ಇಲ್ಲಿರೊ ಕ್ರಿಕೇಟ್ ಪ್ಲೇಯರ್ಸ್ ಯಾರ್ ಹೇಳಿ ನೋಡೋಣ!
ನೋಡೋಕೆ ಸುಲಭವಾಗಿ ಕಂಡ್ರೂ ಇಲ್ಲಿರೊ ಅಷ್ಟೂ ಚಿತ್ರಗಳನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಕ್ರಿಕೆಟ್ ನಲ್ಲಿ ತುಂಬಾ ಪಳಗಿದವರು, ಸಾಕಷ್ಟು ಕ್ರಿಕೇಟ್ ನೋಡುವವರು ಕೂಡ ಒಂದೆರಡು ಚಿತ್ರಗಳನ್ನು ಗುರುತಿಸಬಹುದು. ಆದರಡ ಅಷ್ಟೂ ಚಿತ್ರಗಳನ್ನು ಗುರುತಿಸುವುದು ಕಷ್ಟದ ಕೆಲಸ. ಸುಮ್ನೆ ಟೈಂ ಪಾಸಿಗಷ್ಟೇ ಇದು, ಅಸಲಿ ಫೋಟೊಗಳ ಒಳಭಾಗವನ್ನೆಲ್ಲ ತಗೆದು ಬ್ಲಾಕ್ ಮಾಡಲಾಗಿದೆ.
ಇಲ್ಲಿರುವರೆಲ್ಲ ತೀರ ಹಳಬರಲ್ಲ, ತೀರ ಇತ್ತೀಚಿನ ಆಟಗಾರರು. ಐಪಿಎಲ್‌ನಲ್ಲೂ ಕೂಡ ನೀವು ಸಾಕಷ್ಟು ನೋಡಿದ್ದೀರಿ. ಬಹುತೇಕ ಐಪಿಎಲ್ ನ ಎಲ್ಲ ಸೀಜನ್ ನಲ್ಲೂ ಇವರು ಆಡಿದ್ದಾರೆ. ಹೀಗಾಗಿ ಸ್ವಲ್ಪ ಫ್ಲಾಶ್ ಬ್ಯಾಕ್ ಹೋದರೆ ಗುರುತಿಸಬಹುದು. ಲಾಕ್ ಡೌನ್ ನಲ್ಲಿ ಮೆದುಳಿಗೆ ತಕ್ಕಮಟ್ಟಿಗೆ ಕೆಲಸ ಕೊಡೊದಷ್ಟೇ ಈ ಪೋಸ್ಟಿನ ಉದ್ದೇಶ.
ಇವರೆಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರಿ ಹೆಸರು ಮಾಡಿದವರು. ಸಾಕಷ್ಟು ಪಂದ್ಯಗಳನ್ನು ಭಾರತ ಹಾಗೂ ತಮ್ಮ ಫ್ರಾಂಚೈಸಿಯ ಮಡಿಲಿಗೆ ಹಾಕಿದವರು.ತೀರ ನಿಮಗೆ ಗುರುತಿಸಲು ಸಾಧ್ಯವಿಲ್ಲ ಎಂದಾದರೆ ಕೆಳಗಿರುವ ಚಿತ್ರ ನೋಡಿ, ಅಲ್ಲಿ ಅವರ ಚಿತ್ರಸಮೇತ ಹೆಸರೂ ಇವೆ.
ಒಂದನೇ ಚಿತ್ರ : ಅದ್ಭುತ ಎಡಗೈ ಬ್ಯಾಟ್ಸಮನ್ ಶಿಖರ್ ಧವನ್, ಎರಡನೇ ಚಿತ್ರ : ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಅವರದು, ಮೂರನೇ ಚಿತ್ರ : ಕನ್ನಡಿಗರೂ ಆದ ಹೊಡಿಬಡಿ ಎಕ್ಸಫರ್ಟ್, ಪಂಜಾಬ್ ತಂಡದ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರು, ನಾಲ್ಕನೇ ಚಿತ್ರ : ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಅವರದು. ಕೊರೋನ ಕಾರಣಕ್ಕೆ ಈ ಸಲದ ಐಪಿಎಲ್ ನಿಂದ ಅವರು ಹೊರಗುಳಿದಿದ್ದರು.

-Team Infotrend