ಕಾಲ್ ಸೆಂಟರ್ ಯುವತಿಗೆ ಬೆಂಗಳೂರಿನ ಬಾಣಸವಾಡಿ ಸ್ಲಮ್ ನ ಗಂಡು ನೀಡಿದ ಉತ್ತರ ಕೇಳಿ! ಪಾಪ! ಜಾಬ್ ನ್ನೆ ಬಿಟ್ಟು ಓಡಿರಬೇಕು.

ಸೋಶಿಯಲ್ ಮೀಡಿಯಾ ಎಂದರೆ ಸಖತ್ ಮಸಾಲೆಯ ರುಚಿಕಟ್ಟಾದ ಅಡುಗೆ ಇದ್ದ ಹಾಗೆ. ಇಲ್ಲಿ ಸರ್ಚ್ ಮಾಡಲು ಬಂದವನಿಗೆ ಆತನ ಇಷ್ಟವಾದ ಕಜ್ಜಾಯ ಏನಾದರೂ ಸಿಕ್ಕೆ ಸಿಗುತ್ತದೆ. ಬರಿಗೈಯಿಂದ ವಾಪಸ್ ಹೊಗುವದೇ ಇಲ್ಲ. ಪ್ರತಿಯೊಬ್ಬರಿಗೂ ಆಕರ್ಷಿಸುವ ಅಷ್ಟೊಂದು ಸೂಪರ್ ಕಂಟೆಂಟ್ ಕಜ್ಜಾಯ ತುಂಬಿದ ಹೋಟಲ್ ಇದಾಗಿದೆ ಎನ್ನಬಹುದು. ಸದ್ಯ ಇಲ್ಲಿ ನಿಮಗಾಗಿ ಒಂದು ಸಖತ್ ತಮಾಷೆಯ ಆಡಿಯೋ ಒಂದನ್ನು ತಂದಿದ್ದೇವೆ. ಈ ಆಡಿಯೋ ಕೇಳಿದ ಮೇಲೆ ನಕ್ಕು ನಕ್ಕು ಸಾಕಾಗುತ್ತದೆ.

ಇತ್ತೀಚೆಗೆ ಪ್ರತಿಯೊಬ್ಬರ ಫೋನ್ ಗಳಿಗೆ ಕಂಪನಿಯ, ಬ್ಯಾಂಕ್ ಗಳ ಫೋನ್ ಕಾಲ್ ಗಳೇ ಹೆಚ್ಚಾಗಿ ಬರುತ್ತಿವೆ. ಫೋನ್ ಎತ್ತಿದ ತಕ್ಷಣ ಸರ್ ನೀವೇನ್ ಮಾಡೋದು? ನಿಮಗೆ ಸಂಬಳ ಎಷ್ಟು? ನಿಮಗೆ ಲೋನ್ ಏನಾದರೂ ಅವಶ್ಯಕೆತೆ ಇದೆಯಾ? ಒಂದು ವೇಳೆ ಬೇಕಿದ್ದರೆ ಅದನ್ನು ನಾವು ಪೂರೈಸುತ್ತವೆ, ಹೀಗೆ ಅನೇಕ ರೀತಿಯ ಕಾಲ್ ಗಳು ಬಂದು ತಾಪತ್ರಯ ನೀಡುತ್ತವೆ. ನಮ್ಮ ನಮ್ಮ ಕೆಲಸಗಳೇ ಭಾರವಾದಾಗ ಕೆಲಸದ ಮಧ್ಯೆ ಈ ಕಂಪನಿಯವರ ತಗಾದೆ ಒಂದು ಜಾಸ್ತಿ. ಪ್ರಸ್ತುತ ಆಡಿಯೋದಲ್ಲಿ ಕಾಲ್ ಸೆಂಟರ್ ಯುವತಿಯೊಬ್ಬಳು ಇದೇ ರೀತಿ ಲೋನ್ ಕಮಿಟ್ ಮೆಂಟ್ ಸಲುವಾಗಿ ವ್ಯಕ್ತಿಯೊಬ್ಬನಿಗೆ ಕಾಲ್ ಮಾಡುತ್ತಾಳೆ. ಆ ವ್ಯಕ್ತಿ ನೀಡಿದ ಉತ್ತರ ಕೇಳಿ ಕಾಲ್ ಸೆಂಟರ್ ಯುವತಿ ತನ್ನ ಜಾಬ್ ಗೆ ರಾಜೀನಾಮೆ ಕೊಟ್ಟು ಅಲ್ಲಿಂದ ಓಡಿಯೇ ಹೋಗಿರಬೇಕು ಎನಿಸುತ್ತೆ. ಆ ರೀತಿ ಫಜೀತಿ ಮಾಡಿದ್ದಾನೆ ಈ ಬಾಣಸವಾಡಿಯ ವ್ಯಕ್ತಿ.

