು ಈ ಲೋಕದ ಸಂಚಾರವನ್ನು ನಿಲ್ಲಿಸಿದರು. ತಲೆಗೆ ತೀವ್ರ ಗಾಯಗೊಂಡಿದ್ದ ಸಂಚಾರಿ ವಿಜಯ್ ಸ್ಥಿತಿಯನ್ನು ಬ್ರೇನ್ ಸ್ಟೆಮ್ ಫೆಲ್ಯೂರ್ ಅನ್ನುತ್ತಾರೆ. ಹಾಗಂದರೇನು ಅಂತ ಸಂಕ್ಷಿಪ್ತವಾಗಿ ವಿವರಿಸುವುದು ಈ ಬರಹದ ಉದ್ದೇಶ. ಇಲ್ಲಿ ಕೊನೆಗೊಂದು ವಿಡಿಯೊ ಇದೆಯಾದರೂ, ಅದನ್ನು ನೋಡುವ ಮೊದಲು ಇಲ್ಲಿನ ಮಾಹಿತಿ ಓದಿ…
ಮೊನ್ನೆ ರಾತ್ರಿ ಮಳೆ ಬರುತ್ತಿರುವಾಗ ಬೈಕ್ ನಲ್ಲಿ ವೇಗವಾಗಿ ಹೋಗುತ್ತಿದ್ದ ವಿಜಯ್ ಸ್ನೇಹಿತ ನವೀನ್ ರವರ ಬೈಕ್ ಸ್ಕಿಡ್ ಆಗಿತ್ತು. ಆಗ ರಸ್ತೆಗೆ ಬಂದು ಬಿದ್ದ ಇಬ್ಬರಿಗೂ ತೀವ್ರ ಸ್ವರೂಪದ ಗಾ’ಯಗಳಾದವು. ಇಬ್ಬರೂ ಹೆಲ್ಮೆಟ್ ಹಾಕಿರಲಿಲ್ಲವಾದ್ದರಿಂದ ತಲೆಯ ಬಲ ಹಾಗೂ ಎಡ ಭಾಗಕ್ಕೂ ಏ’ಟು ಬಿದ್ದು ಅವರು ಕೋಮಾಕ್ಕೆ ಜಾರಿದ್ದರು.
ಸ್ಥಳಿಯರು ಹತ್ತಿರದ ಅಪೊಲೋ ಆಸ್ಪತ್ರೆಗೆ ದಾಖಲಿಸಿದರು. ಮೊದಲು ಬೆಡ್ ಇಲ್ಲ ಎಂದಿದ್ದ ಅವರು ಸುದಿಪ್ ವಿನಂತಿಯ ನಂತರ ದಾಖಲಿಸಿಕೊಂಡು ಚಿಕಿತ್ಸೆ ಸುರು ಮಾಡಿದ್ದರು. ನಡುರಾತ್ರಿ ಹಾಗೂ ನಸುಕಿನ ಜಾವವೇ ಅವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮೆದುಳಿನಲ್ಲಿ ರ’ಕ್ತ’ಸ್ರಾ’ವವಾಗುತ್ತಿದ್ದು ಅದಕ್ಕಾಗಿ ಎಲ್ಲ ಚಿಕಿತ್ಸೆಯನ್ನು ವೈದ್ಯರು ನೀಡುತ್ತಿದ್ದರು.

ಇವತ್ತು ಬೆಳಿಗ್ಗೆ ಬ್ರೇನ್ ಸ್ಟೆಮ್ ಫೆಲ್ಯೂರ್ ಬಗ್ಗೆ ಗೊತ್ತಾಯಿತು. ವಿಜಯ್ ಸಹೋದರ ಈ ಬಗ್ಗೆ ತಿಳಿಸಿ ಅವರ ಅಂಗಾಂಗ ದಾನ ಮಾಡುವುದಾಗಿ ಹೇಳಿದರು. ನಂತರ ಕೆಲವೇ ನಿಮಿಷಗಳಲ್ಲಿ ಸುದೀಪ್ ಸಂಚಾರಿ ವಿಜಯ್ ರವರ ಸಾವಿನ ಸುದ್ದಿ ಪ್ರಕಟಿಸಿದರು. ಅವರ ಮೆದುಳು ಬಿಟ್ಟು ಉಳಿದೆಲ್ಲ ಅಂಗ ಸಕ್ರೀಯವಾಗಿದ್ದವು. ಆದರೆ ಮುಖ್ಯವಾಗಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು.
