ಸಿನಿಮಾದಲ್ಲಿ ನಟಿ ಕಷ್ಟದಲ್ಲಿರುವುದು ನೋಡಿ ಬುಲ್ ಡಾಗ್ ನೀಡಿತು ಅದ್ಭುತವಾದ ಪ್ರತಿಕ್ರಿಯೆ: ವೈರಲ್ ವೀಡಿಯೋ ನೋಡಿ ಹೀಗೂ ಉಂಟೆ?? ಎಂದ ನೆಟ್ಟಿಗರು

ಒಂದು ಅದ್ಭುತವಾದ ಆ್ಯಕ್ಷನ್ ಸಿನಿಮಾ ಅಥವಾ ಹಾರರ್ ಸಿನಿಮಾ ನೋಡುವಾಗ ಜನ ವೈವಿಧ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ವಿಶೇಷವಾಗಿ ಕೆಲವರು ಸಿನಿಮಾ ನೋಡುತ್ತಾ ಅವುಗಳಲ್ಲೇ ಕಳೆದು ಹೋಗಿರುತ್ತಾರೆ. ಅಂತಹವರು ಕೆಲವು ದೃಶ್ಯಗಳಲ್ಲಿ ನೀಡುವ ಪ್ರತಿಕ್ರಿಯೆಗಳು ಅಕ್ಕ ಪಕ್ಕದವರಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. ಹಾರರ್ ಸಿನಿಮಾ ನೋಡುವಾಗಲಂತಲೂ ಕೆಲವರು ಅರಚಿ ಕೊಂಡಾಗ ಅವರ ರಿಯಾಕ್ಷನ್ ಬೆರಗುಗೊಳಿಸುತ್ತದೆ. ಆದರೆ ಹೀಗೆ ಸಿನಿಮಾಗಳನ್ನು ನೋಡುತ್ತಾ ಮನುಷ್ಯರು ಮಾತ್ರವೇ ಇಂತಹ ಪ್ರತಿಕ್ರಿಯೆಗಳನ್ನು ನೀಡುತ್ತಾರೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಬಹಳಷ್ಟು ವೈರಲ್ ಆಗಿದೆ.‌ ಈ ವಿಡಿಯೋ ನೋಡಿದಾಗ ಮನುಷ್ಯರು ಮಾತ್ರವೇ ಅಲ್ಲ ಪ್ರಾಣಿಗಳು ಸಹಾ ಸಿನಿಮಾವನ್ನು ಬಹಳ ಆಸಕ್ತಿಯಿಂದ ನೋಡಿ ಪ್ರತಿಕ್ರಿಯೆ ನೀಡುತ್ತದೆ ಎಂಬುದು ನಮಗೆ ತಿಳಿಯುತ್ತದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಬಹಳಷ್ಟು ಜನರ ಗಮನ ಸೆಳೆದಿದೆ.‌ ಈ ವಿಡಿಯೋದಲ್ಲಿ ಸಾಕು ನಾಯಿಯೊಂದು ಮನೆಯ ಟಿವಿಯಲ್ಲಿ ಹಾಲಿವುಡ್ ಸಿನಿಮಾ‌ ಒಂದನ್ನು ನೋಡುತ್ತಾ, ಆ ಸಿನಿಮಾದ ದೃಶ್ಯಕ್ಕೆ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದು, ನಾಯಿ ನೀಡಿದ ಪ್ರತಿಕ್ರಿಯೆ ಕಂಡು ಬಹಳಷ್ಟು ಜನ ಬೆರಗಾಗಿದ್ದಾರೆ.
ಯೂಟ್ಯೂಬ್ ನಲ್ಲಿ ಯೂಟ್ಯೂಬರ್ ಒಬ್ಬರು ಶೇರ್ ಮಾಡಿಕೊಂಡಿರುವ ಈ ವಿಡಿಯೋವನ್ನು ನಾವು ಗಮನಿಸಿದಾಗ, ಮನೆಯ ಟಿವಿಯ ಪರದೆಯ ಮೇಲೆ ಹಾಲಿವುಡ್ ನ ಸೂಪರ್ ಹಿಟ್ ಸಿನಿಮಾ ‘ಕಿಂಗ್ ಕಾಂಗ್’ ಪ್ರಸಾರವಾಗುತ್ತಿದೆ.

