ಹಠ ಹಿಡಿದು ಹೆಂಡತಿಯಿಂದ ತಾಳಿ ಕಟ್ಟಿಸಿಕೊಂಡ ಗಂಡ: ಟ್ರೋಲ್ ಮಾಡಿದ ನೇಟಿಜನ್ಸ್ ಕಮೆಂಟ್ಸ್ ನೋಡಿದರೆ ನಕ್ಕು ಸುಸ್ತಾಗುವಿರಿ
ಈತನ ಹೆಸರು ಶಾರ್ದೂಲ್ ಕದಮ್ ಅಂತ, ಮಹಾರಾಷ್ಟದವರು. ಕಾಲೇಜಿನ ಜೊತೆಗೆ ಓದುತ್ತಿದ್ದ ತನುಜಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆದರೆ ಇಲ್ಲೊಂಚೂರು ಕಥೆಯಲ್ಲಿ ಟ್ವಿಸ್ಟ್ ಇದೆ. ಮದುವೆ ಫಿಕ್ಸ್ ಆದ ಮೇಲೆ ಗಂಡು ತನುಜಾಳ ಜೊತೆ ವಾದಕ್ಕಿಳಿದು, ಮದುವೆಯಲ್ಲಿ ನಾನು ನಿನಗೆ ತಾಳಿ ಕಟ್ಟುವುದಾದರೆ ನೀನೂ ನನಗೆ ತಾಳಿ ಕಟ್ಟಬೇಕು ಎಂಬುದು ಆತನ ಹಟ!
ತಾನು ಅಪ್ಪಟ ಸ್ತ್ರಿ ಸಮಾನತಾವಾದಿ ಎಂದು ಹೇಳಿಕೊಳ್ಳುವ ಶಾರ್ದೂಲ್, ಮಹಿಳೆಯಿಂದ ತಾಳಿ ಕಟ್ಟಿಸಿಕೊಳ್ಳುವುದನ್ನೇ ಸಮಾನತೆ ಅಂದುಕೊಂಡಿರುವುದು ವಿಚಿತ್ರ. ಇದಕ್ಕಾಗೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವುದು. ತಾಳಿ ಕಟ್ಟುವುದೇನು ಗಂಡಸರ ದಬ್ಬಾಳಿಕೆ ಅಥವಾ ಹೆಣ್ಣುಮಕ್ಕಳ ಸ್ವಾತಂತ್ರ್ಯ ಹತ್ತಿಕ್ಕುವ ಸಂಕೇತವಲ್ಲ, ಅದು ಕೇವಲ ನಮ್ಮ ಸಂಪ್ರದಾಯ.
ಈ ಬಗ್ಗೆ ತುಂಬಾ ಜನ ಕಾಮೆಂಟ್ ಮಾಡಿದ್ದು ಅವುಗಳ ಸ್ಯಾಂಪಲ್ ಹೀಗಿವೆ :
*ಆಕೆಗೆ ಮಾಡಿದ್ದನ್ನೇ ನನಗೂ ಮಾಡಬೇಕು ಅಂತ ನೀನು ವಾದಿಸುವುದಾದರೆ ಆಕೆಯಂತೆ ನೀನೂ ಸೀರೆ ಉಡಬೇಕಿತ್ತು ಎಂದು ತುಂಬಾ ಜನ ಕಾಮೆಂಟ್ ಮಾಡಿದ್ದಾರೆ.
*ಇನ್ನು ಕೆಲವರು ಆಕೆಯಂತೆ ನೀನೂ ಮಗುವಿಗೆ ಜನ್ಮ ಕೊಡ್ತಿಯಾ? ಎಂದು ಕೇಳಿದ್ದಾರೆ!
*ಎಲ್ಲಿ ಓದಿದ್ದಿಯಾ ಕಣಪ್ಪಾ ನೀನು? ನಿನ್ ತಲೆನ ಮ್ಯೂಸಿಯಂ ನಲ್ಲಿ ಇಡಬೇಕು.
*ಕರ್ಮಕಾಂಡ, ನೀನು ತಾಳಿ ಕಟ್ಟಿಸಿಕೊಂಡರೆ ಆಕೆಗೆ ಹೇಗೆ ಸಮಾಣತೆ ಕೊಟ್ಟ ಹಾಗಾಗುತ್ತೆ? ಅದ್ಭುತ ತಲೆ ನಿನ್ನದು
*ಸ್ವಾತಂತ್ರ್ಯ – ಸಮಾನತೆ ಅನ್ನೊದು ತಾಳಿ ಕಟ್ಟಿಕೊಳ್ಳುವುದರಿಂದ ಕೊಟ್ಟ ಹಾಗಾಗುವುದಿಲ್ಲ, ಅವರನ್ನು ನೀನು ನಡೆಸಿಕೊಳ್ಳುವುದರ ಮೇಲೆ ಡಿಪೆಂಡಾಗಿದೆ ಅಂತ ಕೂ ಕೆಲವರು ಬುದ್ದಿ ಹೇಳಿದ್ದಾರೆ
ತುಂಬಾ ಕೆಟ್ಟದಾಗಿ ಕೂಡ ಕೆಲವರು ಕಾಮೆಂಟ್ ಮಾಡಿದ್ದಾರೆ, ಅವನ್ನೆಲ್ಲ ಇಲ್ಲಿ ಬರೆಯುವ ಹಾಗಿಲ್ಲ. ಮನೆಯವರು ಎಷ್ಟೇ ಹೇಳಿದರೂ ಆತ ತನ್ನ ವಾದ ಬಿಡಲಿಲ್ಲ, ಕೊನೆಗೂ ಆಕೆಯ ಕಡೆಯಿಂದ ತಾಳಿ ಕಟ್ಟಿಸಿಕೊಂಡಿದ್ದಾನೆ.
ಕಾಲೆಜು ಬಿಟ್ಟು ನಾಲ್ಕು ವರ್ಷವಾದ ಮೇಲೆ ಆಕೆಯನ್ನು ಪ್ರೀತಿಸತೊಡಗಿದ ಶಾರ್ದೂಲ್, ಕಳೆದ ವರ್ಷವೇ ವಿವಾಹವಾಗಬೇಕಿತ್ತು, ಮುಂದಕ್ಕೆ ಹೋಗಿ ನಂತರ ಆಯಿತು. ಮದುವೆ ಆದಾಗಿನಿಂದ ಇಬ್ಬರೂ ತಮ್ಮ ತಮ್ಮ ತಾಳಿಗೆ ಪವಿತ್ರ ಸ್ಥಾನ ಕೊಟ್ಟಿದ್ದಾರಂತೆ. ಜನರ ಮಾತಿಗೆ ಅವರ ಟೀಕೆಗಳಿಗೆ ಕ್ಯಾರೆ ಅಂದಿಲ್ಲವಂತೆ.
ಈಗಲೂ ಯಾರದೇ ಮಾತಿಗೆ ತಲೆ ಕೆಡಿಸಿಕೊಳ್ಳದೇ ಹೆಣ್ಣು ಮಕ್ಕಳನೋವು ನನಗೆ ಗೊತ್ತು, ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾನೆ. ಹೆಣ್ಣು ಮಕ್ಕಳಿಗೆ ತಾಳಿ ಕಟ್ಟಿದರೆ ಹೇಗೆ ನೋವಾಗುತ್ತದೋ ಭಗವಂತನೇ ಬಲ್ಲ, ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆದ ಅವರ ಮದುವೆಯ ವಿಷಯ, ಅಷ್ಟೇ ಟ್ರೋಲ್ ಕೂಡ ಆಯಿತು.
-Team Infotrend