Cat Video; ಪತಿ ಪ್ರೇಯಸಿಯ ಜೊತೆ ಚೆಲ್ಲಾಟ ಆಡುವಾಗ; ಪತ್ನಿಯ ಕೈಗೆ ರೆಡ್ ಹ್ಯಾಂಡ್ ಸಿಕ್ಕಾಗ! ಪತಿ… ಅಧೋಗತಿ..!
ಪ್ರಾಣಿಗಳ ಕೆಲವು ವಿಡಿಯೋಗಳು ನಿಜಕ್ಕೂ ತುಂಬಾ ತಮಾಷೆಯಿಂದ ಕೂಡಿರುತ್ತವೆ. ಸಾಕುಪ್ರಾಣಿಗಳಲ್ಲಿಯೇ ಎಲ್ಲಕ್ಕೂ ಹೆಚ್ಚು ಪ್ರೀತಿಯ ಪ್ರಾಣಿ ಎಂದರೆ ಬೆಕ್ಕು. ಇದು ಅತೀ ಹೆಚ್ಚು ಮನೆಗಳಲ್ಲಿ ಸಾಕುವಂಥ ಪ್ರಾಣಿ. ಈ ಬೆಕ್ಕುಗಳ ವಿಡಿಯೋಗಳು ನೋಡಿದಾಗ ಒಮ್ಮೊಮ್ಮೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ. ಇಂಥ ಒಂದು ತಮಾಷೆಯ ವಿಡಿಯೋ ಒಂದನ್ನು ಈಗ ನಿಮ್ಮ ಮುಂದೆ ತಂದಿದ್ದೇವೆ. ಪ್ರಸ್ತುತ ವಿಡಿಯೋವನ್ನು ನೋಡಿದ ನಂತರ ನೀವು ಸೂಪರ್… ಸಾಲಿಡ್… ಎನ್ನುವಿರಿ.
ಪ್ರಸ್ತುತ ವಿಡಿಯೋ ಇದೊಂದು ಸಖತ್ ಫನ್ನಿ ವಿಡಿಯೋ ಆಗಿದೆ. ವಿಡಿಯೋದ ದೃಶ್ಯದಲ್ಲಿ ಎರಡು ಬೆಕ್ಕುಗಳು ಮಲಗಿದಲ್ಲೇ ಸರಸ ಸಲ್ಲಾಪ ಮಾಡುತ್ತ ಆಟದಲ್ಲಿ ತೊಡಗಿವೆ. ಸರಿಯಾಗಿ ಅದೇ ಸಮಯಕ್ಕೆ ಒಂದು ಬೆಳ್ಳನೆಯ ಬೆಕ್ಕು ಅಲ್ಲಿ ನಿಧಾನವಾಗಿ ಬಂದು ಈ ಬೆಕ್ಕುಗಳ ಚೆಲ್ಲಾಟ ಗಮನಿಸುತ್ತಾ ನಿಂತಿದೆ. ಬೆಳ್ಳನೆಯ ಬೆಕ್ಕು ತಮ್ಮನ್ನು ವಾಚ್ ಮಾಡುತ್ತಿದೆ ಎಂಬುದು ಬೂದಿ ಬಣ್ಣದ ಬೆಕ್ಕಿನ ಗಮನಕ್ಕೆ ಬರುತ್ತಲೇ ಅದು ತಪ್ಪಿತಸ್ಥನಂತೆ ಅಲ್ಲಿಂದ ಹಠಾತ್ ಪಲಾಯನ ಮಾಡಿದೆ. ಅದು ಈ ರೀತಿ ಹಠಾತ್ ಯಾಕೆ ಓಡಿ ಹೋಯಿತು ಎಂಬುದು ಮಾತ್ರ ಕರಿ ಬೆಕ್ಕಿಗೆ ಪ್ರಶ್ನೆಯಾಗಿ ಉಳಿಯುತ್ತದೆ. ಮತ್ತು ಕರಿ ಬೆಕ್ಕು ಉತ್ತರಕ್ಕಾಗಿ ಅತ್ತಿತ್ತ ನೋಡಲು ಶುರು ಮಾಡುತ್ತದೆ, ಕ್ಲೂ ಏನಾದರೂ ಸಿಗುತ್ತಾ ಅಂತ. ಆಗ ಮಾತ್ರ ಅದರ ಹಿಂದೆಯೇ ನಿಂತ ಬೆಳ್ಳನೆಯ ಬೆಕ್ಕು ನೋಡಿ ಕರಿ ಬೆಕ್ಕು ಪೂರ್ತಿ ಎದೆ ಓಡೆದುಕೊಂಡಂತೆ ಬೆಚ್ಚಿ ಬೀಳುತ್ತದೆ. ಈ ವಿಡಿಯೋಗೆ ವೈಸ್ ಓವರ್ ಟಚ್ ಮಾಡಿದ್ದರಿಂದ ಇದು ಇನ್ನಷ್ಟು ನೋಡಲು ತಮಾಷೆಯಾಗಿದೆ. ಹೀಗಾಗಿ ನೋಡಲು ಈ ವಿಡಿಯೋ ಸಖತ್ ತಮಾಷೆಯಿಂದ ಕೂಡಿದೆ. ಒಟ್ಟಾರೆ ಇಲ್ಲಿಯ ದೃಶ್ಯ ಗಂಡ ಪ್ರೇಯಸಿಯ ಜೊತೆಯಲ್ಲಿ ಇದ್ದು ಮಜಾ ಮಾಡುತ್ತಿದ್ದಾಗ ಹೆಂಡತಿ ಕೈಯಲ್ಲಿ ಅಕಸ್ಮಾತ್ ಸಿಕ್ಕಿ ಬಿದ್ದರೆ ಪ್ರೇಯಸಿಯ ಮತ್ತು ಗಂಡನ ಅವಸ್ಥೆ ಹೇಗಾಗುತ್ತದೆ ಸೇಮ್ ಟು ಸೇಮ್ ಅದೇ ರೀತಿಯ ದೃಶ್ಯ ಇಲ್ಲಿ ಕಂಡು ಬರುತ್ತಿದೆ ಎಂದರೆ ತಪ್ಪಾಗುವುದಿಲ್ಲ, ಅಲ್ವಾ?
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು cats.lover.home ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ಬೆಕ್ಕುಗಳ ಸುಂದರ ವಿಡಿಯೋ ಇಲ್ಲಿಯವರೆಗೆ 6.3 ಮಿಲಿಯನ್ ವೀಕ್ಷಣೆ ಪಡೆದಿದೆ. ಹಾಗೂ ಈ ವೀಡಿಯೋವನ್ನು 4 ಲಕ್ಷ 58 ಸಾವಿರ ಜನರು ಲೈಕ್ ಮಾಡಿದ್ದಾರೆ.