ವೈರಲ್ ಫೋಟೊ : ಹಾವು ಕಣ್ಣೆದುರಿಗೇ ಇದೆ, ಅದರೂ ಕಾಣಸ್ತಿಲ್ಲ! ನಿಮಗೆ ಕಾಣಿಸುತ್ತಾ ನೋಡಿ

ನಿಮ್ಮ ಕಣ್ಣು ಚುರುಕಾಗಿವೆಯೋ ಇಲ್ಲವೊ ಎಂದು ಈ ಫೋಟೊ ಎರಡು ನಿಮಿಷದಲ್ಲಿ ಹೇಳಿಬಿಡುತ್ತೆ. ತಾವು ಈ ಫೋಟೊದಲ್ಲಿರುವ ಹಾವನ್ನು ಪಟ್ ಅಂತ ಹುಡುಕಬೇಕಷ್ಟೆ. ಹುಡುಕುವುದು ಹೇಳಿದಷ್ಟು ಸುಲಭ ಅಲ್ಲ, ಹಾಗೆಯೇ ತೀರ ಕಷ್ಟವೂ ಅಲ್ಲ. ಏಕಾಗ್ರತೆಯಿಂದ ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕಷ್ಟೆ.

ಇದೊಂದು ವೈರಲ್ ಫೋಟೊ ಆಗಿದ್ದು, ತುಂಬಾ ಜನ ನೆಟ್ಟಿಗರು ಇಲ್ಲಿ ಹಾವು ಹುಡುಕಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಬಹುತೇಕರಿಗೆ ಅಲ್ಲಿ ಒಣ ಎಲೆ – ಕಟ್ಟಿಗೆ , ಚಿಕ್ಕ ಹಸಿರು ಗಿಡ ಮಾತ್ರ ಕಾಣುತ್ತಿವೆ. ಆದರೆ ಅದರಲ್ಲೇ ಅಡಗಿರುವ ಹಾವು ಕಾಣಿಸುತ್ತಿಲ್ಲ. ಅರ್ದಕ್ಕಿಂತ ಹೆಚ್ಚು ಜನ ಇದರಲ್ಲಿ ಹಾವನ್ನು ಹುಡುಕದೇ ಸೋತಿದ್ದಾರೆ.

ಕಣ್ಣಿಗೆ ಸವಾಲೆಸೆಯವ ಈ ಚಿತ್ರವನ್ನು ಮೇ ಏಳರಂದು waitbutwhy ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅಲ್ಲಿಂದ ಸಾಕಷ್ಟು ಕಡೆ ಹಂಚಿ ಹೋಗಿ ಫೇಸ್ಬುಕ್ ನಲ್ಲೂ ಓಡಾಡುತ್ತಿದೆ. ಸಾವಿರಾರು ಲೈಕ್ ಮತ್ತು ರಿಟ್ವೀಟ್ ಮಾಡಲಾಗಿದೆ. ಆದರೆ ಎಲ್ಲ ಕಡೆ ಅರ್ದದಷ್ಟು ಜನ ಸಹ ಸರಿಯಾದ ಉತ್ತರ ನೀಡುತ್ತಿಲ್ಲ.

ಇದು ಮಾಮೂಲಾಗಿ ಕ್ಲಿಕ್ ಮಾಡಿರುವ ಫೋಟೊದ ಹಾಗೆ ಕಾಣಿಸುತ್ತಿಲ್ಲ. ಹಾವನ್ನೇ ಫೋಕಸ್ ಮಾಡಿ ಚಿತ್ರ ತಗೆಯಲಾಗಿದೆ. ಆದರೆ ನಂತರ ಎಡಿಟ್ ಮಾಡಲಾಗಿದೆ ಅನಿಸುತ್ತದೆ. ಏಕೆಂದರೆ ಹಾವು ತೀರ ಊಸರವಳ್ಳಿಯ ಹಾಗೆ ಸುತ್ತಲಿನ ಪರಿಸರದ ಹಾಗೆ ಬಣ್ಣ ಬದಲಿಸಲಾರದು. ಇಲ್ಲಿ ಸ್ವಲ್ಪ ಕೈ ಚಳಕ ತೋರಿಸಿದ್ದಾರೆ ಅನಿಸುತ್ತದೆ.

ಸಾಕಷ್ಟು ಜನ ಚಿತ್ರದ ತಪ್ಪು ತಪ್ಪಾಗಿ ಮಾರ್ಕ್ ಮಾಡಿ ರಿಟ್ವೀಟ್ ಮಾಡುತ್ತಿದ್ದಾರೆ, ಕಾಮೆಂಟಲ್ಲಿ ಹಾಕುತ್ತಿದ್ದಾರೆ. ತೀರ ಎಲೆಯಂತೇ ಕಾಣುವುದರಿಂದ ಹುಡುಕುವುದು ಜನರಿಗೆ ಕಷ್ಟವಾಗುತ್ತಿದೆ. ಕಣ್ಣಲ್ಲಿ ಕಣ್ಣಿಟ್ಟು, ಒಂದು ಕಡೆಯಿಂದ ಬಿಡದೇ ಹುಡುಕಿದರೆ ಸಿಗುತ್ತದೆ. ನೀವೂ ಟ್ರೈ ಮಾಡಿ. ಸಿಗದಿದ್ದರೆ ಕೆಳಗಿದೆ ನೋಡಿ.

-Team Infotrend