ಜೀವಕ್ಕೆ ಕುತ್ತಾಯ್ತು Bungee Jumping ಹವ್ಯಾಸ: ಒಂದೇ ಒಂದು ತಪ್ಪಿನಿಂದ ಗಾಳಿಯಲ್ಲೇ ಹೋಯ್ತು ಯುವತಿಯ ಪ್ರಾಣ!

ಇತ್ತಿತ್ತಲಾಗಿ ಜನರಿಗೆ ಅಡ್ವೆಂಚರ್ ಗೇಮಗಳು ಹೆಚ್ಚು ಆಕರ್ಷಣೆ ಮಾಡುತ್ತಿವೆ. ಈ ಹುಚ್ಚಿನಲ್ಲಿ ಅನೇಕ ಯುವಕ ಯುವತಿಯರು ತಮ್ಮ ಜೀವವನ್ನು ಸಹ ಕಳೆದುಕೊಂಡಿದ್ದಾರೆ. ಇದೇ ರೀತಿಯ ಒಂದು ಘಟನೆ 25 ವರ್ಷದ ಯುಸೇನೆಯಾ ಮೂರಾಲೆಸ್ ಗೊಮೆಜ್ ಳ ಜೊತೆಗೆ ನಡೆಯಿತು. ಬಂಜಿ ಜಂಪಿಂಗ್ ಮಾಡುವಾಗ ಆಕೆ ತನ್ನ ಜೀವವನ್ನು ಕಳೆದುಕೊಂಡಳು. ಕೊಲಂಬಿಯಾದ ಅಂಟಿ ಆಕ್ವಿಯ ನಲ್ಲಿ ಯುಸೇನಿಯಾ ಮೊರಲೆಸ್ ಗೊಮೆಜ್ ತನ್ನ ಪ್ರಿಯಕರನೊಂದಿಗೆ ಬಂಜಿ ಜಂಪಿಂಗ್ ತಯಾರಿ ಮಾಡುತ್ತಿದ್ದಳು. ಈ ತಯಾರಿ ಮಾಡುತ್ತಿರುವಾಗಲೇ ತರಬೇತುದಾರನ ಮಾತುಗಳನ್ನು ಕೇಳಿ ಯುಸೇನಿಯಾ ಜಂಪ್ ಮಾಡಿದ ನಂತರ ಸುಮಾರು 160 ಆಳ ಕಂದರದಲ್ಲಿ ಹೋಗಿ ಬಿದ್ದಳು.

ಯುವತಿಯ ಪ್ರಿಯಕರ ಸಾಧ್ಯವಾದಷ್ಟು ಬೇಗ ಆಕೆಯ ಹತ್ತಿರ ಹೋಗಿ ತಲುಪಿದನು. ಆದರೆ ಅಷ್ಟೋತ್ತಿಗೆ ಆಕೆ ತೀರಿಕೊಂಡಿದ್ದಳು.

ಆಕೆ ಬಿದ್ದಾಗ ಆದಷ್ಟು ಬೇಗ ಪ್ರಿಯಕರ ಆಕೆಯ ಹತ್ತಿರ ಹೋಗಿದ್ದರೂ ಆಕೆ ಮಾತ್ರ ತೀರಿಕೊಂಡಿದ್ದಳು. ಅಷ್ಟೊಂದು ಆಳದಲ್ಲಿ ಬಿದ್ದಿರುವುದರಿಂದ ಆಕೆಯ ಮೃತ್ಯು ಸಂಭವಿಸಿದೆ ಎಂದು ಎಲ್ಲರಿಗೂ ಎನಿಸಿತು. ಆದರೆ ಮೆಡಿಕಲ್ ರಿಪೋರ್ಟ್ ನಲ್ಲಿ ಬೇರೆ ವಿಷಯವೇ ಕಂಡುಬಂದಿದೆ. ಅದೇನೆಂದರೆ, ಆಕೆಯ ಸಾವು 160 ಅಡಿ ಮೇಲಿನಿಂದ ಬಿದ್ದು ಕುಸಿತದಿಂದ ಆಗದೆ ಹೃದಯಾಘಾತದಿಂದ ಆಗಿದೆಯೆಂದು ತಿಳಿದುಬಂದಿದೆ.

ಯುವತಿಯು ಪೂಲ್ ಮೇಲಿಂದ ಜಂಪ್ ಮಾಡಿದ ನಂತರ ತಾನು ಬಂಗಿ ಕಾರ್ಡ್ ನ್ನೆ ಧರಿಸಿಲ್ಲವೆಂದು ಗಮನಕ್ಕೆ ಬರುತ್ತಲೇ ಆಕೆಯ ಎದೆ ಒಡೆದು ನೀರಾಗಿದೆ. ಹೀಗಾಗಿ ಆಕೆ ನೆಲಕ್ಕೆ ಬೀಳುವ ಮುನ್ನವೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾಳೆ. ದೊರೆತ ಮಾಹಿತಿಯ ಪ್ರಕಾರ, ತರಬೇತುದಾರ ಎಸೇನಿಯಾಳ ಪ್ರಿಯಕರನಿಗೆ ಜಂಪ್ ಮಾಡಲು ಹೇಳಿದನು. ಆತನಿಗೆ ಸೌರಕ್ಷಣೆಯ ಎಲ್ಲ ಉಪಕರಣಗಳನ್ನು ಅಳವಡಿಸಲಾಗಿತ್ತು. ಈ ವಿಷಯಗಳು ಆಕೆಯ ಗಮನದಲ್ಲಿ ಬರದೇ ಇದ್ದುದರಿಂದ ಆಕೆ ತುಂಬಾ ಕನ್ಫ್ಯೂಸ್ ಆಗಿ ತಾನೇ ಜಂಪ್ ಮಾಡಿದ್ದಾಳೆ. ಮೃತ ಯುವತಿಯ ಸಹೋದರ ಹೇಳುವ ಪ್ರಕಾರ ಆತನ ಸೋದರಿಗೆ ಓದುವುದು ಮತ್ತು ನೃತ್ಯದ ತುಂಬಾ ಹವ್ಯಾಸವಿತ್ತಂತೆ. ನನ್ನ ತಂಗಿ ನಿಜವಾಗಿಯೂ ಒಳ್ಳೆಯ ಹುಡುಗಿ ಇದ್ದಳು ಎಂದು ಸಹೋದರ ಹೇಳುತ್ತಾನೆ. ಈ ದುರ್ಘಟನೆಯ ಸಂಪೂರ್ಣ ತನಿಖೆ ನಡೆಯುತ್ತಿದೆ.