CDC (ಸೆಂಟರ್ ಫಾರ್ ಡಿಸಿಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್) ಸ್ಪಷ್ಟಪಡಿಸಿದ ಕೊರೊನಾದ ಹೊಸ ಆರು ಲಕ್ಷಣಗಳು! ನಿಮಗೆ ಗೊತ್ತೇ?
ದೇಶ ವಿದೇಶಗಳಲ್ಲಿ ಕೊರೊನಾ ದುರಂತ ನಾಟಕಕ್ಕೆ ಅಂತಿಮ ತೆರೆ ಯಾವಾಗ ಬೀಳುತ್ತೆ ಅಂತ ಇಡೀ ಜಗತ್ತೇ ಕಾದು ಕುಳಿತಿದೆ.ಆದರೆ ಇತ್ತ ಸೋಂಕಿತರು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ.ಸರಕಾರ ಮತ್ತು ಕೊರೊನಾ ವಾರಿಯರ್ಸ್ (ಡಾಕ್ಟರ್,ಪೊಲೀಸ್ ಮತ್ತು ಸ್ವಚ್ಛತಾ ಕಾರ್ಮಿಕರು) ಹೇಳುವ ಹಾಗೇ ಕೋರೊನಾದಿಂದ ಬಚಾವಾಗಲು ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಇದಕ್ಕೆ ಮನೆಯೇ ಮದ್ದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಪದೇಪದೇ ಹೇಳ್ತಾನೆ ಇದ್ದಾರೆ. ಇನ್ನು ಕೆಲವು ಟೆಸ್ಟ್ ಗಳನ್ನು ಮಾಡಿದ ಡಾಕ್ಟರ್ಸ್ ಗಳ ಪ್ರಕಾರ 80 % ರೋಗಿಗಳಲ್ಲಿ ಯಾವುದೇ ತರಹದ ಲಕ್ಷಣಗಳೇ ಕಂಡು ಬರುವದಿಲ್ಲ ಅಂತೆ.

ಇಲ್ಲಿಯವರೆಗೆ ತುಂಬಾ ಜ್ವರ ,ಕೆಮ್ಮು ಮತ್ತು ನೆಗಡಿ ಇವು ಕೊರೊನಾದ ಪ್ರಮುಖ ಲಕ್ಷಣಗಳಾಗಿದ್ದು ನಮಗೆ ಗೊತ್ತೇ ಇದೆ. ಈಗ ಈ ಲಕ್ಷಣಗಳ ಹೊರತಾಗಿ ಮತ್ತೆ ಬೇರೆ ಆರು ಹೊಸ ಲಕ್ಷಣಗಳನ್ನು CDC (ಸೆಂಟರ್ ಫಾರ್ ಡಿಸಿಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್)ಯವರು ಪತ್ತೆ ಹಚ್ಚಿದ್ದಾರೆ.ಅವು ಈ ಕೆಳಗಿನಂತಿವೆ.
1.ಚಳಿ ತಗಲುವದು.
2.ಚಳಿ ಮೇಲಿಂದ ಮೇಲೆ ಹತ್ತುವದು
3.ಸ್ನಾಯುಗಳ ವೇದನೆ.
4.ತಲೆನೋವು
5.ಗಂಟಲು ಒಣಗುವದರ ಜೊತೆಗೆ ಗಂಟಲಲ್ಲಿ ಖಿಚ್ ಖಿಚ್ ಆಗುವದು.
6.ನಾಲಿಗೆಗೆ ರುಚಿ ಇಲ್ಲದಿರುವದು
ಈ ಮೇಲಿನ ಆರು ಲಕ್ಷಣಗಳು ಕೋವಿಡ್-19 ಕೊರೊನಾದ ಲಕ್ಷಣಗಳು ಇರಬಹುದು ಅಂತ CDC ಈಗಾಗಲೇ ಸ್ಪಷ್ಟಪಡಿಸಿದೆ. ಕೊರೊನಾ ಸೋಂಕು ತಗುಲಿದ ಮೇಲೆ ನಾಲ್ಕೈದು ದಿನಗಳಿಂದ ಹಿಡಿದು 2 ವಾರದೊಳಗೆ ಈ ಲಕ್ಷಣಗಳು ಕಂಡು ಬರುತ್ತವೆ.