ಈ ವೇಳೆಯಲ್ಲಿ ಮನೆಯಲ್ಲಿ ಸಾಕಿರುವ ಬುಲ್ ಡಾಗ್ ಹಾಸಿಗೆ ಮೇಲೆ ಕುಳಿತುಕೊಂಡು ಸಿನಿಮಾವನ್ನು ಬಹಳ‌ ಆಸಕ್ತಿಯಿಂದ ವೀಕ್ಷಣೆ ಮಾಡುತ್ತಿದೆ. ಅದು ಸಂಪೂರ್ಣವಾಗಿ ಸಿನಿಮಾದಲ್ಲೇ ಲೀನವಾಗಿದೆಯೇನೋ ಎನ್ನುವ ಹಾಗೆ ಸಿನಿಮಾ ನೋಡುವಾಗ, ಆ ಸಿನಿಮಾದ ದೃಶ್ಯವೊಂದರಲ್ಲಿ ನಾಯಕಿಯನ್ನು ಡೈನೋಸಾರ್ ಗಳು ಹಿಡಿಯಲು ಬರುವ ಸನ್ನಿವೇಶ ಬಂದಾಗ ನಾಯಿ ಅದನ್ನು ನೋಡಿ ಎಕ್ಸೈಟ್ ಆಗಿದೆ. ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿರುವ ಮಹಿಳೆಯ ಡೈನೋಸಾರ್ ಗಳಿಂದ ತಪ್ಪಿಸಿಕೊಳ್ಳಲು ಓಡುವಾಗ ಆಕೆ ಭಯದಿಂದ ಅರಚುತ್ತಾಳೆ, ರಕ್ಷಣೆಗಾಗಿ ಕೂಗುತ್ತಾಳೆ.

ಆ ಸನ್ನಿವೇಶದಲ್ಲಿ ಮಹಿಳೆ ಅಪಾಯದಲ್ಲಿ ಇರುವುದನ್ನು ನೋಡಿದ ನಾಯಿ, ಆಕೆಯನ್ನು ಡೈನೋಸಾರ್ ಗಳು ಹಿಡಿಯಲು ಬಂದಾಗ ಜೋರಾಗಿ ಬೊಗಳಿ ಡೈನೋಸಾರ್ ಗಳನ್ನು ಓಡಿಸಲು ಪ್ರಯತ್ನವನ್ನು ಪ್ರಾರಂಭಿಸಿದೆ. ಸಿನಿಮಾದಲ್ಲಿರುವ ಮಹಿಳೆ ಅಪಾಯಕ್ಕೆ ಸಿಲುಕಿದ್ದಾಳೆ ಎನ್ನುವ ಭಾವನೆಯಿಂದ ನಾಯಿಯು ಡೈನೋಸಾರ್ ಗಳತ್ತ ನೋಡಿ ಒಂದೇ ಸಮನೆ ಬೊಗಳುವುದನ್ನು ನಾವು ಗಮನಿಸಬಹುದಾಗಿದೆ. ಹೀಗೆ ನಾಯಿಗೆ ಸಿನಿಮಾದ ಪಾತ್ರಗಳನ್ನು ನಿಜವಲ್ಲ ಎಂಬ ಅರಿವಿಲ್ಲದೆ, ಸಿನಿಮಾವನ್ನು ಆಸಕ್ತಿಯಿಂದ ನೋಡಿ ನೀಡಿದ ಅದ್ಭುತವಾದ ಪ್ರತಿಕ್ರಿಯೆಯ ಈ ವಿಡಿಯೋ ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.

ವಿಡಿಯೋ ನೋಡಿ

ಈಗಾಗಲೇ ಮೂರು ಕೋಟಿಗಿಂತ ಅಧಿಕ ಜನರು ಈ ವೀಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡುತ್ತಾ ನಾಯಿ ನೀಡಿದ ಪ್ರತಿಕ್ರಿಯೆ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಕಾಮೆಂಟ್ ಮಾಡುತ್ತಾ ಒಬ್ಬರು,‌ “ಸಿನಿಮಾ ನೋಡಿದ ಜನ ಕೂಡ ಇಷ್ಟೊಂದು ಚೆನ್ನಾಗಿ ರಿಯಾಕ್ಟ್ ಮಾಡಿರುವುದಿಲ್ಲ” ಎಂದು ನಾಯಿಯನ್ನು ಹೊಗಳಿದ್ದಾರೆ. ಇನ್ನೊಬ್ಬರು ತಮಾಷೆ ಮಾಡುತ್ತಾ, “ಸಿನಿಮಾದಲ್ಲಿನ ಕಿಂಗ್ ಕಾಂಗ್ ಈ ಬುಲ್ ಡಾಗ್ ಬೊಗಳದೇ ಇದ್ದಿದ್ದರೆ ಹುಡುಗಿಯ ರಕ್ಷಣೆಗೆ ಬರುತ್ತಿರಲಿಲ್ಲ” ಎಂದು ಹೇಳಿದ್ದಾರೆ. ಇನ್ನೂ ಕೆಲವರು, “ಡೈನೋಸಾರ್ ಗಳ ಬೇಟೆಯನ್ನು ಕಿಂಗ್ ಕಾಂಗ್ ತಪ್ಪಿಸಿದ್ದಕ್ಕಾಗಿ ನಾಯಿ ಕೋಪಗೊಂಡು ಬೊಗಳಿದೆ” ಎಂದು ಕೂಡ ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ.