ಮನುಷ್ಯರು ಯೋಗಾ ಮಾಡುವದನ್ನು ನೋಡಿದ್ದೇವೆ ಆದರೆ ಬೆಕ್ಕು ಸಹ ಮನುಷ್ಯರಿಗಿಂತ ಚೆನ್ನಾಗಿ ಯೋಗಾ ಮಾಡುತ್ತದೆ ಎಂದರೆ ನಂಬುವಿರಾ? ನೋಡಿ ವಿಡಿಯೋ….

ಇಂದಿನ ಯಾಂತ್ರಿಕ ಜೀವನ, ಆತಂತ್ರಜೀವನ ಶೈಲಿಗೆ ಸುಸೂತ್ರತೆ ತರುವ ನಿಟ್ಟಿನಲ್ಲಿ ಯೋಗ-ಆಸನ ಪ್ರಾಣಾಯಾಮಗಳು ಮುಖ್ಯ ಪಾತ್ರವಾಹಿಸುತ್ತವೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒತ್ತಡದ ಬಲೆಯಲ್ಲಿ ಓಡಾಡುವ ಬಿಡುವಿಲ್ಲದ ಮನಸ್ಸು, ಶರೀರ ಒದ್ದಾಡುತ್ತಿದೆ. ಆದ್ದರಿಂದ ದೇಹ ಬಲಿಶಾಲಿಯಾಗಿರಬೇಕು. ಮನಸ್ಸನ್ನು ಹಗುರವಾಗಿಡಲು, ಆತ್ಮಬಲವನ್ನು ಗಟ್ಟಿಮುಟ್ಟು ಮಾಡಲು ಯೋಗಾಸನ, ಪ್ರಾಣಾಯಾಮದ ಸಾಧನೆಯನ್ನು ಪ್ರತಿನಿತ್ಯಮಾಡುವದು ಅವಶ್ಯಕವಾಗಿದೆ.

ಯೋಗಾಸನಕ್ಕೆ ಇಂದು ಇಡೀ ಜಗತ್ತಿನಾದ್ಯಂತ ಮಹತ್ವವನ್ನು ಕೊಡುತ್ತಿದ್ದಾರೆ. ಅಷ್ಟೇ ಏಕೆ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿವಸ ಎಂದು ಆಚರಿಸಲಾಗುತ್ತಿದೆ. ನಮ್ಮ ದೇಶದ ಯೋಗಗುರು ರಾಮದೇವ ಬಾಬಾ ಅವರು ಇಡೀ ದೇಶಕ್ಕೆ ಯೋಗ ಹೇಳಿ ಕೊಡುವ ಕಾರ್ಯ ಮಾಡಿದ್ದಾರೆ. ಯೋಗ ಮಾಡುವದರಿಂದ ನಮ್ಮ ಶರೀರಕ್ಕೆ ಅನೇಕ ಲಾಭಗಳು ದೊರೆಯುತ್ತವೆ ಅಲ್ಲದೆ ಶರೀರ ಸದೃಢವಾಗಿಡಲು ಸಹಾಯ ವಾಗುತ್ತದೆ.

ಇಂದು ಪ್ರತಿಯೊಬ್ಬರು ಯೋಗ ಕಲಿಯಲು ಬಯಸುತ್ತಾರೆ ಯೋಗದಿಂದ ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಈ ಯೋಗಾಸನದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಯುವತಿ ಹಾಗೂ ಆಕೆಯ ಜೊತೆಗೆ ಬೆಕ್ಕು ಯೋಗಾಸನ ಮಾಡಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ಯುವತಿ ಯೋಗಾ ಮಾಡುತ್ತಿರುತ್ತಾಳೆ. ಆಕೆಯ ಜೊತೆಗೆ ತಾನು ಸಾಕಿದ ಬೆಕ್ಕು ಸಹ ಯೋಗಾ ಮಾಡುತ್ತದೆ. ಅಂದರೆ ಯುವತಿಗಿಂತ ಚೆನ್ನಾಗಿ ಈ ಬೆಕ್ಕು ಯೋಗಾ ಮಾಡುತ್ತದೆ. ಆ ಯುವತಿ ತಾನು ಸಾಕಿದ ಬೆಕ್ಕಿಗಾಗಿ ಯೋಗಾ ಮಾಡುವ ಮ್ಯಾಟ್ ಸಹ ಕೊಡಿಸಿದ್ದಾಳೆ. ಹೀಗಾಗಿ ಬೆಕ್ಕು ಮನುಷ್ಯರಿಗಿಂತ ಅದ್ಭುತವಾದ ರೀತಿಯಲ್ಲಿ ಯೋಗಾ ಮಾಡುವದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಕಂಡು ನೇಟಿಜನ್ಸ್ ಗಳು ವಿವಿಧ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬ ಯುಜರ್ಸ್ ‘ರಾಮದೇವ ಬಾಬಾಗಿಂತಲೂ ಬೆಕ್ಕೆ ಶ್ರೇಷ್ಠ’ ಎಂದಿದ್ದಾನೆ. ಮತ್ತೊಬ್ಬ :ಇನ್ಮುಂದೆ ಬೆಕ್ಕಿಗೆ ಇಲಿಗಳನ್ನು ಹಿಡಿಯಲು ಬಹಳಷ್ಟು ಕಷ್ಟ ಪಡಬೇಕಾಗಿಲ್ಲ’ ಎಂದಿದ್ದಾನೆ.

ವಿಡಿಯೋ ನೋಡಿ….