ನಿಮಗೆ ಗೊತ್ತಿರಲಿ ಮೆದುಳು ಹಾಗೂ ಬೆನ್ನು ಹುರಿ ನಮ್ಮ ದೇಹದ ನರ್ವಸ್ ಸಿಸ್ಟಂ ಮತ್ತು ಇಡೀ ದೆಹವನ್ನು ನಿಯಂತ್ರಿಸುತ್ತವೆ. ಹೀಗಿರುವ ಮೆದುಳು ಪ್ರತಿಯೊಂದು ಕೆಲಸಕ್ಕೂ ಸಿಗ್ನಲ್ ಕೊಟ್ಟು ಮಾಡಿಸುತ್ತದೆ. ಆ ಸಿಗ್ನಲ್ ಮೆದುಳಿನಿಂದ ಹೊರಟು ಬ್ರೆನ್ ಸ್ಟೆನ್ ಮುಲಕ ಹಾಯ್ದು ಬೆನ್ನು ಹುರಿಯಿಂದ ಇತರೆಡೆ ಹೋಗುತ್ತದೆ.
ಇಲ್ಲಿ ಸಂಚಾರಿ ವಿಜಯ್ ಗೆ ಬ್ರೆನ್ ಸ್ಟೆಮ್ ಫೆಲ್ ಆಗಿದೆ. ಅದರ ಅರ್ಥ ಮೆದುಳು ಹಾಗೂ ಬೆನ್ನು ಹುರಿ ನಡುವೆ ಇರುವ ಭಾಗ ಬಹುತೇಕ ಸತ್ತಿದೆ ಅಂತ. ದೇಹದ ಎಲ್ಲ ಅಂಗಗಳಿಗೂ ಈ ಮೆದುಳು ಈ ಬ್ರೆನ್ ಸ್ಟೆಮ್ ಹಾಗೂ ಬೆನ್ನು ಹುರಿ ಮೂಲಕ ಮಾಹಿತಿ ರವಾನಿಸುತ್ತದೆ. ಈಗ ಬ್ರೆನ್ ಸ್ಟೆಮ್ ಫೇಲ್ ಆಗುವ ಮೂಲಕ ಡಿಸ್ ಕನೆಕ್ಟ್ ಆಗಿ ಮೆದುಳು ದೇಹದ ಯಾವುದೇ ಭಾಗಕ್ಕೆ ಏನೂ ತಿಳಿಸದ ಹಾಗಾಗುತ್ತದೆ.

ಬ್ರೆನ್ ಸ್ಟೆಮ್ ಒಂಥರಾ ಮೆದುಳು ಮತ್ತು ಬೆನ್ನು ಹುರಿಯನ್ನು ಜಾಯಿಂಟ್ ಮಾಡುವ ಜಂಕ್ಷನ್ ಪಾಯಿಂಟ್ ಇದ್ದ ಹಾಗೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ. ಮೆದುಳನ್ನು ಒಂದು ಕ್ಯಾಬೇಜ್ ಅಥವಾ ಹೂಕೋಸ್ ಎಂದು ತಿಳಿಯುವುದಾದರೆ, ಅದನ್ನು ಕೆಳಗಿನ ಸಸ್ಯದ ಜೊತೆ ಜಾಯಿಂಟ್ ಮಾಡಿದ ಭಾಗ ಅಥವಾ ತೊಟ್ಟನ್ನೇ ನಾವು ಬ್ರೇನ್ ಸ್ಟೆಮ್ ಅನ್ನಬಹುದು.
ಈ ಬ್ರೇನ್ ಸ್ಟೆಮ್ ನಲ್ಲಿ ನಮ್ಮ ಉಸಿರಾಟದ ನಿಯಂತ್ರಣ ಕೂಡ ಇರುತ್ತದೆ, ಅ’ಪ’ಘಾ’ತ’ದಲ್ಲಿ ಇಲ್ಲಿ ಪೆಟ್ಟು ಬಿದ್ದಾಗ ಅಲ್ಲಿನ ನರಗಳು ಹಿಸುಕಿದಂತಾಗಿ ದೇಹದ ಅಂಗಗಳಿಗೆ ಸಿಗ್ನಲ್ ಕಳಿಸಲು ವಿಫಲವಾಗುತ್ತದೆ. ಹೀಗಾಗಿ ಒಂದೊಂದೇ ಅಂಗ ಕೆಲಸ ನಿಲ್ಲಿಸುತ್ತಾ ಬರುತ್ತವೆ. ಬ್ರೇನ್ ಸ್ಟೆಮ್ ಡೆ’ಡ್ ಅಂದರೆ ಹೆಚ್ಚು ಕಮ್ಮಿ ಬ್ರೇನ್ ಡೆ’ಡ್ ಅಂದ ಹಾಗೆಯೇ ಅರ್ಥ.
ಕೆಲವು ಸಲ ಈ ಬ್ರೇನ್ ಡೆ’ಡ್ ಆದರೂ ಕೂಡ ಹೃದಯ ಬಡಿದುಕೊಳ್ಳುತ್ತಿರುತ್ತದೆ, ಇದಕ್ಕೆ ಕಾರಣ ಹೃದಯಕ್ಕಿರುವ ಹಕವು ವಿಶೇಷ ಶಕ್ತಿ. ಆದರೂ ಅದೂ ಕೂಡ ತುಂಬಾ ಸಮಯ ಸಿಗ್ನಲ್ ಸಿಗದೇ ಇದ್ದಾಗ ಏರಿಳಿತವಾಗತೊಡಗುತ್ತದೆ, ಬಿ.ಪಿ ಹೆಚ್ಚು ಕಮ್ಮಿಯಾಗತೊಡಗುತ್ತದೆ. ಇನ್ನು ಇದಕ್ಮೆ ಚಿಕಿತ್ಸೆ ಇಲ್ಲವಾ ಎಂದು ಕೇಳಿದರೆ, ಬಹುತೇಕ ಇಲ್ಲ ಅಂತಲೇ ಹೇಳಬೇಕಾಗುತ್ತದೆ.
ಬ್ರೇನ್ ಸ್ಟೆಮ್ ಫೆಲ್ಯೂರ್ ಆದ ವ್ಯಕ್ತಿ ಮತ್ತೆ ಮೊದಲಿನಂತೆ ಆಗುವುದು ಸಾಧ್ಯವಿಲ್ಲ ಎಂದೇ ಹೇಳಬಹುದು. ವೆಂಟಿಲೇಟರ್ ಮೇಲೆ ಕೆಲಸಮಯ ಜೀವಂತವಾಗಿಡಬಹುದಷ್ಟೆ. ಆದರೆ ಚೇತರಿಸಿಕೊಳ್ಳುವ ಅಥವಾ ಬದುಕಿ ಬರುವ ಅವಕಾಶ ತೀರ ಕಡಿಮೆ. ಹರೆಯದ ವ್ಯಕ್ತಿಗಳು ಕೆಲಸಮಯ ಉಸಿರಾಡುತ್ತಾ ಆಸೆ ಹುಟ್ಟಿಸುತ್ತಾರಾದರೂ ಚೇತರಿಕೆ ಕಾಣುವುದು ಕಷ್ಟಸಾಧ್ಯ.
ಮಾಹಿತಿ ನಿಮಗೆ ಅರ್ಥವಾಯಿತು ಅಂದುಕೊಂಡಿದ್ದೇವೆ. ಇಲ್ಲಿರುವ ಕನ್ನಡ ಮಾಹಿತಿಯೇ ಸಾಕು ಅನಿಸುತ್ತದೆ, ಇನ್ನೂ ಹೆಚ್ಚಿನ ವಿವರ ಬೇಕಾದರೆ ಇಂಗ್ಲೀಷ್ ವಿಡಿಯೊವೊಂದು ಮೇಲಿದೆ ಅದನ್ನು ನೋಡಿ. ನಮ್ಮನ್ನಗಲಿದ ಸಂಚಾರಿ ವಿಜಯ್ ರವರ ಆತ್ಮಕ್ಕೆ ಶಾಂತಿ ಸಿಗಲಿ.
-Team Infotrend