ಆಡಿಯೋ ಕ್ಲಿಪ್ ನಲ್ಲಿ ಕೇಳಿ ಬರುವ ಹಾಗೆ ಕಾಲ್ ಸೆಂಟರ್ ಯುವತಿ ಮೊದಲು ವ್ಯಕ್ತಿಗೆ ಲೊಕೇಶನ್ ಬಗ್ಗೆ ಕೇಳುತ್ತಾಳೆ. ಅದಕ್ಕೆ ಉತ್ತರವಾಗಿ ಮುಂಬಯಿ ಹೇಳುತ್ತಾನೆ. ನಂತರ ಸದ್ಯಕ್ಕೆ ನಾನು ಬೆಂಗಳೂರಿನ ಬಾಣಸವಾಡಿಯಲ್ಲಿ ಇದ್ದೇನೆ ಎನ್ನುತ್ತಾನೆ. ಅದಕ್ಕೆ ಯುವತಿ ನಿಮ್ಮ ತಿಂಗಳ ಖರ್ಚು ಎಷ್ಟು ಎಂದು ಕೇಳಿದಾಗ ವ್ಯಕ್ತಿ ಪ್ರತಿಯಾಗಿ 6 ಸಾವಿರ ಅಂತ ಹೇಳುತ್ತಾನೆ. ನಂತರ ಯುವತಿ ಮರುಪ್ರಶ್ನೆ ಹಾಕುತ್ತಾಳೆ, ನೀವು ಕೆಲ್ಸ ಏನು ಮಾಡೋದು ಅಂತ. ಅದಕ್ಕೆ ವ್ಯಕ್ತಿ ನಿರಾತಂಕವಾಗಿ ತಾನು ಕಳ್ಳನಿದ್ದೇನೆ ಎಂದು ಹೇಳುತ್ತಾನೆ. ಆಗ ಯುವತಿ ಬೆಚ್ಚಿಬಿದ್ದು ಕಳ್ಳ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಕಳ್ಳ ತುಂಬಾ ವಿನಯದಿಂದ ಹೌದು ನಾನು ಕಳ್ಳ ಅಂತ ಹೇಳ್ತಾನೆ. ಅಷ್ಟಕ್ಕೇ ಬಿಡದೆ ನಾನು ಚಿನ್ನ, ಹಣ ಕದಿಯೋದು ನಿಮ್ಮ ಮನೆಯಲ್ಲಿ ಏನಾದರೂ ಚಿನ್ನ ಇದೆಯಾ ಎಂದು ಕೇಳುತ್ತಾನೆ. ಅದಕ್ಕೆ ಯುವತಿ ಸಂಪೂರ್ಣವಾಗಿ ಗಲಿಬಿಲಿಗೊಳ್ಳುತ್ತಾಳೆ ಮತ್ತು ಫೋನನ್ನೆ ಕಟ್ ಮಾಡಿ ಬಿಡುತ್ತಾಳೆ.

ಮೊದಲು ಈ ಆಡಿಯೋ ಕೇಳಿ.

ಪ್ರಸ್ತುತ ಈ ಆಡಿಯೋ ಕ್ಲಿಪ್ ನ್ನು ಇನ್ಸ್ಟಾಗ್ರಾಮ್ ನಲ್ಲಿ mandyahaidan_trolls ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ಆಡಿಯೋ ಕ್ಲಿಪ್ ನ್ನು ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಜನರು ನೋಡಿ ಆನಂದಿಸಿದ್ದಾರೆ. ಹಾಗೂ 3 ಲಕ್ಷಕ್ಕೂ ಹೆಚ್ಚು ಜನ ಈ ಆಡಿಯೋವನ್ನು ಲೈಕ್ ಮಾಡಿದ್ದಾರೆ.